ಬೆಂಗಳೂರಿನಲ್ಲಿ 45 ವರ್ಷದ ಮಹಿಳೆಯೊಬ್ಬರು ನೆರೆಮನೆಯವನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. 

ಬೆಂಗಳೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ನೆರೆಮನೆಯವನೋರ್ವ ತನ್ನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ ಎಂದು 45 ವರ್ಷದ ಮಹಿಳೆಯೊಬ್ಬರು ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಶ್ಚಿಮ ಬೆಂಗಳೂರಿನ ಭರತ್ ನಗರದ ತನ್ನ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ನೆರೆಹೊರೆಯವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. 

ವೈದ್ಯಕೀಯ ವರದಿಯು ಬಲಾತ್ಕಾರ ಆಗದೇ ಇದ್ದರೂ ಆಕೆಯ ಮೇಲೆ ಬಲಾತ್ಕಾರ ಮಾಡಲು ಯತ್ನಿಸಲಾಗಿದೆ. ಮಹಿಳೆ ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದು, ಆಕೆಯ ಎದೆ, ಸೊಂಟ ಮತ್ತು ತೊಡೆಗಳಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಮಹಿಳೆಯ ಮಗ ಆರೋಪಿಸಿದ್ದಾರೆ. 

ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ರಾಜಕೀಯ ಪಕ್ಷದವರೊಬ್ಬರೂ ಒತ್ತಡ ಹೇರಿದ್ದರು. ಆದರೆ ಅವರು ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದರು ಹೀಗಾಗಿ ಘಟನೆ ನಡೆದ ಎರಡು ದಿನಗಳ ನಂತರ ಮೇ 10 ರಂದು ಪ್ರಕರಣ ದಾಖಲಿಸಲಾಯಿತು. ಆರೋಪಿ ಜಯರಾಮ್ (50) ಮಹಿಳೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದರೂ, ಆರಂಭದಲ್ಲಿಾತನಿಗೆ ಎಚ್ಚರಿಕೆ ನೀಡಿ ಬಿಡಲಾಯಿತು ಈ ವಿಚಾರವನ್ನು ಸ್ವತಃ ಪೊಲೀಸ್ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ. ಇದಾದ ನಂತರ ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದ ನಂತರವೇ ಬುಧವಾರ ಆರೋಪಿಯನ್ನು ತನಿಖಾಧಿಕಾರಿಯ ಮುಂದೆ ಮತ್ತೆ ಹಾಜರಾಗುವಂತೆ ತಿಳಿಸಲಾಯಿತು ಎಂದು ತಿಳಿದು ಬಂದಿದೆ.

ಮೇ 8 ರಂದು ಘಟನೆ ನಡೆದಿದೆ. ಮಹಿಳೆಯ ಮಗ ಕೆಲಸದಿಂದ ಮನೆಗೆ ಹಿಂದಿರುಗಿದಾಗ ತಾಯಿ ಎಂದಿನಂತಿಲ್ಲದೇ ಸಂಕಷ್ಟದಲ್ಲಿ ಇರುವುದು ಕಂಡುಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ, ಅದೇ ಕಟ್ಟಡದ ನಿವಾಸಿ ಜಯರಾಮ್ ಎಂಬಾತ, ತನ್ನನ್ನು ವಿವಸ್ತ್ರಗೊಳಿಸಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ ಎಂದು ಆಕೆ ಮಗನ ಬಳಿ ಹೇಳಿದ್ದಾರೆ. ಇದಾದ ನಂತರ ಮಗ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೂ ಆರೋಪಿಯನ್ನು ಬಿಟ್ಟು ಕಳುಹಿಸಲಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದ ನಂತರವಷ್ಟೇ ಕೇಸ್ ದಾಖಲಾಗಿದೆ.

ಆರೋಪಿ ವಿರುದ್ಧ ನಂತರ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮಹಿಳೆಯ ಮಗ, ನನ್ನ ತಾಯಿಯನ್ನು ನಾನು ನೋಡಿದಾಗ ಅವರು ನಡುಗುತ್ತಿದ್ದರು. ಏನಾಯ್ತು ಎಂದು ಕೇಳಿದಾಗ ಅದೇದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಹೆಂಡತಿಯೊಂದಿಗೆ ವಾಸಿಸುತ್ತಿದ್ದ ವ್ಯಕ್ತಿ ಮನೆಗೆ ಬಂದು ವಿವಸ್ತ್ರಗೊಳಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಆತ ಮಾಡಿದ ಹಲ್ಲೆಯಿಂದ ಮಹಿಳೆಯ ಎದೆ, ಸೊಂಟ ಮತ್ತು ತೊಡೆಯ ಮೇಲೆ ರಕ್ತ ಹೆಪ್ಪುಗಟ್ಟಿದೆ ಎಂದು ಮಗ ಹೇಳಿದ್ದಾರೆ. ನನ್ನ ತಾಯಿ, ಸ್ಪಷ್ಟವಾಗಿ ವಿಚಲಿತಳಾಗಿದ್ದಳು 'ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು, ಅವನು ನನ್ನನ್ನು ಕೊಲ್ಲುತ್ತಾನೆ ಎಂದು ಆಕೆ ಹೇಳುತ್ತಲೇ ಇದ್ದಳು ಎಂದು ಮಗ ಹೇಳಿದ್ದಾರೆ. 

ವರದಿಗಳ ಪ್ರಕಾರ, ಮಗ ಕೆಲಸಕ್ಕೆ ಹೋಗಿದ್ದಾಗ ಮಗನ ಹೆಂಡತಿ ತನ್ನ ತಾಯಿ ಮನೆಗೆ ಹೋಗಿದ್ದರು. ಹೀಗಾಗಿ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಳೆ ಎಂಬುದರ ಲಾಭ ಪಡೆಯಲು ಆರೋಪಿ ಮುಂದಾಗಿದ್ದಾನೆ. ಆರೋಪಿ ಮಹಿಳೆಯನ್ನು ಹಾಲ್‌ನ ಹಾಸಿಗೆಯ ಮೇಲೆ ತಳ್ಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಆರಂಭದಲ್ಲಿ ಪೊಲೀಸರು ತನ್ನ ತಾಯಿಯನ್ನು ವೈದ್ಯಕೀಯ ಪರೀಕ್ಷೆಗೂ ಕರೆದೊಯ್ಯಲಿಲ್ಲ, ಅಥವಾ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಬೆಂಬಲವಾಗಿ ಬಟ್ಟೆ ಮತ್ತು ಹಾಸಿಗೆಯನ್ನು ವಶಪಡಿಸಿಕೊಳ್ಳಲಿಲ್ಲ ಎಂದು ಮಗ ಆರೋಪಿಸಿದ್ದಾನೆ. ಇದಾದ ನಂತರ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ ನಂತರವೇ ಬ್ಯಾಡರಹಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.