Asianet Suvarna News Asianet Suvarna News

Crime News: 10ನೇ ವಯಸ್ಸಿಂದ ಕಳ್ಳತನ: ಬೆಚ್ಚಿಬೀಳಿಸುತ್ತೆ ನಟೋರಿಯಸ್ ಮನೆಗಳ್ಳನ ಕ್ರಿಮಿನಲ್ ಹಿಸ್ಟರಿ

Bengaluru Crime News: ಇದುವರೆಗೂ ಆರೋಪಿ ಪ್ರಕಾಶ್ ಬರೋಬ್ಬರಿ 164 ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ

Bengaluru notorious thief arrested by police mnj
Author
First Published Aug 27, 2022, 10:34 AM IST

ಬೆಂಗಳೂರು (ಆ. 27): ನಟೋರಿಯೆಸ್ ಮನೆಗಳ್ಳ ಪ್ರಕಾಶ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. 54 ವರ್ಷ ಪ್ರಕಾಶ್‌ ಮೇಲೆ ಬರೋಬ್ಬರಿ 164  ಪ್ರಕರಣಗಳು ದಾಖಲಾಗಿವೆ. ಕಳೆದ 44 ವರ್ಷಗಳಿಂದ ಬೀಗ ಒಡೆಯೋದೇ ಫುಲ್ ಟೈಂ ಜಾಬ್ ಮಾಡಿಕೊಂಡಿದ್ದ ಈತನಿಗೆ ಮಕ್ಕಳು, ಅಣ್ಣ ತಮ್ಮಂದಿರು ಕೂಡ ಸಾಥ್ ನೀಡುತ್ತಿದ್ದರು. ಆರೋಪಿ ಕೋಲಾರ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಒಟ್ಟು 3 ‌ಮದುವೆಯಾಗಿದ್ದಾನೆ.  ಕುಖ್ಯಾತ ಕಳ್ಳ ಪ್ರಕಾಶನಿಗೆ ಮೂವರು ಹೆಂಡ್ತಿಯರು ಹಾಗೂ ಒಟ್ಟು 7 ಜನ ಮಕ್ಕಳಿದ್ದಾರೆ. 

ಇದುವರೆಗೂ ಆರೋಪಿ ಬರೋಬ್ಬರಿ 164 ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.  ರಾಜ್ಯದ ಬೆಂಗಳೂರು, ಕೋಲಾರ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಗುಲ್ಬರ್ಗ ಸೇರಿದಂತೆ ಗೋವಾ ಕೇರಳದಲ್ಲೂ ಕೈಚಳಕ ತೋರಿಸಿದ್ದಾನೆ.  ಆರೋಪಿ ಇದುವರೆಗೂ ಸುಮಾರು 20ಕ್ಕೂ ಹೆಚ್ಚು ಬಾರಿ ಜೈಲುಸೇರಿ ಹೊರಬಂದಿದ್ದಾನೆ. 

ಆರೋಪಿ 1978 ರಲ್ಲಿ ತನ್ನ ಹತ್ತನೇ ವಯಸ್ಸಿಗೆ ಕಳ್ಳತನಕ್ಕೆ ಇಳಿದಿದ್ದ.  ಆರೋಪಿ ಕೈಚಳಕಕ್ಕೆ ಸಹೋದರ ವರದರಾಜ್, ಮಕ್ಕಳಾದ ಬಾಲರಾಜ್ ಮಿಥುನ್, ಅಳಿಯ ಜಾನ್ ಕೂಡ ಸಾಥ್ ನೀಡಿದ್ದಾರೆ.  ಕಳೆದ ಆಗಸ್ಟ್ 22 ರಂದು ರಾಜಾಜಿನಗರದ ಮನೆಕಳ್ಳತನ ಮಾಡಿ ಪ್ರಕಾಶ್ ಸಿಕ್ಕಿಬಿದ್ದಿದ್ದಾನೆ. 

ಜೈಲಿನಿಂದ ಬಂದ ಮೇಲೂ ಮತ್ತೆ ಡ್ರಗ್ಸ್‌ ದಂಧೆ: ವಿದೇಶಿ ಪ್ರಜೆಗಳು ಸೇರಿ ನಾಲ್ವರ ಬಂಧನ

ನಟೋರಿಯೆಸ್ ಮನೆಗಳ್ಳನ ಕ್ರಿಮಿನಲ್ ಹಿಸ್ಟರಿ:  ಮನೆಗಳ್ಳ ಪ್ರಕಾಶನ ಕ್ರಿಮಿನಲ್ ಹಿಸ್ಟರಿ ಬೆಚ್ಚಿಬೀಳಿಸುವಂತಿದೆ. ಐಷಾರಾಮಿ ಮನೆಗಳು, ಜ್ಯುವೆಲ್ಲರಿ ಶಾಪ್, ಫೈನಾನ್ಸ್ ಕಚೇರಿಗಳೇ ಈತನ ಟಾರ್ಗೆಟ್  ಆಗಿದ್ದು, ಪ್ರತಿಬಾರಿ ಜೈಲಿಗೆ ಹೋದಾಗಲೂ ಪ್ರಕಾಶ್ ಒಂದೊಂದು ಟೀಂ ಕಟ್ಟಿಕೊಳ್ಳುತ್ತಿದ್ದ.  ಜೈಲಿನಲ್ಲಿ ರಾಯಚೂರು ಯುವಕ ಪರಿಚಯ ಮಾಡಿಕೊಂಡು ಆತನಿಂದಲ್ಲೂ ಕಳ್ಳತನ ಮಾಡಿಸಿದ್ದ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

01) 1978-1986 (100 ಮನೆಗಳವು ಪ್ರಕರಣ)

  • ಕೇರಳದ ಕೊಟಾಯಂ ನಲ್ಲಿ 2.5 ಕೆಜಿ ಚಿನ್ನ ಕಳವು 
  • ಶೇಷಾದ್ರಿಪುರಂ ಚಿನ್ನದ ಅಂಗಡಿಯಲ್ಲಿ ಗೋಡೆ ಕೊರೆದು ಎರಡೂವರೆ ಕೆಜಿ ಚಿನ್ನ ಕಳವು 
  • ಮಾರ್ಕೆಟ್‌ನ ಸೇಠ್ ಅಂಗಡಿ ಒಡೆದು 4 ಕೆಜಿ ಚಿನ್ನ 20 ಕೆಜಿ ಬೆಳ್ಳಿ ಕಳವು
  • ಪ್ರಕಾಶನ ಕೃತ್ಯಕ್ಕೆ ಆಗಿನ ಸಹಚರರಾದ ಜೋಸೆಫ್, ಅನಂದನ್, ಬಾಷಾ ಸಾಥ್

02) 1989-1990 (ಮೈಸೂರು) 

  • ವೈರ್ ಮುಡಿ ಹಾಗೂ ನಾಗೇಶ್ ಎಂಬ ಸಹಚರರ ಜೊತೆ ಸೇರಿ 1989 ಮೈಸೂರಲ್ಲಿ 20 ಕಡೆ ಮನೆಗಳವು
  • 1992 ನಾಗೇಶನ ಜೊತೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎರಡು ಚಿನ್ನದ ಅಂಗಡಿ ಒಡೆದು 17 ಕೆಜಿ ಚಿನ್ನಾಭರಣ ಕಳವು
  • 1992 ರಲ್ಲಿ  ಮಂಡೂರಲ್ಲಿ 7 ಕೆಜಿ ಚಿನ್ನಾಭರಣ ಹಾಗೂ ಶಿವಮೊಗ್ಗದ ಫೈನಾನ್ಸ್  ಕಚೇರಿಯಲ್ಲಿ 3 ಕೋಟಿ ನಗದು ಕಳವು 
  • 1997 ರಲ್ಲಿ ಗೋವಾದಲ್ಲಿ 7 ಕೆಜಿ ಚಿನ್ನಾಭರಣ 
  • 2006 ರಲ್ಲಿ ಮಕ್ಕಳಾದ ಮಿಥುನ್ ಹಾಗೂ ಬಾಲರಾಜ್ ಜೊತೆ ಕೈಚಳಕ ಸ್ಟಾರ್ಟ್

ಕಳವು ಆರೋಪಿ ಬಂಧನ: ಮಾಲು ವಶಕ್ಕೆ:  ಬಾಳೆಹೊನ್ನೂರು ಸಮೀಪದ ಅರಳೀಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಮನೆಯೊಂದರಿಂದ ಕಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂದಿಸಿ ಕಳವು ಮಾಡಿದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಅರಳೀಕೊಪ್ಪದ ಸಿಪ್ರಿಯನ್‌ ಲೋಬೋ (42) ಬಂಧಿತ ಆರೋಪಿಯಾಗಿದ್ದಾನೆ. ಇದೇ ಗ್ರಾಮದ ಕೆ.ಕೆ.ಸುರೇಶ್‌ ಅವರ ಮನೆಯಲ್ಲಿದ್ದ 1.17 ಲಕ್ಷ ರು. ಮೌಲ್ಯದ 21 ಗ್ರಾಂ ಚಿನ್ನಾಭರಣ ಹಾಗೂ 35 ಸಾವಿರ ರು. ನಗದನ್ನು ಕಳ್ಳತನ ಮಾಡಿದ್ದ. ಈ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಆ.16ರಂದು ಪ್ರಕರಣ ದಾಖಲಾಗಿತ್ತು.

ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 51 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್

ಪ್ರಕರಣದ ಮಾಹಿತಿ ಕಲೆ ಹಾಕಿದ ಪೊಲೀಸರು ಕಳವು ಕೃತ್ಯದಲ್ಲಿ ಭಾಗಿಯಾಗಿದ್ದ ಸಿಪ್ರಿಯನ್‌ ಲೋಬೋನನ್ನು ಬಂದಿಸಿ ವಿಚಾರಣೆ ನಡೆಸಿ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಿತ್ಯಾನಂದಗೌಡ, ಎಎಸ್‌ಐ ರವಿಕುಮಾರ್‌, ಸಿಬ್ಬಂದಿಗಳಾದ ಮಂಜುನಾಥ, ಸ್ವಾಮಿ, ಈ.ಟಿ.ಬಸವರಾಜ್‌, ಜಯರಾಮ್‌, ಯಾಕೂಬ್‌ ತಾಂಬೂಲಿ, ಶಶಿಕುಮಾರ್‌ ಭಾಗವಹಿಸಿದ್ದರು.

Follow Us:
Download App:
  • android
  • ios