Asianet Suvarna News Asianet Suvarna News

ಬಂದ್ ವೇಳೆ ಬೆಂಗಳೂರು ಪೊಲೀಸ್ ವಾಕಿ-ಟಾಕಿ ಕಳ್ಳತನ.. ಮುಂದೇನು?

* ಪೊಲೀಸ್ ಇನ್ಸ್‌ಪೆಕ್ಟರ್ ವಾಕಿಟಾಕಿ ಕಳ್ಳತನ

* ಭಾರತ್ ಬಂದ್ ವೇಳೆ ಟೌನ್ ಹಾಲ್ ಮುಂಭಾಗ ನಡೆದ ಘಟನೆ

* ಸೆಪ್ಟೆಂಬರ್ 27 ರಂದು ಸೋಮವಾರ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್

* ಈ ವೇಳೆ ಟೌನ್ ಹಾಲ್ ಬಳಿ ರೈತರಿಂದ ಪ್ರತಿಭಟನಾ ಜಾಥಾ

Bengaluru Policeman s walkie-talkie goes missing mah
Author
Bengaluru, First Published Oct 3, 2021, 4:51 PM IST
  • Facebook
  • Twitter
  • Whatsapp

ಬೆಂಗಳೂರು(ಅ. 03)   ಇದೊಂದು ವಿಚಿತ್ರ ಪ್ರಕರಣ ಎಫ್ಐಆರ್ ದಾಖಲಾಗಿದೆ.  ಪೊಲೀಸ್ ಇನ್ಸ್‌ಪೆಕ್ಟರ್ ವಾಕಿಟಾಕಿ ಕಳ್ಳತನವಾಗಿದ್ದು ದೂರು ದಾಖಲಾಗಿದೆ.

ಭಾರತ್ ಬಂದ್ ವೇಳೆ ಟೌನ್ ಹಾಲ್ ಮುಂಭಾಗ ವಾಕಿಟಾಕಿ ಕಳ್ಳತನವಾಗಿತ್ತು. ಸಪ್ಟೆಂಬರ್ 27 ರಂದು ಸೋಮವಾರ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. 

ಈ ವೇಳೆ ಟೌನ್ ಹಾಲ್ ಬಳಿ ರೈತರಿಂದ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು. ಟೌನ್ ಹಾಲ್ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ  ಎಸ್ ಜೆ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ  ಶಿವಕುಮಾರ್ ಬಳಿಯಿದ್ದ ಎಲೆಕ್ಟ್ರಾನಿಕ್‌ ವಾಕಿಟಾಕಿ ಮಿಸ್ಸಿಂಗ್ ಆಗಿದೆ.

ಮಾಯಾಂಗನೆ ಮೋಹಕ್ಕೆ ಸಿಲುಕಿ ಮಾಹಿತಿ ಸೋರಿಕೆ ಮಾಡ್ತಿದ್ದ

ಟೌನ್ ಹಾಲ್ ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ರಸ್ತೆ ತಡೆಗೆ ಮುಂದಾಗಿದ್ದ ವೇಳೆ ಗುಂಪುನ್ನ ತಡೆಯಲು ಪೊಲೀಸರು ಯತ್ನಿಸಿದ್ದದ್ದರು. ಈ ವೇಳೆ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಲು ಬೆಲ್ಟ್ ಗೆ ಸಿಕ್ಕಿಸಿದ‌ ವಾಕಿಟಾಕಿ ಹುಡುಕಿದಾಗ ಮಿಸ್ಸಿಂಗ್ ಆಗಿರುವುದು ಗೊತ್ತಾಗಿದೆ.

ಪತ್ರಿಭಟನೆ ಬಳಿಕ ವಾಕಿಟಾಕಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎಲ್ಲೂ ವಾಕಿಟಾಕಿ ಪತ್ತೆಯಾಗದ ಹಿನ್ನಲೆಯಲ್ಲಿ ದೂರು ನೀಡಲಾಗಿದೆ. ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ  ಇನ್ಸ್‌ಪೆಕ್ಟರ್ ಶಿವಕುಮಾರ್ ದೂರು ಸಲ್ಲಿಸಿದ್ದಾರೆ. 

 

 

Follow Us:
Download App:
  • android
  • ios