Bengaluru Crime: ಬ್ರೇಕಪ್‌ ಆಗಿದ್ದಕ್ಕೆ ಮಹಿಳೆಯ ಮುಖಕ್ಕೆ ಚಾಕುವಿನಿಂದ ಕೊಯ್ದ ಪಾಗಲ್‌ ಪ್ರೇಮಿ..!

ಬಾಣಸವಾಡಿ ಪ್ರದೇಶದಲ್ಲಿ ಪೇಯಿಂಗ್ ಗೆಸ್ಟ್‌ನಲ್ಲಿ ವಾಸಿಸುತ್ತಿದ್ದ ವಾಸಿಸುವ ಮಹಿಳೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಬೇರೆ ಯಾರೊಂದಿಗೂ ಸಂಬಂಧ ಇಟ್ಟುಕೊಳ್ಳಬಾರದು ಎಂದು ಹೇಳಿ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಚಿಕ್ಕಮಗಳೂರು ಮೂಲದ ಮಹಿಳೆ ಆರೋಪಿಸಿದ್ದಾಳೆ.

angry over break up man slashes womans face outside her office in bengaluru ash

ಬೆಂಗಳೂರು (ಮಾರ್ಚ್‌ 9, 2023):  ಬ್ರೇಕಪ್‌ ಆಗಿದ್ದಕ್ಕೆ ಸಿಟ್ಟಿಗೆದ್ದ ಆರೋಪಿಯೊಬ್ಬ ತನ್ನ ಮಾಜಿ ಗೆಳತಿಯ ಮುಖಕ್ಕೆ ಚಾಕು ಹಾಕಿರುವ ಘಟನೆ ವರದಿಯಾಗಿದೆ. ಮಾರ್ಚ್ 2 ರಂದು ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಆರೋಪಿ ಯುವಕನನ್ನು ಹುಡುಕುತ್ತಿದ್ದು, ಈ  ಘಟನೆಯ ಕುರಿತು 30 ವರ್ಷದ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಾರೆ. ಇನ್ನು, ಕಳೆದ 3 ತಿಂಗಳಲ್ಲಿ, ಬ್ರೇಕಪ್‌ ಆಗಿದ್ದಕ್ಕೆ ಪುರುಷರು ಮಹಿಳೆಯರ ಮೇಲೆ ದಾಳಿ ಮಾಡುವ ಮೂರು ಇದೇ ರೀತಿಯ ಘಟನೆಗಳು ನಗರದಲ್ಲಿ ವರದಿಯಾಗಿದ್ದು, ಇದು ಮೂವರು ಮಹಿಳೆಯರ ಸಾವಿಗೂ ಕಾರಣವಾಗಿದೆ.

ಆದರೆ, ಮಾರ್ಚ್ 2 ರಂದು ಪೂರ್ವ ಬೆಂಗಳೂರಿನಲ್ಲಿ (East Bengaluru) ನಡೆದ ಇತ್ತೀಚಿನ ಘಟನೆಯಲ್ಲಿ, ಖಾಸಗಿ ಸಂಸ್ಥೆಯೊಂದರಲ್ಲಿ ಟೆಲಿ ಕಾಲರ್  (Tele Caller) ಆಗಿದ್ದ ಮಹಿಳೆಯ ಮೇಲೆ ಅವಿನಾಶ್ ಎಂದು ಗುರುತಿಸಲಾದ ಯುವಕನು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. 2 ಎರಡು ವರ್ಷಗಳ ಕಾಲ ಸಂಬಂಧ ಹೊಂದಿದ್ದ ಇವರು ಇತ್ತೀಚೆಗೆ ಬ್ರೇಕಪ್‌ (Break Up) ಆಗಿದ್ದರು. ಇದರಿಂದ ಸಿಟ್ಟಿಗೆದ್ದ ಪಾಗಲ್‌ ಪ್ರೇಮಿ, ಆಕೆಯ ಮುಖವನ್ನು ಚಾಕುವಿನಿಂದ (Knife) ಕೊಯ್ದು ತನ್ನ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ: ಗೆಳತಿಯ ಬ್ಲ್ಯಾಕ್‌ಮೇಲ್, ಟ್ರಾಫಿಕ್‌ನಲ್ಲೇ ವಧುವನ್ನು ಬಿಟ್ಟು ಓಡಿಹೋದ ವರ!

ಬಾಣಸವಾಡಿ ಪ್ರದೇಶದಲ್ಲಿ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸಿಸುತ್ತಿದ್ದ ವಾಸಿಸುವ ಮಹಿಳೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವುದು ಹೀಗೆ.. ಬ್ರೇಕಪ್‌ ಮಾಡಿಕೊಳ್ಳುವ ನಿರ್ಧಾರದಿಂದ ಅವಿನಾಶ್ ಕೋಪಗೊಂಡಿದ್ದರು ಮತ್ತು ತಾನು ಅವನ ಫೋನ್‌ ಕರೆಗಳನ್ನು ಸ್ವೀಕರಿಸದ ಕಾರಣ ಸಿಟ್ಟಿಗೆದ್ದಿದ್ದ ಎಂದು ಹೇಳಿದ. ಬೇರೆ ಯಾರೊಂದಿಗೂ ಸಂಬಂಧ ಇಟ್ಟುಕೊಳ್ಳಬಾರದು ಎಂದು ಹೇಳಿ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಚಿಕ್ಕಮಗಳೂರು ಮೂಲದ ಮಹಿಳೆ ಆರೋಪಿಸಿದ್ದಾಳೆ.

ಇನ್ನು ಈ ಸಂಬಂಧ ಮಾಹಿತಿ ನೀಡಿದ ಪೊಲೀಸರು, “ನಾವು ದಾಳಿಕೋರನನ್ನು ಹುಡುಕುತ್ತಿದ್ದೇವೆ. ಆತನ ಕುಟುಂಬದವರನ್ನು ವಿಚಾರಣೆ ನಡೆಸಿದ್ದೇವೆ. ಅವನು ಮಹಿಳೆ ಮುಖಕ್ಕೆ ಗಾಯ ಉಂಟುಮಾಡಿದ್ದಾನೆ’’ ಎಂದು ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ನಂಬರ್ ಬ್ಲಾಕ್ ಮಾಡಿದ್ದಕ್ಕೆ ಗೆಳತಿಯ ಹತ್ಯೆ: ಕ್ಯಾಬ್‌ ಚಾಲಕನ ಬಂಧನ

ಇದೇ ರೀತಿ, ಫೆಬ್ರವರಿ 28 ರಂದು, ಆಂಧ್ರಪ್ರದೇಶದ 25 ವರ್ಷದ ಮಹಿಳೆಯೊಬ್ಬಳು ಆಗ್ನೇಯ ಬೆಂಗಳೂರಿನಲ್ಲಿರುವ ತನ್ನ ಕಚೇರಿಯ ಹೊರಗೆ ವ್ಯಕ್ತಿಯೊಬ್ಬನ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣ ಚಾಕುವಿನಿಂದ ಇರಿದು ಕೊಲ್ಲಲಾಯಿತು. ಸಂತ್ರಸ್ತೆ ಲೀಲಾ ಪವಿತ್ರಾ ಅವರಿಗೆ ಐದು ವರ್ಷಗಳಿಂದ ಪರಿಚಯವಿದ್ದ ದಿನಕರ್ ಎಸ್ (28) ಆಂಧ್ರಪ್ರದೇಶ ಮೂಲದವರಿಂದ ಬೀದಿಯಲ್ಲಿ ಚಾಕುವಿನಿಂದ ಇರಿದಿದ್ದಾರೆ. ಮುರುಗೇಶಪಾಳ್ಯದ ಮಹಿಳೆಯ ಕಚೇರಿ ಬಳಿ ರಾತ್ರಿ 7.30ಕ್ಕೆ ಈ ಘಟನೆ ನಡೆದಿತ್ತು.

ಹಾಗೆ, ಜನವರಿ 18 ರಂದು 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ನಗರದ ರಾಜಾನುಕುಂಟೆಯಲ್ಲಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ ಜನವರಿ 2 ರಂದು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಲಯಸ್ಮಿತಾ ಎಂಬ ವಿದ್ಯಾರ್ಥಿನಿಯನ್ನು ಆಕೆಯ ದೂರದ ಸಂಬಂಧಿ ಪವನ್‌ ಕಲ್ಯಾಣ್‌ ಎಂಬಾತ ಹತ್ಯೆ ಮಾಡಿದ್ದ. 

ಇದನ್ನೂ ಓದಿ: ಕೇರ್‌ಟೇಕರ್‌ ಆಗಿ ಬಂದವ ಚಿನ್ನಾಭರಣ ಕದ್ದು ಪರಾರಿಯಾದ: 10 ಲಕ್ಷಕ್ಕಾಗಿ ಮನೆಯವರ ಗೋಳಾಟ

Latest Videos
Follow Us:
Download App:
  • android
  • ios