ಬೆಂಗಳೂರು: ಕನ್ನಡ ಭಾಷೇಲಿ ಮಾತನಾಡಿ ಎಂದಿದ್ದಕ್ಕೆ ಹಿಂದಿ ಗ್ಯಾಂಗ್‌ನಿಂದ ಗೂಂಡಾಗಿರಿ..!
ಆನೇಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಯಾವಾಗಲೂ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.
ಆನೇಕಲ್(ಸೆ.12): ಕನ್ನಡ ಭಾಷೆಯನ್ನು ಕಲಿಯಿರಿ ಮತ್ತು ಮಾತನಾಡಿ ಎಂದು ಹೇಳಿದ್ದಕ್ಕೆ ಅನ್ಯ ಭಾಷಿಕರು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಠಾಣಾ ವ್ಯಾಪ್ತಿಯ ಸರಸ್ವತಿ ವಿದ್ಯಾ ಮಂದಿರ ಸಮೀಪದ ಮಗ್ಗದ ಮನೆಯಲ್ಲಿ ನಡೆದಿದೆ. ರುದ್ರಮ್ಮ ಲೇಔಟ್ ನಿವಾಸಿ ಶಿವಲಿಂಗ ಹಲ್ಲೆಗೊಳಗಾದ ವ್ಯಕ್ತಿ ಉತ್ತರ ಪ್ರದೇಶದ ಮನು ಅನ್ಸಾರಿ ಹಾಗೂ ಇತರರು ಶಿವಲಿಂಗ ಎಂಬುವರಿಗೆ ಕಬ್ಬಿಣದ ರಾಡ್‌ನಿಂದ ತಲೆ ಹಾಗೂ ಇತರೆಡೆ ಹಲ್ಲೆ ನಡೆಸಿದ್ದಾರೆ.
ಐ.ವಿ. ಕೃಷ್ಣಮೂರ್ತಿ ಎಂಬುವವರ ಒಡೆತ ನದ ಮಗ್ಗದ ಮನೆಯಲ್ಲಿ ಸುಮಾರು 9 ವರ್ಷದಿಂದ ಶಿವಲಿಂಗ ಕೆಲಸ ಮಾಡುತ್ತಿದ್ದಾರೆ. ಕಳೆದ 3 ತಿಂಗಳ ಹಿಂದೆ ಉತ್ತರ ಭಾರತದಿಂದ 3 ಜನ ಕೆಲಸಕ್ಕೆಂದು ಬಂದಿದ್ದರು. ಆರಂಭದಿಂದಲೂ ಭಾಷೆ ವಿಚಾರಕ್ಕೆ ಜಗಳ ನಡೆಯು ತ್ತಲೇ ಇತ್ತು. ಬುಧವಾರವೂ ಭಾಷೆ ವಿಚಾರವಾಗಿ ಜಗಳ ನಡೆದಿದ್ದು, ಶಿವಲಿಂಗ ತಲೆಗೆ ಹಿಂದಿ ಭಾಷಿಕರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಅದೃಷ್ಟವಶಾತ್ ಶಿವಲಿಂಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನ್ನಡ ಚಿತ್ರರಂಗವಾಯ್ತು, ಇದೀಗ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ!
ಈ ಸಂಬಂಧ ಆನೇಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಯಾವಾಗಲೂ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಅನ್ಯ ಭಾಷಿಕರನ್ನು ಮಗ್ಗದ ಮಾಲೀಕರು ನೇಮಿಸಿಕೊಳ್ಳುತ್ತಾರೆ. ತಲೆಮಾರುಗಳಿಂದ ಇವರ ಬಳಿ ಜೀತದಾಳುಗಳಂತೆ ದುಡಿದ ನಮಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯ ಅಸಂಘಟಿತ ಮಗ್ಗದ ನೇಕಾರರು ಅಲವತ್ತು ತೋಡಿಕೊಂಡಿದ್ದಾರೆ.
ಏನಾಯಿತು?
• ಆನೇಕಲ್‌ನ ಮಗ್ಗದಲ್ಲಿ ಕೆಲಸ ಮಾಡುತ್ತಿರುವವರ ನಡುವೆ ಭಾಷೆ ವಿಚಾರಕ್ಕೆ ತೀವ್ರ ಜಗಳ.
• ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ ಶಿವಲಿಂಗ. ಇದರಿಂದ ಸಿಟ್ಟಾದ ಉ.ಪ್ರದೇಶ ಮೂಲದ ಮೂವರಿಂದ ರಾಡ್‌ನಿಂದ ಹಲ್ಲೆ.
• ತಲೆಗೆ ತೀವ್ರ ಗಾಯ, ಪ್ರಾಣಾಪಾಯವಿಲ್ಲ