ಬೆಂಗ್ಳೂರು ಗ್ಯಾಂಗ್ ರೇಪ್: ಸಂತ್ರಸ್ತ ಯುವತಿ ಕೇರಳದಲ್ಲಿ ಪತ್ತೆ..!
* ಬಾಣಸವಾಡಿ ಪೊಲೀಸರ ವಶದಲ್ಲಿರುವ ಸಂತ್ರಸ್ತ ಯುವತಿ
* ಆರೋಪಿಗಳ ಬಳಿ ಆಧಾರ್ ಕಾರ್ಡ್ ಪತ್ತೆ
* ಕಾಮುಕರಿಂದ ವಿಡಿಯೋ ವೈರಲ್
ಬೆಂಗಳೂರು(ಮೇ.28): ನಗರದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ಯುವತಿ ಕೇರಳದ ಕ್ಯಾಲಿಕಟ್‌ನಲ್ಲಿ ಇಂದು(ಶುಕ್ರವಾರ) ಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಸಂತ್ರಸ್ತ ಯುವತಿ ಬಾಣಸವಾಡಿ ಇನ್ಸ್‌ಪೆಕ್ಟರ್ ಸತೀಶ್, ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಹಾಗೂ ಓರ್ವ ಮಹಿಳಾ ಸಿಬ್ಬಂದಿ ವಶದಲ್ಲಿದ್ದಾಳೆ. ಇಂದು ಸಂಜೆಯೊಳಗೆ ಯುವತಿಯನ್ನ ಬೆಂಗಳೂರಿಗೆ ಕರೆ ತರಲಿದ್ದಾರೆ ಪೊಲೀಸರು. ರೇಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಂತ್ರಸ್ತ ಯುವತಿ ಕಾಣೆಯಾಗಿದ್ದಳು. ಸಂತ್ರಸ್ತ ಯುವತಿ ಪತ್ತೆ ಬೆಂಗಳೂರು ಪೊಲೀಸರು ಜಾಲ ಬೀಸಿದ್ದರು.
ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗ್ಯಾಂಗ್ ರೇಪ್ ವಿಡಿಯೋ ಉತ್ತರ ಭಾರತದಲ್ಲಿ ಹರಿದಾಡುತಿತ್ತು. ನಮ್ಮ ಕೇಂದ್ರದ ರಾಜ್ಯ ಖಾತೆ ಸಚಿವ ಕಿರೆನ್ ರಿಜಿಜು ಕೂಡ ಸೂಚನೆ ನೀಡಿದ್ದರು. ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದರು. ಅದು ಬೆಂಗಳೂರಿನಲ್ಲಿ ನಡೆದಿರೋದು ಅಂತ ಗೊತ್ತಾಯ್ತು. ವಿಷಯ ಗೊತ್ತಾದ ಕೆಲವೇ ಗಂಟೆಗಳಲ್ಲಿ ನಾವು ಆರೋಪಿಗಳನ್ನ ಬಂಧಿಸಿದ್ದೇವೆ. ಇದಕ್ಕೆ ನಮ್ಮ ಪೊಲೀಸರನ್ನು ಪ್ರಶಂಸಿಸುತ್ತೇನೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ, ರೇಪ್ ಎಸಗಿ ಮದ್ಯದ ಬಾಟಲ್ ಇಟ್ಟರು
ಪ್ರಕರಣ ಬೆಳಕಿಗೆ ಬಂದಿದ್ಹೇಗೆ..?
ಆಕೆ ನೀಡಬೇಕಿದ್ದ ಹಣವನ್ನು ನೀಡಿಲ್ಲಾ ಅಂದ್ರೆ ವಿಡಿಯೋ ವೈರಲ್ ಮಾಡುವುದಾಗಿ ಆರೋಪಿಗಳು ಸಂತ್ರಸ್ತೆಗೆ ಬ್ಲಾಕ್ ಮೇಲ್ ಮಾಡಿದ್ದರು. ಹೆದರಿಸುವ ಕಾರಣಕ್ಕಾಗಿಯೇ ಅತ್ಯಾಚಾರದ ದೃಶ್ಯಗಳನ್ನ ವಿಡಿಯೋ ರೆಕಾರ್ಡ್ ಮಾಡಿದ್ದರು. ಬಳಿಕ ಯುವತಿ ಜೊತೆಗಿದ್ದ ಇಬ್ಬರು ವಿಡಿಯೋವನ್ನು ತಮ್ಮ ಮೊಬೈಲ್‌ಗಳಿಗೆ ಕಳಿಸಿಕೊಂಡಿದ್ದರು. ಈ ವೇಳೆ ಕಾಮುಕರಿಂದ ವಿಡಿಯೋ ವೈರಲ್ ಆಗಿದೆ.
A1 ಆರೋಪಿ ರಿದಯ್ ಬಾಬು ಟಿಕ್ ಟಾಕ್ ಮಾಡುತ್ತಿದ್ದು, ಬಾಂಗ್ಲಾದೇಶದ ತನ್ನ ಪರಿಚಿತರಿಗೆ ಅತ್ಯಾಚಾರದ ವಿಡಿಯೋವನ್ನು ಶೇರ್ ಮಾಡಿದ್ದನು. ನಂತರ ಬಾಂಗ್ಲಾದೇಶದ ಸ್ಥಳೀಯ ಸುದ್ದಿವಾಹಿನಿಯಲ್ಲಿ ವಿಡಿಯೋ ಬಿತ್ತರವಾಗಿತ್ತು. ವಿಡಿಯೋ ಬಿತ್ತರವಾದ ಬಳಿಕ ಬಾಂಗ್ಲಾದೇಶದ ಪೊಲೀಸರಿಂದ A1 ಆರೋಪಿ ರಿದಯ್ ಸುಳಿವು ಪತ್ತೆಗಾಗಿ ಆತನ ಮನಗೆ ಹೋಗಿ ವಿಚಾರಿಸಿದಾಗ, ಆತ ಬೆಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು.
ಗ್ಯಾಂಗ್ ರೇಪ್: ಬಾಂಗ್ಲಾದೇಶದಿಂದ ಅಕ್ರಮ ವಲಸೆ, ಬೆಂಗ್ಳೂರಲ್ಲಿ ಆಧಾರ್ ಕಾರ್ಡ್ ಪಡೆದಿದ್ದ ಕಾಮುಕ
ಬಾಂಗ್ಲಾದೇಶ ಪೊಲೀಸರು ಬೆಂಗಳೂರು ಪೊಲೀಸರ ಸಂಪರ್ಕ ಮಾಡಿದ್ದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಡಿಯೋ ಹಾಗೂ ಮಾಹಿತಿ ರವಾನೆಯನ್ನ ಮಾಡಲಾಗಿತ್ತು. ಆಗ ಆರೋಪಿ ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ, ಬೆಂಗಳೂರಿನ ರಾಮಮೂರ್ತಿ ನಗರದ ಸುತ್ತ ಲೊಕೇಟ್ ಅಗಿತ್ತು. ತಕ್ಷಣ ಡಿಸಿಪಿ ಡಾ. ಶರಣಪ್ಪ ನೇತೃತ್ವದಲ್ಲಿ ರಾಮಮೂರ್ತಿ ನಗರ ಪೊಲೀಸರಿಂದ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದರು.
ಆರೋಪಿಗಳ ಬಳಿ ಆಧಾರ್ ಕಾರ್ಡ್ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಓರ್ವ ಆರೋಪಿ ಮೊಹಮ್ಮದ್ ಬಾಬು ಶೇಖ್ ಹೆಸರಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಈ ಆದಾರ್ ಕಾರ್ಡ್ ಸುಬ್ರಮಣ್ಯನಗರ ವಿಳಾಸದಲ್ಲಿತ್ತು ಎಂದು ತಿಳಿದು ಬಂದಿದೆ. ಉಳಿದ ಆರೋಪಿಗಳ ಬಳಿ ಏನಾದರೂ ಸರ್ಕಾರಿ ದಾಖಲೆ, ಐಡಿ ಕಾರ್ಡ್ ಇರುವ ಬಗ್ಗೆ ಹಾಗೂ ಮೊಹಮ್ಮದ್ ಬಾಬು ಶೇಖ್ ಹೇಗೆ ಆಧಾರ್ ಕಾರ್ಡ್ ಪಡೆದ ಅನ್ನೋ ಬಗ್ಗೆ ತನಿಖೆ, ಆತನ ಬಳಿಯಿರುವ ಆಧಾರ್ ಕಾರ್ಡ್ ನಕಲಿಯೋ, ಅಸಲಿಯೋ ಎಂಬ ಬಗ್ಗೆ ತನಿಖೆಯನ್ನ ಪೊಲೀಸರು ಕೈಗೊಂಡಿದ್ದಾರೆ.