Asianet Suvarna News Asianet Suvarna News

ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ, ರೇಪ್ ಎಸಗಿ ಮದ್ಯದ ಬಾಟಲ್ ಇಟ್ಟರು

* ರಾಮಮೂರ್ತಿ ನಗರದಿಂದ ಪೈಶಾಚಿಕ ಕೃತ್ಯ ವರದಿ
* ಬಾಂಗ್ಲಾ ಯುವತಿ ಮೇಲೆ ಕಾಮುಕರ ಅಟ್ಟಹಾಸ
* ದೌರ್ಜನ್ಯ ಎಸಗಿ ವಿಡಿಯೋ ಮಾಡಿ ಹರಿಬಿಟ್ಟರು
* ಮರ್ಮಾಂಗಕ್ಕೆ ಮದ್ಯದ ಬಾಟಲ್ ತುರುಕಿದ ದುರುಳರು

human trafficking racket 22-Year-Old Allegedly Gang Raped Bengaluru 4 arrested mah
Author
Bengaluru, First Published May 27, 2021, 9:13 PM IST

ಬೆಂಗಳೂರು( ಮೇ  27) ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಘೋರ ಪ್ರಕರಣವೊಂದು ಬೆಂಗಳೂರಿನ ರಾಮಮೂರ್ತಿ ನಗರದಿಂದಲೇ ವರದಿಯಾಗಿದೆ. ಬಾಂಗ್ಲಾದೇಶದ ಯುವತಿ ಮೇಲೆ  ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.

ಲಾಕ್ ಡೌನ್ ನಲ್ಲಿ  ಮಹಿಳೆ ಮೇಲೆ‌ ನಾಲ್ವರಿಂದ ಪೈಶಾಚಿಕ ಕೃತ್ಯ ನಡೆದುಹೋಗಿದೆ. ಅವಲಹಳ್ಳಿಯ ಮಾರ್ಗೊಂಡಹಳ್ಳಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ.

ಆಹಾರ ಕೇಳಿಕೊಂಡು ಬಂದ ಭಿಕ್ಷುಕಿಯ ಮೇಲೆ ಅತ್ಯಾಚಾರ

ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ಕಳೆದ 6 ದಿನಗಳ ಹಿಂದೆ ಘಟನೆ ಬೆಳಕಿಗೆ ಬಂದಿದೆ.  ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ರಾಮಮೂರ್ತಿ ನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾಮುಕರು ವಿಕೃತಿ‌ ಮೆರೆದು ಚಿತ್ರೀಕರಿಸಿದ  ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ವರು ಕಾಮುಕರು ಸಂತ್ರಸ್ತೆ ಮರ್ಮಾಂಗಕ್ಕೆ ಮದ್ಯದ ಬಾಟಲ್  ತುರುಕಿದ್ದರು.

ಘಟನೆ ನಡೆದ ಸ್ಥಳದಲ್ಲಿ  ಇಬ್ಬರು ಯುವತಿಯರು, ನಾಲ್ವರು ಯುವಕರು ಇದ್ದಿದ್ದಾಗಿ ಮಾಹಿತಿ ಸಿಕ್ಕಿದ್ದು ಇನ್ನಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು  ಎಂಬುವರ ಜತೆ ಹೈದರಾಬಾದ್ ಮೂಲದ  ಹಕೀಲ್ ಎಂಬುವರನ್ನು ಬಂಧಿಸಲಾಗಿದೆ. ಮಾನವ ಕಳ್ಳಸಾಗಾಟದ ಮೂಲಕ ಯುವತಿಯನ್ನು ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಲು ಯತ್ನಿಸಿದ್ದರು ಎನ್ನಲಾಗಿದೆ. 

Follow Us:
Download App:
  • android
  • ios