ಬೆಂಗಳೂರು(ಜೂ. 09)  ನಾಲ್ಕು ಮದುವೆ  ಸಾಲ್ದು ಅಂತ ಗರ್ಲ್ ಫ್ರೆಂಡ್ಸ್ ಮೈಂಟೇನ್ ಮಾಡ್ತಿದ್ದ ಭೂಪನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಆರೋಪಿ ಸುರೇಶ್ ಬಂಧನವಾಗಿದೆ.

ಶ್ರೀಮಂತ ವಿಚ್ಛೇದಿತ ಮಹಿಳೆಯರೇ ಇವನ ಟಾರ್ಗೆಟ್ . ಮೈಸೂರು ಮೂಲದ ಸುರೇಶ್ ಮೇಲೆ ವಿಚ್ಚೇದಿತ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಬಣ್ಣ ಬಯಲಾಗಿದೆ.

ಮ್ಯಾಟ್ರಿಮೋನಿಯಲ್ಲಿ ವಿಚ್ಛೇದಿತ ಮಹಿಳೆ ಪರಿಚಯ ಮಾಡಿಕೊಳ್ಳುತ್ತಿದ್ದ.  ಮಹಿಳೆಗೆ ಬಾಳು ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆಯುತ್ತಿದ್ದ.  ಸೈಟ್ ತೆಗೆದುಕೊಳ್ಳಬೇಕು ಎಂದು 10 ಲಕ್ಷ ಬೇಕೆಂದು ಬೇಡಿಕೆ ಇಟ್ಟಿದ್ದ ಆರೋಪಿ ಈಗ ಪೊಲೀಸರ ವಶದಲ್ಲಿದ್ದಾನೆ.

ನಟಿ ಚಂದನಾ ಆತ್ಮಹತ್ಯೆ ಹಿಂದಿನ ದೊಡ್ಡ ಕಾರಣ

ಆರೋಪಿ ಮಾತಿಗೆ ಮರುಳಾಗಿ ಹಣ ಇಲ್ಲ‌ ಎಂದು ಒಡವೆಯನ್ನು ಮಹಿಳೆ ಕೊಟ್ಟಿದ್ದಳು. 40 ಗ್ರಾಂ ಚಿನ್ನ ನೀಡಿದ್ದಳು. ಒಡವೆ ಪಡೆದು ಫೋನ್ ರಿಸಿವ್ ಮಾಡದೆ  ಸುರೇಶ್ ಎಸ್ಕೇಪ್ ಆಗಿದ್ದ. ಈ ವಿಚಾರವಾಗಿ ಬ್ಯಾಡರಹಳ್ಳಿ ಠಾಣೆಯಲ್ಲಿ ಸುರೇಶನ ವಿರುದ್ದ ದೂರು ದಾಖಲಾಗಿತ್ತು.

ಇದೇ ದೂರಿನ ಅಧಾರದಲ್ಲಿ ಆರೋಪಿಯನ್ನ ಬಂಧಿಸಿರುವ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಒಂದೊಂದೆ ಅಂಶ ಬೆಳಕಿಗೆ ಬಂದಿದೆ. ತನಿಖೆ ವೇಳೆ ನಾಲ್ವರು ಮಹಿಳೆಯರನ್ನು ಮದುವೆ ಆಗಿರುವುದು ಹಾಗೂ ಹಲವರಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ಹೇಳಿದ್ದಾನೆ.

ಮೈಸೂರು,ಬೆಂಗಳೂರು‌, ರಾಮನಗರ ಸೇರಿದಂತೆ ರಾಜ್ಯಾದ್ಯಂತ ಮೋಸ ಮಾಡಿರುವ ಶಂಕೆ ಇದ್ದು ವಿಚಾರಣೆ ಮುಂದುವರಿದಿದೆ.