Asianet Suvarna News Asianet Suvarna News

ಶೌಚಾಲಯಕ್ಕೆ ತೆರಳಿದ್ದ ಯುವತಿಯ ವಿಡಿಯೋ ಮಾಡಿದ ಭೂಪ ಅಂದರ್

ಒಡಿಶಾ ಮೂಲದ ವ್ಯಕ್ತಿಯೊಬ್ಬ ಕೆಲಸ ಮಾಡಲೆಂದು ಬೆಂಗಳೂರಿಗೆ ಬಂದಿದ್ದಾನೆ. ಆದ್ರೆ ನೆಟ್ಟಗೆ ಕೆಲಸ ಮಾಡಯ್ಯಾ ಅಂದ್ರೆ ಮಾಡಬಾರ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

bengaluru restaurant employee arrests Over uses mobile to film woman in toilet
Author
Bengaluru, First Published Jan 30, 2020, 9:53 PM IST
  • Facebook
  • Twitter
  • Whatsapp

ಬೆಂಗಳೂರು,[30]: ಶೌಚಾಲಯಕ್ಕೆ ತೆರಳಿದ್ದ ಯುವತಿಯನ್ನು ಹಿಂಬಾಲಿಸಿ ವಿಡಿಯೋ ಮಾಡುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಒಡಿಶಾ ಮೂಲದ ಬುದ್ಧಕಾಂತ್ ದೇಬನಾಥ್ ಬಂಧಿತ ಆರೋಪಿ. 

ಜಮವರಿ 26ರಂದು ರಾತ್ರಿ8ರ ಸುಮಾರಿಗೆ ಯುವತಿಯೋರ್ವಳು ತನ್ನ ಸ್ನೇಹಿತರೊಂದಿಗೆ ನಗರದ ಎಂ.ಜಿ ರಸ್ತೆಯ ಪಬ್ವೊಂದಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಊಟದ ಮಧ್ಯೆಯೇ ಯುವತಿ ಮಹಿಳಾ ಶೌಚಾಲಯಕ್ಕೆ ಹೋಗಿದ್ದಾಳೆ.

ಸೀರಿಯಲ್ ನೋಡುವ ಮಹಿಳೆಯರ ಮನೆಯೇ ಈ ಕಳ್ಳನ ಟಾರ್ಗೆಟ್!

ಆಕೆಯನ್ನು ಹಿಂಬಾಲಿಸಿದ ಆರೋಪಿ ಬಾತ್ ರೂಂ ಮೇಲ್ಭಾಗದಿಂದ ಯುವತಿಯನ್ನು ಚಿತ್ರೀಕರಿಸಿದ್ದಾನೆ. ಮೊಬೈಲ್ ನ ಫ್ಲ್ಯಾಶ್‌‌‌ ಬ್ಯಾಕ್ ಆನ್ ಮಾಡಿ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಯುವತಿ ಗಾಬರಿಯಿಂದ ಹೊರಗೆ ಬಂದು ಪಬ್ ಸಿಬ್ಬಂದಿಗೆ ದೂರು ನೀಡಿದ್ದಳು. 

ಆರೋಪಿಯನ್ನು ಗುರುತಿಸಿ ಯುವತಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Follow Us:
Download App:
  • android
  • ios