Asianet Suvarna News Asianet Suvarna News

Breaking : ಬೆಂಗಳೂರು ನರ್ಸಿಂಗ್ ವಿದ್ಯಾರ್ಥಿನಿ ಕಾಲುಜಾರಿ ಬಿದ್ದು ದಾರುಣ ಸಾವು!

ಬೆಂಗಳೂರಿನ ಹೊರವಲಯ ದಾಸರಹಳ್ಳಿಯಲ್ಲಿರುವ ಧನ್ವಂತರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ 6ನೇ ಮಹಡಿಯಿಂದ ಕಾಲು ಜಾರಿ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾಳೆ. 

Bengaluru nursing student Athulya dies after falling on Dhanvantari college sixth floor sat
Author
First Published Aug 5, 2024, 2:59 PM IST | Last Updated Aug 5, 2024, 2:59 PM IST

ಬೆಂಗಳೂರು (ಆ.05): ರಾಜ್ಯ ರಾಜಧಾನಿ ಬೆಂಗಳೂರು ಹೊರವಲಯದಲ್ಲಿರುವ ದಾಸರಹಳ್ಳಿಯ ಧನ್ವಂತರಿ ನರ್ಸಿಂಗ್ ಕಾಲೇಜಿಗೆ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ನರ್ಸಿಂಗ್ ಕೋರ್ಸ್‌ಗೆ ದಾಖಲಾಗಿದ್ದ ವಿದ್ಯಾರ್ಥಿನಿ ಕಾಲೇಜಿನ ಬಹುಮಹಡಿ ಕಟ್ಟಡದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಹೌದು, ನರ್ಸಿಂಗ್ ವಿದ್ಯಾರ್ಥಿನಿ ಬಹುಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿನಿ ಅತುಲ್ಯ (19) ಎಂದು ಗುರುತಿಸಲಾಗಿದೆ. ಧನ್ವಂತರಿ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥನಿ ಅತುಲ್ಯ, ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಬಂದು ನರ್ಸಿಂಗ್ ಸೇರಿಕೊಂಡಿದ್ದಳು. ನಿನ್ನೆ ಸಂಜೆ ವೇಳೆ ಕಾಲೇಜಿನ ಮಹಡಿಯಲ್ಲಿ ನಡೆದುಕೊಂಡು ಹೋಗುವಾಗ ಕಾಲು ಸ್ಲಿಪ್ ಆಗಿ  ಕೆಳಗಡೆ ಬಿದ್ದು ಸಾವನ್ನಪ್ಪಿದ್ದಾಳೆ.

ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

ಇನ್ನು ಕಾಲೇಜಿನಲ್ಲಿ ನಿನ್ನೆ ಸಂಜೆ ವೇಳೆಯೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಮೃತ ಯುವತಿ ಕಾಲು ಜಾರಿ ಬಿದ್ದಿದ್ದಾದರೂ ಹೇಗೆ? ಅಥವಾ ಯಾರಾದರೂ ತಳ್ಳಿದ್ದಾರೆಯೇ ಎಂದು ಪರಿಶೀಲನೆ ನಡೆಸಲು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಗಂಡನಿಂದಲೇ ಭೀಕರವಾಗಿ ಹತ್ಯೆಯಾದ ಹೆಂಡತಿ:  ಮದುವೆ ಮಾಡಿಕೊಂಡು ಹೆಂಡತಿಯನ್ನು ಸುಖವಾಗಿ ನೋಡಿಕೊಳ್ಳಬೇಕಿದ್ದ ಗಂಡನೇ ತನ್ನ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಮದುವೆ ಮಾಡಿಕೊಂಡು ಒಂಭತ್ತು ವರ್ಷದಿಂದ ಕಷ್ಟ ಸುಖದ ನಡುವೆಯೇ ಗಂಡನೊಂದಿಗೆ ಜೀವನ ನಡೆಸಿದ್ದ ಫಾತಿಮಾಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಹೆಂಡತಿ ಸಂಸಾರ ಜೋಡೆತ್ತಿನ ಬಂಡಿಯಂತೆ ಸಂಸಾರ ಸಾಗುತ್ತಿತ್ತು. ಇನ್ನು ಸಂಸಾರ ನಡೆಸಲು ಗಂಡ ದುಡಿಯಬೇಕು, ಹೆಂಡತಿ ಮನೆಯನ್ನು ನಡೆಸಬೇಕು ಎಂಬುದು ಗಾದೆಯಾಗಿದೆ. ಒಂದು ವೇಳೆ ಗಂಡ ದುಡಿಯದೆ ನಿರುದ್ಯೋಗಿ ಆಗಿದ್ದರೂ ಪರವಾಗಿಲ್ಲ, ಆದರೆ ಕಳ್ಳ, ಸುಳ್ಳ, ಮದ್ಯವ್ಯಸನಾಗಿರಬಾರದು. ಆದರೆ, ಇಲ್ಲಿ ಗಂಡ ಗಾಂಜಾ ಸೇವನೆ ಮಾಡುತ್ತಾ ಕಳ್ಳತನ ಮಾಡಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದು, ಹೆಂಡತಿ ಮಕ್ಕಳಿಗೆ ಈತನಿಂದ ಸಮಾಜದಲ್ಲಿ ಅವಮಾನವೇ ಎದುರಾಗುತ್ತಿತ್ತು. ಇದರಿಂದ ಗಂಡನಿಂದ ದೂರವಿದ್ದ ಹೆಂಡತಿಯನ್ನು ಈಗ ಗಂಡನೇ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.

Bengaluru nursing student Athulya dies after falling on Dhanvantari college sixth floor sat

ಬೆಂಗಳೂರಿನಲ್ಲಿ ಪತಿಯಿಂದ ಪತ್ನಿಯ ಕೊಲೆಯಾಗಿರುವ ಘಟನೆ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆ ಫಾತಿಮಾ‌ (34) ಆಗಿದ್ದಾಳೆ. ಈಕೆಯ ಗಂಡ ತಬ್ರೇಜ್ ಪಾಷಾ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಹಲವು ದಿನಗಳಿಂದ ಇಬ್ಬರ ಮಧ್ಯೆ ಜಗಳ‌ ಆಗ್ತಿತ್ತು. ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ಮಾಡುತ್ತಿದ್ದವರಿಗೆ ಕುಟುಂಬದ ಹಿರಿಯರು ಬುದ್ಧಿ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿ ಹೇಳುತ್ತಿದ್ದರು. ಆದರೆ, ಇಂದು ಬೆಳಗ್ಗೆ ಕೂಡ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಬೆಳಗ್ಗೆ 8.30ರ ಸುಮಾರಿಗೆ ಗಂಡ ತಬ್ರೇಜ್ ಪಾಷಾ ಹೆಂಡಿತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಘಟನೆ ನಡೆದ ಬೆನ್ನಲ್ಲಿಯೇ ಸ್ಥಳೀತರು ನೋಡಿದಾಗ ಕೊಲೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. 

ನನ್ನ ಬ್ಯಾಚ್‌ನಲ್ಲಿ ಮೊದಲು ನಾನೇ ಮದುವೆಯಾಗಿದ್ದು, ನನ್ನ ಬಿಟ್ಟು ಬೇರೆ ಎಲ್ಲರಿಗೂ ಮಕ್ಕಳಿದ್ದಾರೆ; ಚೈತ್ರಾ ವಾಸುದೇವನ್

Latest Videos
Follow Us:
Download App:
  • android
  • ios