ಮುಂಬೈ(ಆ.11): ಆಯುರ್ವೇದ ಔಷಧದ ಸೋಗಿನಲ್ಲಿ ಕಳ್ಳ ಸಾಗಣೆ ಮಾಡಲಾಗುತ್ತಿದ್ದ ಬರೋಬ್ಬರಿ 1000 ಕೋಟಿ ರು. ಮೌಲ್ಯದ ಮಾದಕ ವಸ್ತುವನ್ನು ಮುಂಬೈನ ಕಸ್ಟಮ್ಸ್‌ ಹಾಗೂ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸ್ವಪ್ನಾ ಸುರೇಶ್, ಮತ್ತೊಂದು ಶಾಕಿಂಗ್ ಮಾಹಿತಿ ಬಯಲು!

ಮುಂಬೈನ ನವಾ ಪೋರ್ಟ್‌ ಟ್ರಸ್ಟ್‌ನ ಕಾರ್ಗೋ ಕಂಟೇನರ್‌ನಿಂದ 191 ಕೆ.ಜಿ. ತೂಕದ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ. ಈ ಮಾದಕ ವಸ್ತುವನ್ನು ಆಯುರ್ವೇದ ಔಷಧ ಎಂದು ಶನಿವಾರ ಆಷ್ಘಾನಿಸ್ತಾನದಿಂದ ತರಲಾಗಿತ್ತು ಎಂದು ಹೇಳಲಾಗಿದೆ.

ಸೀಮಾಸುಂಕ ವಿಭಾಗದ ಮೂಲಕ ಇದನ್ನು ಹೊರತರಲು ಯತ್ನಿಸಿದ ಇಬ್ಬರು ಏಜೆಂಟ್‌ಗಳನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯ 14 ದಿನಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಕೇರಳ ಸಿಎಂ ಜತೆ 'ಸಂಪರ್ಕ' ಒಪ್ಪಿಕೊಂಡ ಸ್ವಪ್ನಾ ಸುರೇಶ್

ವಶಪಡಿಸಿಕೊಳ್ಳಲಾದ ಮಾದಕ ವಸ್ತು ಉತ್ಕೃಷ್ಟಗುಣಮಟ್ಟದ್ದು ಎಂದು ಹೇಳಲಾಗಿದೆ. ಬಿದಿರಿನ ರೀತಿಯ ಬಣ್ಣ ಹೊಂದಿದ್ದ ಪ್ಲಾಸ್ಟಿಕ್‌ ಪೈಪ್‌ಗಳಲ್ಲಿ ಹೆರಾಯಿನ್‌ ಅಡಗಿಸಿಟ್ಟು, ಅದು ಸಾಂಪ್ರದಾಯಿಕ ಔಷಧ ಎಂದು ಸಾಗಿಸುವ ಪ್ರಯತ್ನ ನಡೆದಿತ್ತು. ಈ ಸಾಗಣೆಯ ಮೂಲ ಎಲ್ಲಿದೆ, ಈ ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು? ಈ ಮೊದಲೂ ಇದೇ ರೀತಿ ಸಾಗಣೆ ನಡೆದಿತ್ತಾ ಎಂಬ ಕುರಿತು ತನಿಖೆ ನಡೆಯುತ್ತಿದೆ.