ಬೆಂಗಳೂರು ಮಲ್ಲೇಶ್ವರಂನಲ್ಲಿ ಭೀಕರ ಅಪಘಾತ; ಅಡ್ಡಾದಿಡ್ಡಿ ಕಾರು ಓಡಿಸಿ ಬೈಕ್ ಸವಾರನನ್ನು ಬಲಿ ಪಡೆದ ಕುಡುಕ
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕುಡುಕನೊಬ್ಬ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದು ಬೈಕ್ ಸವಾರನಿಗೆ ಗುದ್ದಿ ಬಲಿ ಪಡೆದಿರುವ ಘಟನೆ ನಡೆದಿದೆ.
ಬೆಂಗಳೂರು (ಮೇ 19): ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕುಡುಕನೊಬ್ಬ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದು ಬೈಕ್ ಸವಾರನಿಗೆ ಗುದ್ದಿ ಬಲಿ ಪಡೆದಿರುವ ಘಟನೆ ನಡೆದಿದೆ.
ಹೌದು, ಬೆಂಗಳೂರಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮಲ್ಲೇಶ್ವರಂ ಸಂಚಾರಿ ಠಾಣಾ ವ್ಯಾಪ್ತಿಯ ಸುಬ್ರಮಣ್ಯ ನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಸುಬ್ರಮಣ್ಯನಗರದ ವಿನಯ್ (32) ಮೃತ ಬೈಕ್ ಸವಾರ ಆಗಿದ್ದಾನೆ. ಕಾರು ಚಾಲಕ ಬೈಕ್ ಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಇನ್ನು ಕಾರು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಈ ವೇಳೆ ವಿನಯ್ ಬೈಕ್ ಸಮೇತವಾಗಿ ಸುಮಾರು ದೂರ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿ ರಸ್ತೆ ಪಕ್ಕದ ಫುಟ್‌ಪಾತ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ಮೈಸೂರು: ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕಾರ್ಪೆಂಟರ್; ಮಹಡಿ ಜಿಗಿದು ಮಂಡೆ ಒಡೆದುಕೊಂಡ!
ನೆಲಕ್ಕೆ ಬಿದ್ದ ಬೈಕ್ ಸವಾರ ವಿನಯ್ ಹಾಗೂ ಆತನ ಸ್ನೇಹಿತ ಇಬ್ಬರೂ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಆದರೆ, ಜನರು ಬಂದು ಟ್ರಾಫಿಕ್ ಜಾಮ್ ಉಂಟುಮಾಡಿ ವಿಡಿಯೋ ಮಾಡಿದರೇ ಹೊರತು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ. ಇದರಿಂದಾಗಿ, ಗಂಭೀರ ಗಾಯಗೊಂಡಿದ್ದ ವಿನಯ್ ದೇಹದಿಂದ ತುಂಬಾ ರಕ್ತ ಹರಿದು ಹೋಗಿದೆ. ಇನ್ನು ಕೆಲ ಹೊತ್ತಿನ ಬಳಿಕ ಇಬ್ಬರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವಿನಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇನ್ನು ಮತ್ತೊಬ್ಬ ಸವಾರನಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ಕಾರ್ ಚಾಲಕ ಹರಿನಾಥ್ ಎನ್ನುವವರನ್ನು ಮಲ್ಲೇಶ್ವರಂ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ:
ಹರಿನಾಥ್ ಎನ್ನುವ ವ್ಯಕ್ತಿ ಕಂಠಪೂರ್ತಿ ಕುಡಿದು ಅತ್ಯಂತ ಹೆಚ್ಚು ಜನನಿಬಿಡ ಸ್ಥಳದಲ್ಲಿ ಓವರ್ ಸ್ಪೀಡ್ ಆಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದ ಆಟೋಗೆ ಗುದ್ದಿದ್ದಾನೆ. ಅಲ್ಲಿ ಆಟೋ ಚಾಲಕರು ಸೇರಿಕೊಂಡು ಹಲ್ಲೆ ಮಾಡುತ್ತಾರೆ ಎಂಬ ಭಯದಿಂದ ನಂತರ ಕಾರನ್ನು ಮತ್ತಷ್ಟು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆದರೆ, ಏಕಾಏಕಿ ಕಾರು ಚಾಲಕ ತನ್ನ ವೇಗ ಹೆಚ್ಚಿಸಿದ್ದರಿಂದ ಮುಂದೆ ಬೈಕ್‌ನಲ್ಲಿ ಹೋಗುತ್ತಿದ್ದ ವಿನಯ್ ಮತ್ತು ಸ್ನೇಹಿತನಿಗೆ ಹಿಂಬದಿಯಿಂದ ಗುದ್ದಿದ್ದಾನೆ.
ಅಕ್ರಮ ಸಂಬಂಧ ಶಂಕೆ, ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣ ಚೈನ್‌ನಿಂದ ಬೀಗ ಹಾಕಿದ ಪತಿ!
ಇನ್ನು ಬೈಕ್‌ಗೆ ಡಿಕ್ಕಿ ಹೊಡೆದು ಮದ್ಯವ್ಯಸನಿ ಹರಿನಾಥ್ ಕಾರಿನಿಂದ ಕೆಳಗಿಳಿದು ಬಂದು ಏನಾಗಿದೆ ಎಂದು ಪರಿಶೀಲನೆ ಮಾಡುವಷ್ಟೂ ಶಕ್ತಿ ಇರಲಿಲ್ಲ. ತೀವ್ರವಾಗಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಹರಿನಾಥ್ ಸ್ಥಳೀಯರು ಕೆಳಗೆ ಇಳಿ ಎಂದರೂ ಇಳಿಯಲಿಲ್ಲ. ನಂತರ, ಪೊಲೀಸರು ಬಂದರೂ ಇಳಿಯದೇ ಕಾರಿನಲ್ಲೇ ಕುಳಿತುಕೊಂಡಿದ್ದ ಆತನನ್ನು ಪೊಲೀಸರು ಜನರಿಂದ ಹಲ್ಲೆ ಮಾಡಿಸುವುದಿಲ್ಲ ಎಂದು ಭರವಸೆ ನೀಡಿ ಕಾರಿನಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತಂತೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.