Asianet Suvarna News Asianet Suvarna News

ಬೆಂಗಳೂರು ಪತ್ರಕರ್ತನ ಮನೆಯ ಮೇಲೆ ದುಷ್ಕರ್ಮಿಗಳಿಂದ ದಾಳಿ

ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ವಾಸವಾಗಿರುವ ಖಾಸಗಿ ವಾಹಿನಿಯ ವರದಿಗಾರನ ಮನೆಯ ಮೇಲೆ ಫೆ.18ರಂದು ಕೆಲವು ದುಷ್ಕರ್ಮಿಗಳು ದಾಳಿ ಮಾಡಿ, ಕುಟುಂಬ ಸದಸ್ಯರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.

Bengaluru miscreants attacked was journalist house and family sat
Author
First Published Feb 20, 2024, 6:53 PM IST

ಬೆಂಗಳೂರು (ಫೆ.20): ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ವಾಸವಾಗಿರುವ ಖಾಸಗಿ ವಾಹಿನಿಯ ವರದಿಗಾರನ ಮನೆಯ ಮೇಲೆ ಫೆ.18ರಂದು ಕೆಲವು ದುಷ್ಕರ್ಮಿಗಳು ದಾಳಿ ಮಾಡಿ, ಕುಟುಂಬ ಸದಸ್ಯರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.

ಖಾಸಗಿ ವಾಹಿನಿ ವರದಿಗಾರನ ಮನೆಯ ಬಳಿ ಫೆ.18ರ ರಾತ್ರಿ 11.45ರ ಸುಮಾರಿಗೆ ಆಗಮಿಸಿದ ದುಷ್ಕರ್ಮಿಗಳಿಬ್ಬರು ಮೊದಲಿಗೆ ಪತ್ರಕರ್ತನ ಮನೆಯ ಕಾಲಿಂಗ್ ಬೆಲ್ ಒತ್ತಿ ಹೊಡಿ ಹೋಗುತ್ತಾರೆ. ಇದನ್ನ ಪ್ರಶ್ನೆ ಮಾಡಿದ ವರದಿಗಾರ ತೇಜಸ್ ಪೂಜಾರಿಯ ಪತ್ನಿಗೆ ದುಷ್ಕರ್ಮಿಗಳು ಸುಖಾ ಸುಮ್ಮನೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನಂತರ ಈ ಕಿಡಿಗೇಡಿಗಳು 4 ರಿಂದ 5 ಬಾರಿ ಮಾತೆ ಕಾಲಿಂಗ್ ಬೆಲ್ ಒತ್ತಿ ಮತ್ತೆ ಓಡಿ ಹೋಗಿ ಕಿರುಕುಳ ನೀಡಿದ್ದಾರೆ. ಆಗ ಮನೆಯಲ್ಲಿದ್ದ ತೇಜಸ್ ಪೂಜಾರಿಯ ತಂದೆ ಗಂಗಾಧರ್ ಹೊರಗೆ ಬಂದು ಕಿಡಿಗೇಡಿಗಳನ್ನು ಪ್ರಶ್ನೆ ಮಾಡಿದಾಗ ಅವರಿಗೂ ಕೂಡ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬೆಂಗಳೂರಿಗೆ ಕಾವೇರಿ ಶಾಕ್: ಫೆ.27ರಂದು ಕಾವೇರಿ ಕುಡಿಯುವ ನೀರಿನ ಪೂರೈಕೆ ಸ್ಥಗಿತ

ಆಗ ಮನೆಯವರು ಸೇರಿಕೊಂಡು ದುಷ್ಕರ್ಮಿಗಳ ವಿರುದ್ಧ ತಿರುಗಿ ಬಿದ್ದಾಗ ಕೆಲವೇ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಸ್ಥಳಕ್ಕೆ ಸುಮಾರು 15 ರಿಂದ 20 ಜನರು ಆಗಮಿಸಿದ್ದಾರೆ. ನಂತರ ಎಲ್ಲ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು ಬಂದು, ಪತ್ರಕರ್ತನ ಕುಟುಂಬ ದವರಿಗೆಲ್ಲ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ದುಷ್ಕರ್ಮಿಗಳು ಇನ್ನು ಒಂದು ವಾರದೊಳಗೆ ನಿಮ್ಮನೆಲ್ಲ ಕೊಲ್ಲೋದಾಗಿ ಕೂಡ ಧಮ್ಕಿ ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು; ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಗೆಲುವು

ಇನ್ನು ಈ ಘಟನೆಯ ಸಂಬಂಧವಾಗಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಚಂದನ್ ಗೌಡ, ನಾಗರಾಜು ಹಾಗೂ ಸಂತೋಷ್ ಸೇರಿ ಒಟ್ಟು 15 ರಿಂದ 20 ಮಂದಿಯ ಮೇಲೆ ಪ್ರಾಣ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಈಗ ಎಲ್ಲರ ಮೇಲೆ ಕ್ರಿಮಿನಲ್ ಕೇಸ್ ತೆರೆಯಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Follow Us:
Download App:
  • android
  • ios