Asianet Suvarna News Asianet Suvarna News

ಪೊಲೀಸ್ ಕೆಲಸ ಗಿಟ್ಟಿಸಿಕೊಳ್ಳಲು ತಲೆಗೆ M-seal ಅಂಟಿಸಿದ ನಾರಿ

ಪೊಲೀಸ್ ಇಲಾಖೆಗೆ ಬೇಕಾದ ಕನಿಷ್ಠ ಎತ್ತರಕ್ಕಿಂತ ತುಸು ಕಡಿಮೆ ಎತ್ತರ ಹೊಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರೂ ಹೇಗಾದರೂ ಸರಿ ಪೊಲೀಸ್ ಇಲಾಖೆ ಸೇರಲೇಬೇಕು ಎಂಬ ಮಹದಾಸೆಯಿಂದ ದೊಡ್ಡ ಕಿತಾಪತಿ ಮಾಡಿದ್ದಾಳೆ. ಇದು ತಪಾಸಣೆ ವೇಳೆ ಬಯಲಾಗಿದ್ದು, ಆಕೆಯನ್ನು ಪೊಲೀಸ್ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.

lady candidate put M seal on head to get job in Police department Telangana akb
Author
First Published Dec 16, 2022, 9:46 PM IST

ಹೈದರಾಬಾದ್: ಸೇನೆ, ಪೊಲೀಸ್ ಇಲಾಖೆ ಸೇರಲು ದೈಹಿಕ ಪರೀಕ್ಷೆ ಪ್ರಮುಖವಾದುದು. ದೈಹಿಕ ಪರೀಕ್ಷೆಯಲ್ಲಿ ಪಾಸಾಗಲು ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ಕನಿಷ್ಠ ಎತ್ತರ, ಕನಿಷ್ಠ ತೂಕ ಹೊಂದಿರಲೇಬೇಕು. ಇಲ್ಲದಿದ್ದರೆ ಲಿಖಿತ ಪರೀಕ್ಷೆಯಲ್ಲಿ ಪಾಸಾದರೂ ಕೂಡ ಪೊಲೀಸ್ ಇಲಾಖೆ ಸೇರಲಾಗದು. ಪೊಲೀಸ್ ಇಲಾಖೆಗೆ ಬೇಕಾದ ಕನಿಷ್ಠ ಎತ್ತರಕ್ಕಿಂತ ತುಸು ಕಡಿಮೆ ಎತ್ತರ ಹೊಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರೂ ಹೇಗಾದರೂ ಸರಿ ಪೊಲೀಸ್ ಇಲಾಖೆ ಸೇರಲೇಬೇಕು ಎಂಬ ಮಹದಾಸೆಯಿಂದ ದೊಡ್ಡ ಕಿತಾಪತಿ ಮಾಡಿದ್ದಾಳೆ. ಇದು ತಪಾಸಣೆ ವೇಳೆ ಬಯಲಾಗಿದ್ದು, ಆಕೆಯನ್ನು ಪೊಲೀಸ್ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ. ಹಾಗಿದ್ದರೆ ಆಕೆ ಮಾಡಿದ್ದೇನು? ಇಲ್ಲಿದೆ ಒಂದು ವರದಿ.

ತೆಲಂಗಾಣದ ಪೊಲೀಸ್ ಇಲಾಖೆ ಸೇರುವ ಮಹಾದಾಸೆ ಹೊಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಪೊಲೀಸ್ ದೈಹಿಕ ಪರೀಕ್ಷೆಯಲ್ಲಿ ಪಾಸಾಗಲು ಕನಿಷ್ಠ ಎತ್ತರವನ್ನು ಪಡೆಯುವ ಸಲುವಾಗಿ ಕಾಣಲು ತಲೆಗೆ ಎಂಸೀಲ್ ಅಂಟಿಸಿದ್ದಾಳೆ. ದೈಹಿಕ ಪರೀಕ್ಷೆ ವೇಳೆ ಎತ್ತರ ಅಳೆಯುವ ವೇಳೆ ಮೇಲಾಧಿಕಾರಿಗಳಿಗೆ ಇದು ಗಮನಕ್ಕೆ ಬಂದಿದ್ದು, ಆಕೆಯನ್ನು ಪರೀಕ್ಷೆಯಿಂದಲೇ ಅನರ್ಹಗೊಳಿಸಿದ್ದಾರೆ.  ಪ್ರಸ್ತುತ ತೆಲಂಗಾಣದಲ್ಲಿ ಪೊಲೀಸ್ ಇಲಾಖೆಗೆ ಬೇಕಾದ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ಪರೀಕ್ಷೆಗೆ ಬಂದ ಮಹಿಳಾ ಅಭ್ಯರ್ಥಿಯೊಬ್ಬರು ಎತ್ತರ ಹೆಚ್ಚು ಕಾಣಲು ತಲೆಗೆ ಎಂಸೀಲ್ ಅಂಟಿಸಿದ್ದಾರೆ. ಇದು ಎತ್ತರ ಮಾಪನ ವೇಳೆ ಬಯಲಾಗಿದೆ. ತೆಲಂಗಾಣದ ಮೆಹಬೂಬ್ ನಗರದಲ್ಲಿ ಡಿಸೆಂಬರ್ 14 ರಂದು ನಡೆದ ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ. 

ಪೇದೆಗಳ ವಯೋಮಿತಿ ಹೆಚ್ಚಳಕ್ಕಾಗಿ ಸಚಿವ ಆರಗ ಕಾಲಿಗೆ ಬಿದ್ದು ಕಣ್ಣೀರು


ಮೆಹಬೂಬ್ ನಗರ ಪೊಲೀಸರ ಪ್ರಕಾರ, ಮಹಿಳೆ ಎತ್ತರ ಅಳತೆ ಮಾಡುವ ಇಲೆಕ್ಟ್ರಾನಿಕ್ ಮೆಷಿನ್ ಮೇಲೆ ನಿಂತಾಗ ಪ್ರಕರಣ ಬೆಳಕಿಗೆ ಬಂದಿದೆ. ಇಲೆಕ್ಟ್ರಾನಿಕ್ ಮೆಷಿನ್‌ನಲ್ಲಿ ಆಕೆಯ ಎತ್ತರ ಡಿಸ್‌ಪ್ಲೇ ಆಗದೇ ಇದ್ದಾಗ ಅನುಮಾನಗೊಂಡ ಅಧಿಕಾರಿಗಳು ಆಕೆಯ ತಲೆಯನ್ನು ತಪಾಸಣೆ ಮಾಡಿದಾಗ ಆಕೆ ಕೂದಲಡಿಯಲ್ಲಿ ಎಂಸಿಲ್ (M-Seal) ಅಡಗಿಸಿರುವುದು ಗಮನಕ್ಕೆ ಬಂದಿದೆ.  ಮೆಹಾಬೂಬ್ ನಗರ (Mahabubnagar) ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆರ್ ವೆಂಕಟೇಶ್ವರಲು ( R Venkateshwarlu) ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಅಭ್ಯರ್ಥಿಗಳ ತಲೆ ಹಾಗೂ ಕಾಲಿನ ಭಾಗ ಇಲೆಕ್ಟ್ರಿಕ್ ಮೆಷಿನ್‌ನ ಸಂಪರ್ಕಕ್ಕೆ ಬಂದಾಗ ಮಾತ್ರ ಇಲೆಕ್ಟ್ರಿಕ್ ಮೆಷಿನ್‌ಗಳು ಅಭ್ಯರ್ಥಿಗಳ ಎತ್ತರ ಹಾಗೂ ತೂಕವನ್ನು (height and weight) ಸರಿಯಾಗಿ ಅವುಗಳನ್ನು ತೋರಿಸುತ್ತವೆ. ಈ ಪ್ರಕರಣದಲ್ಲಿ ಅಭ್ಯರ್ಥಿಗಳ ದೈಹಿಕ ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳು ಈ ರೀತಿ ಮೋಸ ಮಾಡಲು ಯತ್ನಿಸಿದ್ದ ಮಹಿಳಾ ಅಭ್ಯರ್ಥಿಯ ವಿಚಾರವನ್ನು ಗಮನಕ್ಕೆ ತಂದಿದ್ದು, ಆಕೆಯನ್ನು ಪರೀಕ್ಷೆಯಿಂದ ಅಮಾನತು ಮಾಡಲಾಗಿದೆ ಎಂದಿದ್ದಾರೆ.

KSP Recruitment 2022: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕೊಟ್ಟ ಕರ್ನಾಟಕ, ಇಂದೇ ಅರ್ಜಿ ಸಲ್ಲಿಸಿ

ದೈಹಿಕ ತಪಾಸಣೆ ವೇಳೆ ಪಾರದರ್ಶಕತೆ ಹಾಗೂ ಸ್ಪಷ್ಟತೆ ಕಾಯ್ದುಕೊಳ್ಳಲು ಇಲೆಕ್ಟ್ರಿಕ್ ಮೆಷಿನ್‌ಗಳನ್ನು ಬಳಸಲಾಗುತ್ತಿದೆ. ಸಿಸಿಟಿವಿ (CCTV cameras) ಇಲೆಕ್ಟ್ರಿಕ್ ಮೆಷಿನ್ ಮುಂತಾದ ಆಧುನಿಕ ತಂತ್ರಜ್ಞಾನಗಳ ಜೊತೆ, ಪೊಲೀಸ್ ಅಧಿಕಾರಿಗಳು ಕೂಡ ಅಭ್ಯರ್ಥಿಗಳನ್ನು ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸುತ್ತಾರೆ ಅಲ್ಲದೇ ಅಕ್ರಮವೆಸಗಿದಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.  ಪೊಲೀಸ್ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳಿಗೆ ಪೊಲೀಸ್ ಕಾನ್ಸ್‌ಟೇಬಲ್ (police constables) ಹಾಗೂ ಸಬ್ ಇನ್ಸ್‌ಪೆಕ್ಟರ್ (sub-inspectors) ಹುದ್ದೆಗಳಿಗೆ 2.37 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ 11 ಸ್ಥಳಗಳಲ್ಲಿ ಇದಕ್ಕಾಗಿ ದೈಹಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಸೇರಬೇಕು, ಸೇನೆ ಸೇರಬೇಕು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ದೇಶ ಸೇವೆ ಮಾಡಬೇಕು ಎಂಬುದು ಬಹಳಷ್ಟು ಯುವ ಸಮೂಹದ ಕನಸು. ಇದಕ್ಕಾಗಿ ಲಕ್ಷಾಂತರ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ ಈ ಕಸರತ್ತು ಯೋಗ್ಯ ರೀತಿಯಲ್ಲಿ ಇದ್ದರೆ ಚೆನ್ನ. ಇಲ್ಲದಿದ್ದರೆ ಕೆಲಸವೂ ಇಲ್ಲ ಮಾನವೂ ಹೋದಂತಹ ಸ್ಥಿತಿ ಬರುವುದು. ಏಕೆಂದರೆ ತಂತ್ರಜ್ಞಾನದ ಯುಗದಲ್ಲಿ ನಾವಿದ್ದು, ಯಾರನ್ನೂ ಯಾಮಾರಿಸುವುದು ಅಷ್ಟು ಸುಲಭವಲ್ಲ.
 

Follow Us:
Download App:
  • android
  • ios