Bengaluru Crime News: ಕೊಲೆ ಸಂಚು ರೂಪಿಸಿದ್ದ ರೌಡಿ ಶೀಟರ್ ಬಂಧನ: ಪಿಸ್ತೂಲ್, 5 ಜೀವಂತ ಗುಂಡು ಸೀಝ್
ಪಿಸ್ತೂಲ್ ಹಿಡಿದು ಕೊಲೆಗೆ ಹೊಂಚು ಹಾಕುತ್ತಿದ್ದ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವರದಿ: ಕಿರಣ್.ಕೆ.ಎನ್, ಬೆಂಗಳೂರು
ಬೆಂಗಳೂರು (ಜೂ. 11): ಪಿಸ್ತೂಲ್ ಹಿಡಿದು ಕೊಲೆಗೆ ಹೊಂಚು ಹಾಕುತ್ತಿದ್ದ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪುಲಿಕೇಶಿನಗರ ರೌಡಿಶೀಟರ್ ಸೈಯದ್ ಸುಭಾನ್ ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಕೊಲೆ, ಕೊಲೆ ಯತ್ನ , ದರೋಡೆ ಪ್ರಕರಣಗಳು ದಾಖಲಾಗಿತ್ತು. ಆದರ್ಶನಗರದ ರಾಘವೇಂದ್ರ ಸ್ಟೋರ್ಸ್ ಬಳಿ ಹೊಂಚು ಹಾಕಿದ್ದ ರೌಡಿ ಸುಹೈಲ್ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ಸಂಘಟಿತ ಅಪರಾಧ ವಿಭಾಗ ಅಧಿಕಾರಿಗಳು ಈತನ ಹೆಡೆಮುರಿ ಕಟ್ಟಿದ್ದಾರೆ.
4 ಪ್ರಕರಣಗಳಲ್ಲಿ ವಾರೆಂಟ್ ಇಶ್ಯೂ ಆಗಿದ್ರೂ ತಲೆ ತಪ್ಪಿಸಿಕೊಂಡು ಓಡಾಡಿಕೊಂಡಿದ್ದ ಸುಹೈಲ್ ನಾಡ ಪಿಸ್ತೂಲ್ ಇಟ್ಟುಕೊಂಡು ಮತ್ತೊಂದು ಕೊಲೆಗೆ ಸ್ಕೆಚ್ ಹಾಕಿದ್ದ. ಸದ್ಯ ಆರೋಪಿ ಬಂಧಿಸಿ ಒಂದು ನಾಡಪಿಸ್ತೂಲು ಹಾಗೂ ಐದು ಜೀವಂತ ಗುಂಡುಗಳನ್ನು ಸೀಝ್ ಮಾಡಲಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯ ಬಂಧನವಾಗಿದ್ದು ಪೊಲೀಸರು. ತನಿಖೆ ಮುಂದುವರಿಸಿದ್ದಾರೆ.
ಬೈಕ್ ಕಳ್ಳರ ಬಂಧನ: ಇನ್ನು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಕೆಪಿ ಅಗ್ರಹಾರ ಪೊಲೀಸರ ಬಂಧಿಸಿದ್ದಾರೆ. ಮುಸ್ತಾನ್ ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ ಬೆಲೆ ಬಾಳುವ 11 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಜೆಜೆ ನಗರ,ಕೆ.ಜಿ ಹಳ್ಳಿ, ವಿಜಯನಗರ,ರಾಮಮೂರ್ತಿನಗರ ಸೇರಿದಂತೆ ಹಲವು ಠಾಣೆ ವ್ಯಾಪ್ತಿಯಲ್ಲಿ ಬೈಕ್ ಎಗರಿಸಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಪೆಡ್ಲರ್ಸ್ ಬಂಧನ: ಡ್ರಗ್ಸ್ ಪೆಡ್ಲಿಂಗ್ ತೊಡಗಿದ್ದ ಮೂವರನ್ನು ಸಿಸಿಬಿ ಪೊಲೀಸರ ಬಂಧಿಸಿದ್ದಾರೆ. 10 ಲಕ್ಷ ಬೆಲೆಬಾಳುವ 11 ಗ್ರಾಂ ಎಂಡಿಎಂಎ,6 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ 1 ಕಾರು,3 ಮೊಬೈಲ್ ಸೀಝ್ ಮಾಡಲಾಗಿದ್ದು, ಎಲೆಕ್ಟ್ರಾನಿಕ್ ತೂಕದ ಯಂತ್ರ ಕೂಡ ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಓರ್ವ ವಿದ್ಯಾರಣ್ಯಪುರದ ರೌಡಿಶೀಟರ್ ಆಗಿದ್ದು, ಕೇರಳದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ನಕಲಿ ಆಧಾರ್ ಸೃಷ್ಟಿಸಿ ಹಣ ವರ್ಗಾವಣೆ: ಬಾಂಗ್ಲಾ ದರೋಡೆಕೋರರ ಗ್ಯಾಂಗ್ ಅರೆಸ್ಟ್
ಇದನ್ನೂ ಓದಿ: ಅಂತ್ಯಕ್ರಿಯೆ ವೇಳೆ ಸಹಾಯ ಮಾಡಿದವರ ಮೇಲೆಯೇ ಕೊಲೆ ಕೇಸ್ ದಾಖಲು..!