*   ಮದುವೆಯಾಗುವುದಾಗಿ ವಿಚ್ಛೇದಿತ ಮಹಿಳೆಗೆ ವಂಚನೆ*   ಸಾಕಿಬ್‌ ಅಹಮ್ಮದ್‌ ಖುರೇಶಿ ಎಂಬಾತನ ವಿರುದ್ಧ ಎಫ್‌ಐಆರ್‌*   ಕೌಟುಂಬಿಕ ಕಲಹದಿಂದ ಮೊದಲನೇ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ 

ಬೆಂಗಳೂರು(ಫೆ.08): ವಿಚ್ಛೇದಿತ ಮಹಿಳೆಯನ್ನು(Divorced Woman) ಪ್ರೀತಿಸುವ ನಾಟಕವಾಡಿ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಕೊನೆಗೆ ವಿವಾಹವಾಗದೆ(Marriage) ವಂಚಿಸಿದ(Fraud) ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿರಾನಗರದ 28 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಸಾಕಿಬ್‌ ಅಹಮ್ಮದ್‌ ಖುರೇಶಿ ಎಂಬಾತನ ವಿರುದ್ಧ ಎಫ್‌ಐಆರ್‌(FIR) ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೂರುದಾರ ಮಹಿಳೆ ಕೌಟುಂಬಿಕ ಕಲಹದಿಂದ ಮೊದಲನೇ ಪತಿಯಿಂದ ವಿಚ್ಛೇದನ ಪಡೆದು ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಜೀವನೋಪಾಯಕ್ಕಾಗಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಖುರೇಶಿ ಪರಿಚಯವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಖುರೇಶಿ ಪ್ರೀತಿಸುವ(Love) ನಾಟಕವಾಡಿ ವಿವಾಹವಾಗುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆರೋಪಿಸಲಾಗಿದೆ.

Love Sex Aur Dhokha : ತಿ. ನರಸೀಪುರ, ಕೈಕೊಟ್ಟ ಪೊಲೀಸಪ್ಪ, ಯುವತಿ ಏಕಾಂಗಿ ಧರಣಿ

ಕಳೆದ ವರ್ಷ ಮಹಿಳೆಯು ರಿಜಿಸ್ಟ್ರರ್‌ ಮ್ಯಾರೇಜ್‌(Registrar Marriage) ಮಾಡಿಕೊಳ್ಳಲು ಸಿದ್ಧತೆ ಮಾಡುವಾಗ ಆರೋಪಿ ನಾನಾ ಕಾರಣ ನೀಡಿ ಮದುವೆ ಮುಂದೂಡಿದ್ದ. ವಿವಾಹವಾಗಲು ಕೊಂಚ ಸಮಯಬೇಕು ಎಂದು ಕೇಳಿದ್ದ. ನಂತರವೂ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಖುರೇಶಿ ಮದುವೆಗೆ ಒಪ್ಪಿರುವ ವಿಚಾರವನ್ನು ಮಹಿಳೆ ತನ್ನ ಪೋಷಕರಿಗೆ ಹೇಳಿ ಅವರ ಒಪ್ಪಿಗೆ ಸಹ ಪಡೆದಿದ್ದರು. ಅದರಂತೆ ಮಹಿಳೆ ಮನೆಯವರು ಫೆ.24ರಂದು ವಿವಾಹಕ್ಕೆ ದಿನಾಂಕ ನಿಗದಿ ಮಾಡಿದ್ದರು. ಇದೀಗ ಮಹಿಳೆಯನ್ನು ಭೇಟಿಯಾಗಿರುವ ಖುರೇಶಿ, ತಾನು ವಿವಾಹವಾಗುವುದಿಲ್ಲ ಎಂದು ಮಹಿಳೆಗೆ ಹೇಳಿದ್ದಾನೆ. ಅಷ್ಟೇ ಅಲ್ಲದೆ, ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಠಾಣೆ ಪೊಲೀಸರು(Police), ಆರೋಪಿಯ(Accused) ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮ್ಯಾಟ್ರಿಮೋನಿಯ ರಾಜೇಶ.. ಮದುವೆ ಆಗುತ್ತೇನೆ ಎಂದು ನಂಬಿಸೋದೆ ಕೆಲಸ!

ಬೆಂಗಳೂರು: ಬ್ಯಾಂಕ್‌ (Bank) ಮಹಿಳಾ ಉದ್ಯೋಗಿಯೊಬ್ಬರಿಗೆ ವೈವಾಹಿಕ ಜಾಲತಾಣದಲ್ಲಿ(matrimonial site) ಪರಿಚಯವಾದ ವ್ಯಕ್ತಿಯೊಬ್ಬ ಮದುವೆ (Marriage)ಆಗುವುದಾಗಿ ನಂಬಿಸಿ 7.55 ಲಕ್ಷ ಪಡೆದು ಕಿಡಿಗೇಡಿಯೊಬ್ಬ ವಂಚಿಸಿದ ಘಟನೆ ಫೆ. 01 ರಂದು ನಡೆದಿತ್ತು. 

ಲವ್, ಸೆಕ್ಸ್ , ದೋಖಾ : ಕೊನೆಗೆ ಆಗಿದ್ದು ಸಾವು

ಸುಧಾಮನಗರದ 29 ವರ್ಷದ ಯುವತಿ ಮೋಸ ಹೋಗಿದ್ದು, ಈ ಕೃತ್ಯ ಎಸಗಿದ ರಾಜೇಶ್‌ ಕುಮಾರ್‌ ಎಂಬಾತನ ಪತ್ತೆಗೆ ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಯುವತಿ ಕೆಲ ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್‌ನಲ್ಲಿ ಸ್ವ-ವಿವರ ಅಪ್‌ಲೋಡ್‌ ಮಾಡಿದ್ದರು. 2021ರ ಡಿಸೆಂಬರ್‌ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್‌, ತಾನು ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯುವಕ ಎಂದು ಪರಿಚಯಿಸಿಕೊಂಡಿದ್ದನು. ನೀವು ಒಪ್ಪಿದರೆ ಮದುವೆ ಆಗುವುದಾಗಿ ಸಹ ಹೇಳಿದ್ದಾನೆ. ತಾನು ಅಮೆರಿಕದಿಂದ ಮರಳಬೇಕಾದರೆ ಮದುವೆ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಇದಕ್ಕಾಗಿ ಬ್ಯಾಂಕ್‌ ಸಿಬಿಲ್‌ ಸ್ಕೋರ್‌ ಹೆಚ್ಚಿಸಿಕೊಳ್ಳಬೇಕಿದ್ದು, ತುರ್ತು ಹಣದ ಅವಶ್ಯಕತೆ ಇದೆ ಎಂದಿದ್ದನು. ಆರೋಪಿ ನೀಡಿದ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ .7.55 ಲಕ್ಷ ವರ್ಗಾವಣೆ ಮಾಡಿದ್ದಳು. ಇದಾದ ನಂತರ ಮತ್ತೆ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಾಗ ಶಂಕೆಗೊಂಡ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು.

ನಕಲಿ ನೋಟಿನ ವಿಡಿಯೋ ತೋರಿಸಿ ವಂಚನೆ..!

ಬೆಂಗಳೂರು: ನಗರದಲ್ಲಿ ಕಡಿಮೆ ಬೆಲೆಗೆ ನಿವೇಶನ ಹಾಗೂ ಚಿನ್ನದ ಬಿಸ್ಕೆಟ್‌ಗಳ ಮಾರಾಟದ ಸೋಗಿನಲ್ಲಿ ಮಕ್ಕಳಾಟಿಕೆಯ ನೋಟುಗಳ ವಿಡಿಯೋವನ್ನು ತೋರಿಸಿ, ಜನರನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಅಮೃತಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಜ.30 ರಂದು ನಡೆದಿತ್ತು.