ಬೆಂಗಳೂರು, (ನ.23): ಮೆಚ್ಚಿಕೊಂಡವವಳಿಗಾಗಿ ಕಟ್ಟಿಕೊಂಡವಳನ್ನು ಕೊಲೆ ಮಾಡಿದ ಹೈಡ್ರಾಮ ಮಾಡಿದ್ದ ಭೂಪ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಉತ್ತರ ಪ್ರದೇಶ ಮೂಲದ ರಾಕೇಶ್ ಕುಮಾರ್ ಗುಪ್ತ ಬಂಧಿತ ಆರೋಪಿ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ರಾಕೇಶ್ ಇನ್ನೊಬ್ಬಳ ಸಂಗ ಬೆಳೆಸಿದ್ದ. ಇದನ್ನು ಪ್ರಶ್ನೆ ಮಾಡಿದ್ದ ಪತ್ನಿ ರಾಧಳನ್ನು ರಾಕೇಶ್ ಹತ್ಯೆ ಮಾಡಿದ್ದಾನೆ.

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!

ಈ ವಿಷಯ ಯಾರಿಗೂ ಗೊತ್ತಾಗಬಾರದೆಂದು ಮೆಟ್ಟಿಲಿನಿಂದ ಬಿದ್ದು ಸಾವನ್ನಪ್ಪಿದ್ಲು ಎಂದ ಹೈಡ್ರಾಮ ಮಾಡಿದ್ದಾನೆ. ಈ ಸಂಬಂಧ ಅನುಮಾನಗೊಂಡು ರಾಧಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗ  ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಪ್ರಕರಣವನ್ನು ಬೆನ್ನಟ್ಟಿ ಕಾರ್ಯಚರಣೆ ನಡೆಸಿದಾಗ ರಾಕೇಶ್ ಗುಪ್ತನ ಗುಪ್ತ್-ಗುಪ್ತ್ ಆಟ ಬಟಾಬಯಲಾಗಿದೆ.

ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ತಾನು ಮಾಡಿರುವ ಒಂದೊಂದು ಕುತಂತ್ರವನ್ನು ಪೊಲೀಸರ ಮುಂದೆ ಕಕ್ಕಿದ್ದಾನೆ.