ಈತ ಪೊಲೀಸಪ್ಪನ ಅಳಿಯ, ಆದ್ರೆ 20 ವರ್ಷಗಳಿಂದ ಕಳ್ಳತನವನ್ನೇ ಮಾಡಿಕೊಂಡಿದ್ದ; ಮಾವ ರಿಟೇರ್ಡ್, ಅಳಿಯ ಅರೆಸ್ಟ್!
ಪೊಲೀಸಪ್ಪನ ಮಗಳ ಗಂಡ ಖತರ್ನಾಕ್ ಕಳ್ಳ. ಈತ ಕಳೆದ 20 ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರೂ ಸಿಕ್ಕಿಕೊಳ್ಳದೇ, ಪೊಲೀಸ್ ಮಾವ ನಿವೃತ್ತಿಯಾದ ನಂತರ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.
ಬೆಂಗಳೂರು (ಮೇ 15): ಬೆಂಗಳೂರು ಪೊಲೀಸಪ್ಪನ ಮಗಳ ಗಂಡ ಖತರ್ನಾಕ್ ಕಳ್ಳ. ಈತ ಕಳೆದ 20 ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರೂ ಯಾರಿಗೂ ಸಿಕ್ಕಿ ಹಾಕಿಕೊಂಡಿರಲಿಲ್ಲ. ಆದರೆ, ಪೊಲೀಸ್ ಮಾವ ನಿವೃತ್ತಿಯಾದ ನಂತರವೂ ಕಳ್ಳತನ ಮುಂದುವರೆಸಿದ ಅಳಿಯ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 20 ವರ್ಷಗಳಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡು ಬಂದಿದ್ದ ವ್ಯಕ್ತಿ ತಾನು ಬಂಧನವಾದರೆ ಬಿಡಿಸಿಕೊಂಡು ಬರಲು ಅನುಕೂಲವಾಗುವಂತೆ ಪೊಲೀಸರ ಮಗಳನ್ನೇ ಪಟಾಯಿಸಿ ಪ್ರೀತಿಸಿ ಮದುವೆಯಾಗಿದ್ದಾನೆ. ಇವನು ಎಷ್ಟು ಚಾಲಾಕಿಯಾಗಿದ್ದಾನೆಂದರೆ ಕಳ್ಳತನದ ಬಗ್ಗೆ ಮಾವನಿಗೆ ಮಾತ್ರವಲ್ಲ, ಕಳ್ಳತನ ಮಾಡಿದ ಸ್ಥಳದಲ್ಲಿ ತನ್ನ ಬಗ್ಗೆ ಯಾವುದೇ ಪೊಲೀಸರಿಗೂ ಒಂದು ಸುಳಿವೂ ಸಿಗದಂತೆ ಯಾಮಾರಿಸುತ್ತಿದ್ದನು. ಈಗ ಅದೃಷ್ಟ ಕೆಟ್ಟು ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನಲ್ಲಿ ನಿವೃತ್ತ ಪೊಲೀಸ್ ಅಳಿಯ ಬಂಧನವಾಗಿದೆ. ಸಿಸಿಬಿ ಪೊಲೀಸರಿಂದ ಚಾಲಾಕಿ ಕಳ್ಳ ಪ್ರಕಾಶ್ ಅಲಿಯಾಸ್ ಬಾಲಾಜಿಯನ್ನು ಮನೆಗಳ್ಳತನ ಆರೋಪದಲ್ಲಿ ಬಂಧಿಸಲಾಗುದೆ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳ, ರಾತ್ರಿಯ ವೇಳೆ ಮನೆಯ ಮುಂದೆ ಹೋಗಿ ಸ್ಥಳದಲ್ಲಿಯೇ ನಕಲಿ ತಯಾರಿಸಿ, ಬಾಗಿಲು ತೆರೆದು ಮನೆಯೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದನು. ಈ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಕಮಿಷನರ್ ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿಸಿದೆ.
ಹುಬ್ಬಳ್ಳಿ ನೇಹಾ ಮರ್ಡರ್ ಮಾದರಿಯಲ್ಲೇ, ಅಂಜಲಿಗೂ ಚಾಕು ಚುಚ್ಚಿ ಕೊಲೆಗೈದ ಪಾಗಲ್ ಪ್ರೇಮಿ!
ಪೊಲೀಸರು ಬಂಧಿಸಿದ ಆರೋಪಿ ಪ್ರಕಾಶ್‌ನಿಂದ 27 ಲಕ್ಷ ರೂ. ಮೌಲ್ಯದ 422 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಪ್ರಕಾಶ್ ಅಲಿಯಾಸ್ ಬಾಲಾಜಿ ಕಳೆದ 20 ವರ್ಷದಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದನು. ಈತ ಬೆಂಗಳೂರಿನ ವಿವಿಧ ಪ್ರದೇಶಗಳಾದ ಬಂಡೆಪಾಳ್ಯ, ಹುಳಿಮಾವು, ಚಂದ್ರಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಯ 57 ಕಳ್ಳತನದ ಕೇಸ್‌ಗಳಲ್ಲಿ ಭಾಗಿಯಾಗಿದ್ದಾನೆ. ಈಗಾಗಲೇ ಒಂದು ಬಾರಿ ಕಳ್ಳತನದ ಕೇಸಿನಲ್ಲಿ ಆರೋಪಿ ಪ್ರಕಾಶ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿತಿರಲಿಲ್ಲ. ದುಡಿದು ತಿನ್ನಲು ಬೇರೆ ಕಸುಬುಗಳನ್ನು ಮಾಡಲೊಪ್ಪದೇ ಪುನಃ ಕಳ್ಳತನ ವೃತ್ತಿಯನ್ನೇ ಮುಂದುವರೆಸಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
4 ವರ್ಷ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ, 4 ತಿಂಗಳೂ ಸಂಸಾರ ಸಾಗಿಸದೇ ಆತ್ಮಹತ್ಯೆಗೆ ಶರಣು
ಆರೋಪಿ ಪ್ರಕಾಶ್ ಎಷ್ಟು ಚಾಲಾಕಿ ಆಗಿದ್ದನೆಂದರೆ, ತಾನು ಕಳ್ಳತನ ಮಾಡಿ ಒಂದು ವೇಳೆ ಸಿಕ್ಕಿ ಹಾಕಿಕೊಂಡರೂ ಜೈಲಿನಿಂದ ಹೊರಗೆ ಬರಲು ಅನುಕೂಲವಾಗಲಿ ಎಂದು ಸ್ಥಳೀಯ ಪೊಲೀಸ್ ಕಾನ್ಸ್‌ಸ್ಟೇಬಲ್ ಮಗಳನ್ನೇ ಪ್ರೀತಿಸಿ ಮದುವೆ ಮಾಡಿಕೊಂಡಿದ್ದನು. ಇತ್ತೀಚೆಗೆ ಅವರ ಮಾವ ಪೊಲೀಸ್ ವೃತ್ತಿಯಿಂದ ನಿವೃತ್ತಿಯನ್ನೂ ಹೊಂದಿದ್ದಾರೆ. ಆದರೆ, ಪೊಲೀಸಪ್ಪನ ಅಳಿಯ ಪ್ರಕಾಶ ಮಾತ್ರ ಕಳ್ಳತನದ ವೃತ್ತಿಯನ್ನೇ ಮುಂದುವರೆಸಿದ್ದನು. ಈತದ ಅದೃಷ್ಟ ಕೈಕೊಟ್ಟಿತ್ತು ಎನಿಸುತ್ತದೆ. ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದಲ್ಲಿ 69 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿತ್ತು. ಇದರ ಜಾಡು ಹಿಡಿದು ಕಳ್ಳನನ್ನು ಹುಡುಕುತ್ತಾ ಹೊರಟ ಪೊಲೀಸರಿಗೆ ಈಗ ಪೊಲೀಸಪ್ಪನ ಅಳಿಯ ಸಿಕ್ಕಿಬಿದ್ದಿದ್ದಾನೆ.