ವಯಸ್ಸಾದ ತಂದೆ ತಾಯಿ ನೋಡಿಕೊಳ್ಳಲು ಕೇರ್ ಟೇಕರ್ ಗಳನ್ನ ನೇಮಿಸೋರೆ ಎಚ್ಚರ. ಒಳ್ಳೆಯವನು ಅಂತ ನಿಮ್ ಅಕೌಂಟ್ ಡೀಟೇಲ್ಸ್ ಪೋನ್ ಕೊಟ್ರೆ ಅಕೌಂಟ್ ನಲ್ಲಿನ ಹಣ ಖಾಲಿ ಮಾಡ್ತಾರೆ. ಬೆಂಗಳೂರಿನಲ್ಲಿ ವಂಚಕ ಕೇರ್ ಟೇಕರ್ ನನ್ನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.16): ವಯಸ್ಸಾದ ತಂದೆ ತಾಯಿ ನೋಡಿಕೊಳ್ಳಲು ಕೇರ್ ಟೇಕರ್ ಗಳನ್ನ ನೇಮಿಸೋರೆ ಎಚ್ಚರ. ಕೇರ್ ಟೇಕರ್ ಗಳ ನೆಪದಲ್ಲಿ ಬರ್ತಾರೆ. ನಂಬಿಕೆ ಗಳಿಸಿ ಟೋಪಿ ಹಾಕ್ತಾರೆ. ಒಳ್ಳೆಯವನು ಅಂತ ನಿಮ್ ಅಕೌಂಟ್ ಡೀಟೇಲ್ಸ್ ಪೋನ್ ಕೊಟ್ರೆ ಅಕೌಂಟ್ ನಲ್ಲಿನ ಹಣ ಖಾಲಿ ಮಾಡ್ತಾರೆ. ಬೆಂಗಳೂರಿನಲ್ಲಿ ವಂಚಕ ಕೇರ್ ಟೇಕರ್ ನನ್ನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪರಮೇಶ್ ಎಂದು ಗುರುತಿಸಲಾಗಿದೆ. ಪರಮೇಶ್ ಕೋರಮಂಗಲದ ಅನಿಲ್ ಡಿಸೋಜಾ ಮನೆಗೆ ಕೇರ್ ಟೇಕರ್ ಆಗಿ ಬಂದಿದ್ದ. ಪಾರ್ಶ್ವಾಯುವಿನಿಂದ ಬಳಲುತಿದ್ದ ಅನಿಲ್ ಡಿಸೋಜಾ ಅವರ ತಂದೆ ಅಂಟೊನಿ ಡಿಸೋಜಾ ಅವರನ್ನು ನೋಡಿಕೊಳ್ಳಲು ಕೇರ್ ಟೇಕರ್ ನನ್ನ ನೇಮಿಸಲಾಗಿತ್ತು.

ತಂದೆಯನ್ನು ನೋಡಿಕೊಳ್ಳಲು ಕೇರ್ ಟೇಕರ್ ಬೇಕೆಂದು ಜಯನಗರದ ಸುಮುಖ ನರ್ಸಿಂಗ್ ಸೆಂಟರನ್ನ ಅನಿಲ್ ಸಂಪರ್ಕಿಸಿದ್ದರು. ಈ ವೇಳೆ ಸುಮುಖ ನರ್ಸಿಂಗ್ ಸೆಂಟರ್ ನ ನಾರಾಯಣಸ್ವಾಮಿ ಕೇರ್ ಟೇಕರ್ ಪರಮೇಶ್ ನನ್ನ ಕಳುಹಿಸಿಕೊಟ್ಟಿದ್ರು. ಆದ್ರೆ ಮನೆಗೆ ಬಂದ ಪರಮೇಶ್ ನಂಬಿಕೆ ಗಳಿಸಿ ವಂಚನೆ ಮಾಡಿದ್ದ. ಅನಿಲ್ ತಂದೆ ಹಾಗೂ ತಾಯಿಯ ಪೋನ್ ಪೇ ಡೀಟೇಲ್ಸ್ ಪಡೆದಿದ್ದ ಪರಮೇಶ್ ನಂತರ ಹಂತ ಹಂತವಾಗಿ ಇಬ್ಬರ ಅಕೌಂಟ್ನಿಂದ 5 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಮಾಡಿಕೊಂಡಿದ್ದ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಗೆ ಅನಿಲ್ ಡಿಸೋಜ ದೂರು ನೀಡಿದ್ದರು. ಪ್ರಕರಣ ದಾಖಲಿಸಿಸಿಕೊಂಡ ಕೋರಮಂಗಲ ಪೊಲೀಸರು ಆರೋಪಿ ಪರಮೇಶ್‌ ನನ್ನು ಬಂಧಿಸಿದ್ದಾರೆ.

ಬ್ಯಾಂಕ್‌ ಲಾಕರಲ್ಲಿದ್ದ ಅರ್ಧ ಕೇಜಿ ಚಿನ್ನ ಮಾಯ!
ಬ್ಯಾಂಕ್‌ ಲಾಕರ್‌ನಲ್ಲಿ ಇಡಲಾಗಿದ್ದ ಗ್ರಾಹಕರೊಬ್ಬರ ಅರ್ಧ ಕೆ.ಜಿ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕ ಉಪನಗರದ ಮದರ್‌ ಡೈರಿ ರಸ್ತೆಯ ಬ್ಯಾಂಕೊಂದರ ಶಾಖೆಯ ಲಾಕರ್‌ನಲ್ಲಿ ಚಿನ್ನ ನಾಪತ್ತೆಯಾಗಿದ್ದು, ಈ ಸಂಬಂಧ ಬ್ಯಾಂಕ್‌ ಗ್ರಾಹಕ ಬಿ.ಎನ್‌.ಕೃಷ್ಣಕುಮಾರ್‌ ನೀಡಿದ ದೂರಿನ ಮೇರೆಗೆ ಬ್ಯಾಂಕ್‌ ಅಧಿಕಾರಿಗಳಾದ ಪ್ರದೀಪ್‌, ಸೌಮ್ಯಾ ಮತ್ತು ನಲನ್‌ ವಿರುದ್ಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ನಲ್ಲಿ ಕೃಷ್ಣಕುಮಾರ್‌ ಮತ್ತು ಅವರ ಪುತ್ರ ಬಿ.ಕೆ.ಶ್ರೀಹರ್ಷ ಜಂಟಿ ಖಾತೆ ಹೊಂದಿದ್ದಾರೆ. ಮೂರೂವರೆ ವರ್ಷದಿಂದ ಜರ್ಮನಿಯಲ್ಲಿ ಶ್ರೀ ಹರ್ಷ ನೆಲೆಸಿದ್ದಾರೆ. ಹೀಗಾಗಿ 2020ರ ಜೂ.17ರಂದು ಬ್ಯಾಂಕ್‌ನಲ್ಲಿ ಸೇಫ್‌ ಲಾಕರ್‌ ತೆರೆದಿದ್ದರು. ಬ್ಯಾಂಕ್‌ ಖಾತೆಯನ್ನು ಅವರ ತಂದೆ ಕೃಷ್ಣಕುಮಾರ್‌ ನಿರ್ವಹಿಸುತ್ತಿದ್ದರು. ಸುರಕ್ಷತೆಗಾಗಿ ಸೇಫ್‌ ಲಾಕರ್‌ನಲ್ಲಿ 580 ಗ್ರಾಂ ಚಿನ್ನಾಭರಣವನ್ನು ಕೃಷ್ಣಕುಮಾರ್‌ ಇಟ್ಟಿದ್ದರು. ಆಗಾಗ ಈ ಆಭರಣಗಳನ್ನು ತೆಗೆದುಕೊಂಡು ಬಳಿಕ ಮತ್ತೆ ಲಾಕರ್‌ನಲ್ಲೇ ಇಡುತ್ತಿದ್ದರು.

Chikkamagaluru: ಸರಕಾರಿ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿ, 

ಕಳೆದ ಮೇ ತಿಂಗಳ ಕೊನೆ ವಾರದಲ್ಲಿ ಆಭರಣವನ್ನು ಮನೆಗೆ ತಂದಿದ್ದ ಅವರು, ಮತ್ತೆ ಜೂನ್‌ 8ಕ್ಕೆ ಮತ್ತೆ ಕೋಡೆಡ್‌ ಬಾಕ್ಸ್‌ನಲ್ಲಿ ಚಿನ್ನಾಭರಣವಿಟ್ಟು ಬ್ಯಾಂಕ್‌ಗೆ ಹೋಗಿ ನೌಕರರ ಸಮ್ಮುಖದಲ್ಲಿ ಸೇಫ್‌ ಲಾಕರ್‌ನಲ್ಲಿಟ್ಟು ಮರಳಿದ್ದರು. ಇದಾದ ನಂತರ ಜರ್ಮನಿಯಲ್ಲಿರುವ ಪುತ್ರನ ಬಳಿ ಹೋಗಿದ್ದರು. ಕೆಲ ದಿನಗಳ ಬಳಿಕ ಬೆಂಗಳೂರಿಗೆ ಮರಳಿದ ಕೃಷ್ಣಕುಮಾರ, ನವೆಂಬರ್‌ 10 ರಂದು ಸೇಫ್‌ ಲಾಕರ್‌ನಲ್ಲಿದ್ದ ಆಭರಣವನ್ನು ತೆಗೆದುಕೊಂಡು ಬರಲು ಬ್ಯಾಂಕ್‌ಗೆ ತೆರಳಿದ್ದರು. ಆಗ ಬ್ಯಾಂಕ್‌ ಉದ್ಯೋಗಿ ಸೌಮ್ಯ ಸಮ್ಮುಖದಲ್ಲೇ ಅವರು ಲಾಕರ್‌ ತೆರೆದಾಗ ಆಭರಣವಿದ್ದ ಬಾಕ್ಸ್‌ ಕಾಣೆಯಾಗಿತ್ತು. ಕೂಡಲೇ ಬ್ಯಾಂಕ್‌ ವ್ಯವಸ್ಥಾಪಕರಿಗೆ ಗ್ರಾಹಕರು ದೂರು ಸಲ್ಲಿಸಿದ್ದರು.

ಪೊಲೀಸ್ ಕೆಲಸ ಗಿಟ್ಟಿಸಿಕೊಳ್ಳಲು ತಲೆಗೆ M-SEAL ಅಂಟಿಸಿದ ನಾರಿ

ಈ ಬಗ್ಗೆ ಪರಿಶೀಲಿಸಲು ಮೂರು ದಿನಗಳು ಸಮಯವನ್ನು ಅಧಿಕಾರಿಗಳು ಕೇಳಿದ್ದರು. ಈ ಮಾತಿಗೆ ಒಪ್ಪಿದ ಅವರು, ಮೂರು ದಿನಗಳ ಬಳಿಕ ತೆರಳಿದಾಗ ಚಿನ್ನದ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಸರಿಯಾದ ಉತ್ತರ ನೀಡಿಲ್ಲ. ಕೊನೆಗೆ ಯಲಹಂಕ ಉಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.