Love Sex Aur Dhokha : ತಿ. ನರಸೀಪುರ, ಕೈಕೊಟ್ಟ ಪೊಲೀಸಪ್ಪ, ಯುವತಿ ಏಕಾಂಗಿ ಧರಣಿ
* ನಂಬಿಸಿ ಕೈಕೊಟ್ಟ ಪೊಲೀಸಪ್ಪನ ವಿರುದ್ಧ ಯುವತಿ ಏಕಾಂಗಿ ಪ್ರತಿಭಟನೆ
* ಬಾಲಕಿ ಮೇಲೆ ಏರಗಲು ಮುಂದಾದ ವೃದ್ಧ
* ಶಾಲಾ ಮಕ್ಕಳ ಟ್ಯಾಬ್ ಗಳನ್ನೇ ಕದ್ದ ಕಿರಾತಕರು
* ಬದುಕಿರುವ ರೈತನಿಗೆ ಅಧಿಕಾರಿಗಳಿಂದ ಮರಣ ಪ್ರಮಾಣ ಪತ್ರ
ಮೈಸೂರು/ ಬೆಂಗಳೂರು/ ಕೋಲಾರ(ಜ. 31) ನಂಬಿಸಿ ಕೈಕೊಟ್ಟ ಪೊಲೀಸಪ್ಪನ ವಿರುದ್ಧ ಯುವತಿ ಧರಣಿ (Protest) ಕುಳಿತುಕೊಂಡಿದ್ದಾಳೆ. ಪೊಲೀಸ್ ಕಾನ್ಸ್‌ಟೇಬಲ್ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ತಿ.ನರಸೀಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿ ವಿರುದ್ಧ ಆರೋಪ ಕೇಳಿಬಂದಿದೆ.
ಬೆಂಗಳೂರಿನ ನಿವಾಸಿ ಸಂತ್ರಸ್ತೆ ಯುವತಿ ಧರಣಿ ಆರಂಭಿಸಿದ್ದಾರೆ 2018ರಲ್ಲಿ ಫೇಸ್ಬುಕ್(Facebook) ಮೂಲಕ ಸ್ನೇಹ ಶುರುವಾಗಿತ್ತು. ಬಳಿಕ ಪ್ರೇಮಕ್ಕೆ ತಿರುಗಿದ ರವಿ ಮತ್ತು ಯುವತಿಯ ಸ್ನೇಹ ಇವತ್ತು ಈ ಹಂತಕ್ಕೆ ಬಂದು ನಿಂತಿದೆ. ದೈಹಿಕವಾಗಿ ಬಳಸಿಕೊಂಡಿರುವುದಾಗಿ ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ತಿ.ನರಸೀಪುರ ಪೋಲೀಸ್ ಠಾಣೆ ಮುಂಭಾಗ ಸಂತ್ರಸ್ತ ಯುವತಿ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ದೂರು ಸಹ ದಾಖಲಾಗಿದೆ.
Woman Suicide : ವಸತಿ ಗೃಹದಲ್ಲೇ ಕಾನ್ಸ್ಟೇಬಲ್ ಪತ್ನಿ ಸುಸೈಡ್, ಕಾರಣ ನಿಗೂಢ!
ರೈತನಿಗೆ ಮರಣ ಪ್ರಮಾಣ ಪತ್ರ! ಬದುಕಿರುವ ರೈತನಿಗೆ ಈ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಪ್ರಕರಣದಕ್ಕೆ ತಹಶೀಲ್ದಾರ ಸೇರಿ ನಾಲ್ವರ ಅಧಿಕಾರಗಳ ಎಫ್ ಐ ಆರ್ ದಾಖಲಾಗಿದೆ. ಶಿವರಾಜ್ (40) ಎಂಬ ರೈತನಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಕೋಲಾರ (Kolar) ಜಿಲ್ಲೆಯ ಮುಳಬಾಗಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ರೈತ ಶಿವರಾಜ್ ಪಡಿತರ ಪಡೆಯಲು ಹೋದ ವೇಳೆ ಈ ವಿಷಯ ಗೊತ್ತಾಗಿದೆ.
ಹಿಂದಿನ ತಹಶೀಲ್ದಾರ ಜಿ.ರಾಜಶೇಖರ್,ಗ್ರಾಮ ಲೆಕ್ಕಿಗ ಅರವಿಂದ, ಕಂದಾಯ ನಿರೀಕ್ಷಿಕ ಸಾದತ್ ವುಲ್ಲಾ ಖಾನ್,ನಾಡಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ದ ಪ್ರಕರಣ ದಾಖಲಾಗಿದೆ. ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿ ಮೇಲೆ ಎರಗಿದ ಕಾಮುಕ: ಯಾದಗಿರಿಯಲ್ಲಿ (Yadagir) ಮತ್ತೊಂದು ಪೈಶಾಚಿಕ ಕೃತ್ಯ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ ಘೋರ ಪ್ರಕರಣ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಳ್ಳಿಯಲ್ಲಿ ಜ. 27 ರಂದು ನಡೆದ ಘಟನೆ ನಡೆದಿದೆ. ಬಾಲಕಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಗುಡಿಸಲಿಗೆ ಕರೆದುಕೊಂಡು ಹೋದ ಕಾಮುಕ ವೃದ್ಧ ಆಕೆ ಮೇಲೆ ಎರಗಲು ಯತ್ನಿಸಿದ್ದ.
ಅತ್ಯಾಚಾರಕ್ಕೆ ಯತ್ನಿಸುವ ವೇಳೆ ಬಾಲಕಿ ಚೀರಾಡಿದ್ದಾಳೆ. ಬಾಲಕಿ ಚೀರಾಟ ಕೇಳಿದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. 68 ವರ್ಷದ ಕಾಮುಕ ವೃದ್ಧ ಮಲ್ಲಪ್ಪ ಹೀನ ಕೆಲಸ ಮಾಡಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿ ಬಿದ್ದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶಾಲಾ ಮಕ್ಕಳ ಬ್ಯಾಗ್, ಟ್ಯಾಬ್ ಕದ್ದ ಖದೀಮರು: ಶಾಲಾ ಮಕ್ಕಳ ಟ್ಯಾಬ್ ಗಳನ್ನೇ ಕದ್ದಿದ್ದ ಖದೀಮರನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆ ನಿಂಬಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಟ್ಯಾಬ್ ಕಳ್ಳತನ ನಡೆದಿತ್ತು.
ಮಕ್ಕಳಿಗಾಗಿ ದಾನಿಯೊಬ್ಬರು ನೀಡಿದ್ದ 22 ಟ್ಯಾಬ್ ಗಳನ್ನು ಶಾಲೆಯಲ್ಲಿನ ತಿಜೋರಿಯಲ್ಲಿ ಇಡಲಾಗಿತ್ತು. ಟ್ಯಾಬ್ ಸಂಗ್ರಹಿಸಿ ಇಟ್ಟಿರುವ ಮಾಹಿತಿ ತಿಳಿದ ಕಳ್ಳರು ಬಾಗಿಲು ಮುರಿದು ಶಾಲೆ ಒಳಹೊಕ್ಕಿದ್ದಾರೆ. ಶಾಲೆ ಬೀಗ ಮುರಿದು 1 ಲಕ್ಷ 49 ಸಾವಿರ ರೂ ಮೌಲ್ಯದ 22 ಟ್ಯಾಬ್‌ಗಳನ್ನ ಕಳ್ಳತನ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈರಣ್ಣ ಪಿರಂಗಿ, ಬಸವರಾಜ್ ಮತ್ತು ಶಿವಾನಂದ ಎನ್ನುವ ಮೂವರು ಯುವಕರನ್ನು ಬಂಧಿಸಲಾಗಿದೆ. ಬಂಧಿತರು ನಿಂಬಾಳ ಗ್ರಾಮದ ಯುವಕರೇ ಆಗಿದ್ದು, ಮೋಜಿಗಾಗಿ ಟ್ಯಾಬ್ ಕಳ್ಳತನ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತರಿಂದ ಕಳ್ಳತನ ಮಾಡಲಾಗಿದ್ದ ಟ್ಯಾಬ್ ಗಳು ಹಾಗೂ ಅವರ ಬೈಕ್, ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದ್ದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.