Asianet Suvarna News Asianet Suvarna News

ಮುರುಘಾ ಶ್ರೀಗಳ ವಿರುದ್ಧದ ಪತ್ರ ವೈರಲ್:ಸ್ವಾಮೀಜಿ ಬಳಿ ಹೆಲಿಕಾಪ್ಟರ್ ಇದೆಯೇ?

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು  ಫೋಕ್ಸೋ ಕಾಯ್ದೆ ಅಡಿಯಲ್ಲಿ ಜೈಲುಪಾಗಿದ್ದಾರೆ. ಮತ್ತೊಂದೆಡೆ ಮಠದ ಪತ್ರವೊಂದು ಫುಲ್ ವೈರಲ್ ಆಗಿದೆ.

Letter Goes Viral against Chitradurga Muruga Mutt Seer rbj
Author
First Published Sep 15, 2022, 4:36 PM IST

ಚಿತ್ರದುರ್ಗ, (ಸೆಪ್ಟೆಂಬರ್.15): ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಚಿತ್ರದುರ್ಗದ 
ಮುರುಘಾ ಶರಣು ಜೈಲುಪಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ನೀರವ ಮೌನ ಆವರಿಸಿದೆ. ಅಲ್ಲದೇ ಮಠದಲ್ಲಿ ಒಂದಿಲ್ಲೊಂದು ಬೆಳವವಣಿಗೆಗಳು ನಡೆಯುತ್ತಲೇ ಇವೆ. 

ಹೌದು..ಮಠದ ಹಾಸ್ಟೆಲ್‌ನಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಇಂದು (ಸೆಪ್ಟೆಂಬರ್.15) ಮಾಹಿತಿ ಹೊರಬಿದ್ದಿದೆ,ಇದರ ಮಧ್ಯೆ ಮುರುಘಾ ಮಠದ ಎಸ್‌ಜೆಎಂ ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನಲ್ಲಿ ಪತ್ರವೊಂದು ವೈರಲ್ ಆಗಿದೆ. ಶಿವಮೂರ್ತಿ ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿದ್ದು, ಶ್ರೀಗಳನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಪತ್ರದಲ್ಲಿ ಆಗ್ರಹಿಸಲಾಗಿದೆ. ಅಲ್ಲದೇ ಮಠ ಹಾಗೂ ಸಂಸ್ಥೆಗಳಲ್ಲಿನ ಮುರುಘಾಶ್ರೀ ಭಾವಚಿತ್ರ ತೆರವಿಗೆ ಒತ್ತಾಯಿಸಲಾಗಿದೆ. 

ಮುರುಘಾ ಶ್ರೀ ಪ್ರಕರಣದಲ್ಲಿ ಬಿಜೆಪಿ ಶಾಸಕ ಎಂಟ್ರಿ, ಹೈಕೋರ್ಟ್‌ ಜಡ್ಜ್‌ಗೆ ಬರೆಯುವೆ ಎಂದ ಯತ್ನಾಳ್!

ಮಠದ ಆಡಳಿತದಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಶರಣ ಸಂಸ್ಕೃತಿ ಉತ್ಸವ ಹೆಸರಲ್ಲಿ ಸಿಬ್ಬಂದಿಯಿಂದ ಹಣ ವಸೂಲಿ ಮಾಡಲಾಗಿದ್ದು, ಹಾಗೆ ಮಾಡಿರುವ ಹಣವನ್ನು ಸಿಬ್ಬಂದಿಗೆ ವಾಪಸ್ ನೀಡಬೇಕು. ಶ್ರೀಗಳು ಹೆಲಿಕಾಪ್ಟರ್ ಖರೀದಿ ಮಾಡಿದ ಮಾಹಿತಿ ಇದೆ. ಹಾಗೇ ಐಷಾರಾಮಿ ಕಾರುಗಳನ್ನು ಮಾರಿ ಮಠದ ಅಭಿವೃದ್ಧಿಗೆ ಬಳಸಿ. ಶ್ರೀಗಳ ಆಪ್ತರನ್ನು ಮಠದಲ್ಲಿನ ಹುದ್ದೆಗಳಿಂದ ಮುಕ್ತಿಗೊಳಿಸಿ ಹೀಗೆ ಪತ್ರದಲ್ಲಿ 15 ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಪತ್ರ ಮಠದ SJM ವಿದ್ಯಾಸಂಸ್ಥೆ ಸಿಬ್ಬಂದಿ ಹೆಸರಿನಲ್ಲಿ ವೈರಲ್ ಆಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಬಗ್ಗೆ ಮಠದ ಆಡಳಿತ ಮಂಡಳಿ ಯಾವುದೇ ರೀತಿ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಕೊಟ್ಟಿಲ್ಲ. 

 ಸಂತ್ರಸ್ತೆಯರ ಪರ ವಕೀಲರಿಂದ ಗಂಭೀರ ಆರೋಪ 
ಇನ್ನು ಸಂತ್ರಸ್ತೆ ವಿದ್ಯಾರ್ಥಿನಿಯರ ಭೇಟಿ ಮಾಡಲು ವಕೀಲರಿಗೆ ನಿರಾಕರಿಸಲಾಗಿದೆ ಎಂದು ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತೆಯರ ಭೇಟಿಗೆ ಕೋರ್ಟ್ ಅನುಮತಿಯಿದ್ದರೂ ಅನುಮತಿ ನೀಡುತ್ತಿಲ್ಲ. ಬಾಲಕಿಯರಿಗೆ ಕೋಪ ಹೆಚ್ಚಿದೆ, ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಬಿಂಬಿಸಿ, ವಿದ್ಯಾರ್ಥಿನಿಯರನ್ನು ನಿಮ್ಹಾನ್ಸ್‌ ದಾಖಲಿಸಿ ಪ್ರಕರಣಕ್ಕೆ ಟ್ವಿಸ್ಟ್ ನೀಡುವ ಹುನ್ನಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ.

ಚಿತ್ರದುರ್ಗದ CWC ಕಾಣದ ಕೈಗಳ ಒತ್ತಡಕ್ಕೆ ಮಣಿಯುತ್ತಿದೆ. ಸಿಡಬ್ಲ್ಯುಸಿ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ. ಸಂತ್ರಸ್ತೆಯರಿಗೆ ಸಮರ್ಪಕ ಆಹಾರವನ್ನೂ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಸಂತ್ರಸ್ತೆಯರ ಪೋಷಕರು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಚಿತ್ರದುರ್ಗದಲ್ಲಿ ಮಾದ್ಯಮಗಳ ಮುಂದೆ ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಅಸಮಾಧಾನ ಹೊರಹಾಕಿದರು.

Follow Us:
Download App:
  • android
  • ios