Asianet Suvarna News Asianet Suvarna News

ಬೆಂಗಳೂರು ಬಡ ತಾಯಿಯ ಮಗನ ಬೈಕ್ ಆಸೆಗೆ ಬಲಿಯಾಯ್ತು ಜೀವ!

ಬೆಂಗಳೂರಿನಲ್ಲಿ ಬೈಕ್ ಕೊಡಿಸಲು ತಡ ಮಾಡಿದ್ದಕ್ಕೆ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಹೌಸ್ ಕೀಪಿಂಗ್ ಮಾಡಿಕೊಂಡು ಮಗನನ್ನು ಸಾಕುತ್ತಿದ್ದರು.

Bengaluru College student self death because his mother did not give bike sat
Author
First Published Sep 12, 2024, 1:45 PM IST | Last Updated Sep 12, 2024, 1:45 PM IST

ಬೆಂಗಳೂರು (ಸೆ.12): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಮಗ ಅಮ್ಮಾ ನನಗೆ ಬೈಕ್ ಕೊಡಿಸು ಎಂದು ಕೇಳಿದ್ದಾನೆ. ಆದರೆ, ಮನೆಯಲ್ಲಿ ಜೀವನ ಮಾಡುವುದಕ್ಕೂ ತುಂಬಾ ಕಷ್ಟವಿದೆ. ಇಂತಹ ಕಷ್ಟದಲ್ಲಿ ಬೈಕ್ ಕೊಡಿಸಲು ಒಂದೆರೆಡು ತಿಂಗಳು ಸಮಯ ಕೇಳಿದ್ದಾಳೆ. ಇದರಿಂದ ಅಮ್ಮ ನನಗೆ ಬೈಕ್ ಕೊಡಿಸುತ್ತಿಲ್ಲವೆಂದು ಮನನೊಂದ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಘಟನೆ ಬೆಂಗಳೂರು ನಗರ ಜಿಲ್ಲೆಯ ಹೆಣ್ಣೂರಿನ ಥಣಿಸಂದ್ರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅಯ್ಯಪ್ಪ (20) ಎಂದು ಗುರುತಿಸಲಾಗಿದೆ. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಿನ್ನೆ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಇನ್ನು ಮೃತ ವಿದ್ಯಾರ್ಥಿ ಅತ್ಯಪ್ಪ ಬಿಎಸ್‌ಸಿ ಎರಡನೇ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದನು. ಕಳೆದ 6 ವರ್ಷಗಳ ಹಿಂದೆಯೇ ಅವರ ತಂದೆ ಮೃತಪಟ್ಟಿದ್ದರು. ಇನ್ನು ಅಕ್ಕನಿಗೆ ಮದುವೆಯಾಗಿ ಗಂಡನ ಮನೆ ಸೇರಿದ್ದರು. ಮನೆಯಲ್ಲಿ ತಾಯಿ ಜೊತೆಗೆ ಅಯ್ಯಪ್ಪ ವಾಸ ಮಾಡಿಕೊಂಡಿದ್ದನು.

ಬೆಂಗಳೂರು: ಕನ್ನಡ ಭಾಷೇಲಿ ಮಾತನಾಡಿ ಎಂದಿದ್ದಕ್ಕೆ ಹಿಂದಿ ಗ್ಯಾಂಗ್‌ನಿಂದ ಗೂಂಡಾಗಿರಿ..!

ಇನ್ನು ಮನೆಯಲ್ಲಿ ತಾಯಿ ಒಬ್ಬರೇ ದುಡಿಮೆ ಮಾಡುತ್ತಿದ್ದರು. ಅದು ಕೂಡ ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ಮಗನ ಓದು ಹಾಗೂ ಮನೆಯ ನಿರ್ವಹಣೆ ಮಾಡಬೇಕಿತ್ತು. ಆದರೆ, ಮನೆಯ ಬಡತನ ಹಾಗೂ ತಾಯಿಯ ದುಡಿಮೆಯ ಕಷ್ಟವನ್ನು ಅರ್ಥ ಮಾಡಿಕೊಳ್ಳದ ಮಗ ಅಯ್ಯಪ್ಪ ಪದೇ ಪದೇ ಬೈಕ್ ಕೊಡಿಸುವಂತೆ ಅಮ್ಮನಿಗೆ ಕೇಳುತ್ತಿದ್ದನು. ಮಗನಿಗಿಂತ ಯಾವುದೂ ಹೆಚ್ಚಿಲ್ಲ ಎಂದು ಬೈಕ್ ಕೊಡಿಸೋಣ ಎಂದು ತಾಯಿ ಪ್ರಯತ್ನ ಮಾಡಿದರೂ ಅವರ ಕುಟುಂಬಕ್ಕೆ ಬಡತನ ಅಡ್ಡಿಯಾಗಿತ್ತು. ಇದರಿಂದ ಸ್ವಲ್ಪ ದಿನ ಕಾಯುವಂತೆ ತಾಯಿ ಮಗನಿಗೆ ಹೇಳಿದ್ದಳು.

ಬೆಂಗಳೂರಿನಲ್ಲಿ ಉದ್ಯಮಿಗೆ 1.5 ಕೋಟಿ ರೂ. ವಂಚಿಸಿದ 5 ಜಿಎಸ್‌ಟಿ ಅಧಿಕಾರಿಗಳು ಬಂಧನ

ಮಗ ಕಾಲೇಜು ಸೇರಿದಾಗಿನಿಂದ ಬೈಕ್ ಕೇಳುತ್ತಿದ್ದಾನೆ ಎಂದು ಆತನಿಗೆ ಬೈಕ್ ಕೊಡಿಸಲೆಂದೇ ವಿವಿಧೆಡೆ 50 ಸಾವಿರ ರೂ. ಸಾಲ‌ ಕೂಡ ಮಾಡಿದ್ದಳು. ಇನ್ನೇನು ಕೆಲವು ದಿನದಲ್ಲಿ ಲೋನ್ ಮೇಲೆ ಬೈಕ್ ಕೊಡಿಸಲು ನಿರ್ಧರಿಸಿದ್ದಳು. ಆದರೆ, ಅಮ್ಮ ನನಗೆ ಬೈಕ್ ಕೊಡಿಸಿಲ್ಲವೆಂದು ಮನನೊಂದ ನಿನ್ನೆ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಎಂದಿನಂತೆ ಬೆಳಗ್ಗೆ 6 ಗಂಟೆ ತಾಯಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದಾಳೆ. ನಂತರ ಕೆಲಸದಿಂದ ವಾಪಸ್ ಸಂಜೆ 4.30 ಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಆಗಿದೆ.

Latest Videos
Follow Us:
Download App:
  • android
  • ios