ಶಿವಮೊಗ್ಗ, [ನ.19]: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ದೊಡ್ಡಮಟ್ಟಿ ಗ್ರಾಮದಲ್ಲಿ ನಡೆದಿದೆ.

ಸಹೋದರನ ಪತ್ನಿ ಜತೆ ಚಕ್ಕಂದವಾಡುತ್ತಿದ್ದವನ ಹತ್ಯೆ: ಇತ್ತ ಸಂಬಂಧ ಬೆಳೆಸಿದ್ದ ಮಹಿಳೆ ಸಾವು

ಮಂಜಪ್ಪ (43) ಕೊಲೆಯಾದ ವ್ಯಕ್ತಿ. ಆಂಜನೇಯ (30) ಎಂಬಾತನೇ ಮಂಜಪ್ಪನನ್ನು ಕೊಲೆ ಮಾಡಿದ ಆರೋಪಿಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಮೇಲ್ನೊಟಕ್ಕೆ  ತಿಳಿದುಬಂದಿದೆ.

ಆಂಜನೇಯ್ಯ ಸಹೋದರ ವೆಂಕಟೆಶ್ ಪತ್ನಿ ಲಲಿತಾ ಜತೆ ಮಂಜಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದು 4 ತಿಂಗಳ ಹಿಂದೆಯೇ ಈ ಪ್ರಕರಣ ಭುಗಿಲೆದ್ದಿದ್ದು, ಕೊನೆಗೆ, ರಾಜಿ-ಸಂಧಾನ ಮೂಲಕ ಶಮನವಾಗಿತ್ತು. 

ಆದರೆ ಮಂಜಪ್ಪ ಹಳೇ ಚಾಳಿಯನ್ನು ಬಿಡದ ಮಂಜಪ್ಪ ಪುನಃ  ನಿನ್ನೆ [ಸೋಮವಾರ] ರಾತ್ರಿ ಲಲಿತಾ ಜತೆ ಚಕ್ಕಂದವಾಡಲು ಹೋಗಿದ್ದಾನೆ. ಇದನ್ನು ನೋಡಿದ ಆಂಜನೇಯ್ಯ, ಕುಪಿತಗೊಂಡು ಮಂಜಪ್ಪನನ್ನ ಹತ್ಯೆ ಮಾಡಿದ್ದಾನೆ. 

ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ; ವರ್ಷಿಣಿ ಬಿಚ್ಚಿಟ್ಳು ಲವ್, ಸೆಕ್ಸ್ ಹಿಸ್ಟ್ರಿ!

ಈ ಬಗ್ಗೆ ಕುಂಸಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಅಂಜನೇಯನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.  ಆದ್ರೆ, ಇನ್ನೊಂದೆಡೆ ವೆಂಕಟೇಶ್ ಪತ್ನಿ ಲಲಿತಾ ಈ ಘಟನೆಯಿಂದ ಹೆದರಿ ವಿಷ ಕುಡಿದು ಅಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ.