ಬೆಂಗಳೂರಿನ ರಿಚ್‌ಮಂಡ್ ಟೌನ್‌ನ Pixies Spa ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಾಂಗ್ಲಾದೇಶ ಮೂಲದ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ಹಿಂದಿನ ನಿಗೂಢತೆ ಮತ್ತು ವೇಶ್ಯವಾಟಿಕೆ ದಂಧೆಯ ಬಗ್ಗೆ ತನಿಖೆ ಮುಂದುವರೆದಿದೆ.
ಬೆಂಗಳೂರು (ಜೂ.19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪಾ ಸೆಂಟರ್ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿ, ಸಿಸಿಬಿ ಪೊಲೀಸರು ರಿಚ್‌ಮಂಡ್ ಟೌನ್‌ನಲ್ಲಿರುವ Pixies Spa ಮೇಲೆ ದಾಳಿ ನಡೆಸಿದ್ದಾರೆ.
ವೇಶ್ಯವಾಟಿಕೆ ನಡೆಸುತ್ತಿರುವ ಅನುಮಾನದ ಮೇಲೆ ಎಸಿಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಬಾಂಗ್ಲಾದೇಶ ಮೂಲದ ಡಿಂಪಲ್ ಎಂಬ ಯುವತಿಯನ್ನು ಪತ್ತೆಯಾಗಿದ್ದಾಳೆ. ಈಕೆ ಬಾಂಗ್ಲಾದೇಶದ ಜಯಶೋರ್ ಜಿಲ್ಲೆಯ ಕುಲ್ನಾ ಪ್ರದೇಶಕ್ಕೆ ಸೇರಿದವಳು ಎಂಬ ಮಾಹಿತಿ ಲಭ್ಯವಾಗಿದೆ.
ಬಾಂಗ್ಲಾದೇಶದಿಂದ ಒಳನುಸುಳಿದ್ದು ಯಾವಾಗ? ಭಾರತಕ್ಕೆ ಬಂದಿರುವ ಉದ್ದೇಶವೇನು? ವೇಶ್ಯವಾಟಿಕೆಯನ್ನ ದಂಧೆ ಮಾಡಿಕೊಂಡಿದ್ದಾಳೆ. ಈ ಎಲ್ಲ ಆಯಾಮಗಳಲ್ಲಿ
ಪ್ರಸ್ತುತ ಸಿಸಿಬಿ ಪೊಲೀಸರು ಸ್ಪಾದಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಶೀಘ್ರದಲ್ಲಿ ಬಹಿರಂಗಗೊಳ್ಳಲಿವೆ.


