Asianet Suvarna News Asianet Suvarna News

Bengaluru: ಹೃದಯ ಸಂಬಂಧಿ ಕಾಯಿಲೆಯಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಸಾಯೋ ಮುನ್ನ ಗೂಗಲ್ ಸರ್ಚ್

ನಗರದಲ್ಲಿ ಜನರು ಸೂಸೈಡ್ ಮಾಡಿಕೊಳ್ಳಲು ವಿಚಿತ್ರ ಐಡಿಯಾಗಳನ್ನು ಹುಡುಕುತ್ತಾರೆ‌. ಪ್ರತಿಷ್ಠಿತ ಸಾಫ್ಟ್‌ವೇರ್ ಇಂಜಿನಿಯರ್ ಹಾಡುಗಲಲೇ ನಡುರಸ್ತೆಯಲೇ ಕಾರಿನಲ್ಲಿ ಕುಳಿತು ಸೂಸೈಡ್ ಮಾಡಿಕೊಂಡಿದ್ದಾರೆ.

Bengaluru techie commits suicide using nitrogen after search in google gvd
Author
First Published Dec 21, 2022, 12:29 PM IST

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಡಿ.21): ನಗರದಲ್ಲಿ ಜನರು ಸೂಸೈಡ್ ಮಾಡಿಕೊಳ್ಳಲು ವಿಚಿತ್ರ ಐಡಿಯಾಗಳನ್ನು ಹುಡುಕುತ್ತಾರೆ‌. ಪ್ರತಿಷ್ಠಿತ ಸಾಫ್ಟ್‌ವೇರ್ ಇಂಜಿನಿಯರ್ ಹಾಡುಗಲಲೇ ನಡುರಸ್ತೆಯಲೇ ಕಾರಿನಲ್ಲಿ ಕುಳಿತು ಸೂಸೈಡ್ ಮಾಡಿಕೊಂಡಿದ್ದಾರೆ. ನೈಟ್ರೋಜನ್ ಪೈಪ್ ಅನ್ನ ಮೂಗಿಗೆ ಇಟ್ಟುಕೊಂಡು ಮುಖ ಕವರ್ ಸುತ್ತಿಕೊಂಡು ಸಾವನ್ನಪ್ಪಿರುವುದು ನಿಜಕ್ಕೂ ಗಾಬರಿ ತರಿಸುವಂತಿದೆ. ಮೊನ್ನೆ ಅಂದ್ರೆ 19ರ ಮಧ್ಯಾಹ್ನ ಬೆಂಗಳೂರು ನಗರದ ಕುರುಬರಹಳ್ಳಿ ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ವಿಜಯ್ ಕುಮಾರ್ (51) ಸಾವನ್ನಪ್ಪಿರುವ ಟೆಕ್ಕಿ. 

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದ ವಿಜಯ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತನ್ನ ಅನಾರೋಗ್ಯ ಸಮಸ್ಯೆ ಮನೆಯವರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ವಿಜಯ್ ಕುಮಾರ್ ನೈಟ್ರೋಜನ್ ಸಿಲಿಂಡರ್ ಖರೀದಿ ಮಾಡಿಕೊಂಡಿದ್ದರು. ಮನೆಯಲ್ಲಿ ಕಾರನ್ನು ಸರ್ವಿಸ್‌ಗೆ ಕೊಟ್ಟು ಬರುವುದಾಗಿ ಹೇಳಿದ್ದ ವಿಜಯ್ ಕುಮಾರ್, ಕುರುಬರಹಳ್ಳಿ ಜಂಕ್ಷನ್ ಬಳಿಯಲ್ಲಿ ಬರುತ್ತಿದ್ದಂತೆಯೇ ಕಾರನ್ನು ನಿಲ್ಲಿಸಿದ್ದಾರೆ. 

ಸಭಾಪತಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ, ಇಂದು ಘೋಷಣೆ

ಸಾರ್ವಜನಿಕರಲ್ಲಿ ತನಗೆ ಸುಸ್ತಾಗುತ್ತಿದೆ. ಹೀಗಾಗಿ ನಾನು ಮಲಗುತ್ತೇನೆ ಎಂದು ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ವಿಜಯ್ ಕುಮಾರ್ ಕಾರಿಗೆ ಕವರ್ ಮುಚ್ಚುವಂತೆ ಸಾರ್ವಜನಿಕರ ಬಳಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ. ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಂಡು ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ನೈಟ್ರೋಜನ್ ಗ್ಯಾಸ್ ಅನ್ನು ಬಾಯಿ ಹಾಗೂ ಮೂಗಿಗೆ ಹಾಯಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಜಯ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲಿಯೇ ವಿಜಯ ಕುಮಾರ್ ಸಾವನ್ನಪ್ಪಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ವಿಜಯಕುಮಾರ್ ಜನವರಿಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಆಪರೇಷನ್ ಕೂಡ ಮಾಡಿಸಿಕೊಂಡಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಗೂಗಲ್‌ನಲ್ಲಿ ಸಾಕಷ್ಟು ಸರ್ಚ್‌ ಮಾಡಿದ್ದಾರೆ. ಯಾವ ರೀತಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗಲಿದೆ. ಇದರಿಂದ ಕುಟುಂಬಸ್ಥರು ಯಾವ ರೀತಿಯ ತೊಂದರೆಗೆ ಒಳಗಾಗಲಿದ್ದಾರೆ ಅನ್ನೋದನ್ನೂ ಸರ್ಚ್ ಮಾಡಿದ್ದರು. 

ಇದರಿಂದಾಗಿ ಸಾಕಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಿಜಯ್ ಕುಮಾರ್ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯವರ ಬಳಿಯಲ್ಲಿಯೂ ಆಗಾಗ ಹೇಳಿಕೊಳ್ಳುತ್ತಿದ್ದರು. ಆದರೆ ಮನೆಯವರು ಸಾಕಷ್ಟು ಬಾರಿ ಸಮಾಧಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆತ್ಮಹತ್ಯೆಗೆ ಕುರಿತಂತೆ ಗೂಗಲ್ ನಲ್ಲಿ ಸಾಕಷ್ಟು ಸರ್ಚ್ ಮಾಡಿದ್ದರು ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಟೆಕ್ಕಿಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲಸದ ಒತ್ತಡ, ಅನಾರೋಗ್ಯ ಸಮಸ್ಯೆ ಇಂದು ಆತ್ಮಹತ್ಯೆಗೆ ಕಾರಣವಾಗುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.

ಸಚಿವ ನಿರಾಣಿಗೆ ಮಾತಾಡಲು ಅವಕಾಶ ಕೋರಿ ಕಾಂಗ್ರೆಸ್‌, ಜೆಡಿಎಸ್‌ ಧರಣಿ!

ಡೆತ್ ನೋಟ್ ಪತ್ತೆ: ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಬಳಿ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಹೃದಯ ನೋವು ತಡೆಯಲು ಆಗುತ್ತಿಲ್ಲ .ನಾನು ನೈಟ್ರೋಜನ್ ಬಳಸಿಕೊಂಡು ಸಾಯುತ್ತಿದ್ದೇನೆ. ಮಕ್ಕಳೇ ನನ್ನ ಬಳಿ ಬಂದು ಕಾರ್ ಓಪನ್ ಮಾಡಬೇಡಿ. ನೈಟ್ರೋಜನ್ ಬ್ಲಾಸ್ಟ್ ಆಗುತ್ತೆ. ಪೊಲೀಸರು,ಎಫ್‌ಎಸ್‌ಎಲ್  ಬಂದು ಕಾರ್ ಓಪನ್ ಮಾಡುತ್ತಾರೆ. ಮಕ್ಕಳೇ ನೀವು ಯಾರು ಕಾರ್ ಓಪನ್ ಮಾಡಬೇಡಿ ಎಂದು ಡೆತ್ ನೋಟ್‌ನಲ್ಲಿ ಟೆಕ್ಕಿ ವಿಜಯ್ ಕುಮಾರ್ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios