ಸುಮಾರು 6 ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನಗಳು ಹಾಗೈ ಲಕ್ಷಾಂತರ ಮೌಲ್ಯದ 5 ಮೊಬೈಲ್‌ಗಳನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ. 

ಬೆಂಗಳೂರು (ಜೂ. 11):  ಜೈಲಿಗೆ ಹೋಗಿ ಬಂದರೂ ಮತ್ತೆ ಹಳೆ ಚಾಳಿ ಮುಂದುವರೆಸಿದ್ದ ಕ್ರಿಮಿನಲ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಿ. ಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡು ಹಗಲೇ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಆಗಂತುಕರು ಸಿಕ್ಕಿಬಿದ್ದಿದ್ದಾರೆ. ಮೊಬೈಲ್ ಕಿತ್ತು ಎಸ್ಕೇಪ್ ಆಗಿದ್ದ ಸುಲಿಗೆಕೊರರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಜೆ.ಸಿ ನಗರ ಪೊಲೀಸರಿಂದ ಇಬ್ಬರು ಯುವಕರ ಬಂಧಿಸಿದ್ದು, ಇನ್ನೊಬ್ಬನ ಪತ್ತೆಗೆ ಬಲೆ ಬೀಸಿದ್ದಾರೆ. ಸೈಯದ್ ನಝೀಮ್, ಸೈಯದ್ ಅಲಿ ಬಂಧಿತರು.

ಈ ಇಬ್ಬರ ಬಂಧನದ ವೇಳೆ ಇನ್ನಷ್ಟು ಕೃತ್ಯಗಳು ಬೆಳಕಿಗೆ ಬಂದಿದ್ದು, ಆರೋಪಿಗಳು ಹಲವು ಠಾಣಾ ವ್ಯಾಪ್ತಿಗಳಲ್ಲಿ ಬೈಕುಗಳನ್ನು ಕಳ್ಳತನ ನಡೆಸಿದ್ದರು. ಸುಮಾರು 6 ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನಗಳು ಹಾಗೈ ಲಕ್ಷಾಂತರ ಮೌಲ್ಯದ 5 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ಏಳು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

ಡ್ರಾಪ್ ಕೇಳುವ ನೆಪದಲ್ಲಿ ರಾಬರಿ: ಇನ್ನು ಡ್ರಾಪ್ ಕೇಳುವ ನೆಪದಲ್ಲಿ ಡ್ಯಾಗರ್ ತೋರಿಸಿ ರಾಬರಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ರವಿಚಂದ್ರನ್ (25) ಬಂಧಿತ ಆರೋಪಿ. ಕಳೆದ ಮೇ 18 ರಂದು ರಾಮಮೂರ್ತಿನಗರದ ಹೊರಮಾವು ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿತ್ತು. 

ತರುಣ್ ಎಂಬ ಯುವಕ ಬೈಕಿನಲ್ಲಿ ಬರ್ತಿದ್ದ, ಈ ವೇಳೆ ಬೈಕ್‌ನ ಪೆಟ್ರೋಲ್ ಖಾಲಿಯಾಗಿದೆ ಡ್ರಾಪ್ ಕೊಡಿ ಎಂದು ಆರೋಪಿ ಹೇಳಿದ್ದ. ಬೈಕ್ ನಿಲ್ಲುಸುತ್ತಿದ್ದಂತೆ ಡ್ಯಾಗರ್ ತೆಗೆದು ಆರೋಪಿ ಹಲ್ಲೆ ಮಾಡಿ ಯುವಕ ತರುಣ್ ಬಳಿಯಿದ್ದ 2 ಮೊಬೈಲ್ ಹಾಗೂ ಹೋಂಡಾ ಆಕ್ಟೀವಾ ಬೈಕ್ ಕಸಿದು ಪರಾರಿಯಾಗಿದ್ದ. ಸದ್ಯ ಆರೋಪಿಯನ್ನ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ:ಕೊಲೆ ಸಂಚು ರೂಪಿಸಿದ್ದ ರೌಡಿ ಶೀಟರ್ ಬಂಧನ: ಪಿಸ್ತೂಲ್, 5 ಜೀವಂತ ಗುಂಡು ಸೀಝ್

ಇದನ್ನೂ ಓದಿ:ನಕಲಿ ಆಧಾರ್ ಸೃಷ್ಟಿಸಿ ಹಣ ವರ್ಗಾವಣೆ: ಬಾಂಗ್ಲಾ ದರೋಡೆಕೋರರ ಗ್ಯಾಂಗ್‌ ಅರೆಸ್ಟ್‌