Asianet Suvarna News Asianet Suvarna News

ಬೆಂಗಳೂರಿ‌ನಲ್ಲಿ ಶಂಕಿತ ಉಗ್ರ‌ನ ವಶಕ್ಕೆ ಪಡೆದ ಸಿಸಿಬಿ ಪೊಲೀಸರು

ಬೆಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ಕಾಶ್ಮೀರಿ ಮೂಲದ ಉಗ್ರನೊಬ್ಬನನ್ನು ಬಂಧನ ಮಾಡಲಾಗಿತ್ತು. ಭಾನುವಾರ (ಜುಲೈ 24) ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ತಿಲಕ್ ನಗರದಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ ಫುಡ್‌ ಡೆಲಿವರಿ ಬಾಯ್‌ ಆಗಿದ್ದ ಕೆಲ ಯುವಕರೊಂದಿಗೆ ವಾಸ್ತವ್ಯ ಮಾಡಿದ್ದ.
 

Bengaluru CCB Police Arrest Terror Suspect in Tilak Nagar san
Author
Bengaluru, First Published Jul 25, 2022, 8:30 AM IST

ಬೆಂಗಳೂರು (ಜುಲೈ 25): ಬೆಂಗಳೂರು ಸಿಸಿಬಿ ಪೊಲೀಸರು ಭಾನುವಾರ ಅಸ್ಸಾಂ ಮೂಲದ ಅಖ್ತರ್ ಹುಸೇನ್ ಹೆಸರಿನ ಲಷ್ಕರ್ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ದಾಳಿ ನಡೆಸಲಾಗಿದೆ. ತಿಲಕ್ ನಗರದ ಬಿಟಿಪಿ ಏರಿಯಾದ ಕಟ್ಟಡದ ಮೂರನೇ ಮಹಡಿ ಕೋಣೆಯಲ್ಲಿ ಈತ ವಾಸವಿದ್ದ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಕೆಲ ಯುವಕರೊಂದಿಗೆ ವಾಸ್ತವ್ಯ ಮಾಡುಯತ್ತಿದ್ದ. ಖಚಿತ ಮಾಹಿತಿ ಮೇರೆಗೆ 30 ಕ್ಕೂ ಹೆಚ್ಚು ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು. ಸ್ಥಳೀಯರ ಪ್ರಕಾರ,  ಐದಾರು ಜನ ಒಂದೇ ಕೋಣೆಯಲ್ಲಿ ಬಾಡಿಗೆಗೆ ಇದ್ದರು. ಆಗಾಗ ಕೆಲವು ಯುವಕರು ಬಂದು ಹೋಗುತ್ತಿದ್ದರು. ಇವರೆಲ್ಲರೂ ಪುಡ್ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಮಾತ್ರವೇ ಅವರು ಫುಡ್‌ ಡೆಲಿವರಿಗೆ ತೆರಳುತ್ತಿದ್ದರು. ಅವರು ಯಾರು ಎನ್ನುವುದು ನಮಗೂ ಮಾಹಿತಿಯಿಲ್ಲ. ಭಾನುವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಪೊಲೀಸರು ಬಂದು ಒಬ್ಬ ವ್ಯಕ್ತಿಯನ್ನ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟು ನಾಲ್ವರ ಬಂಧನ: ಬಾಡಿಗೆಯ ಮನೆಯಲ್ಲಿದ್ದ ಒಟ್ಟು ನಾಲ್ವರನ್ನ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ದಾಳಿಯ ವೇಳೆ ಈ ನಾಲ್ವರು ಕೂಡ ರೂಮ್‌ನಲ್ಲಿಯೇ ಇದ್ದರು.  ಇದರಲ್ಲಿ ಅಖ್ತರ್‌ ಹುಸೇನ್ ಪ್ರಮುಖನಾಗಿದ್ದು, ಅವರನೊಂದಿಗೆ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ ಐದುಗಂಟೆಗೆ ಸ್ಥಳದಲ್ಲಿ ಸಿಸಿಬಿ ಟೀಂ ಮೊಕ್ಕಾಂ ಹೂಡಿತ್ತು. ಅಖ್ತರ್‌ ಹುಸೇನ್‌ನನ್ನು ಬಂದ ಮಾಡಲೇಬೇಕು ಎನ್ನುವ ನಿಟ್ಟಿನಲ್ಲಿ ಕಾದು ಕುಳಿತಿತ್ತು. ಸಂಜೆ ಗಂಟೆಯಿಂದ ಕಾಯುತ್ತಿದ್ದ ಸಿಸಿಬಿ ತಂಡಕ್ಕೆ, 7 ಗಂಟೆಯ ವೇಳೆ ಅಕ್ತರ್‌ ಹುಸೇನ್‌ ರೂಮ್‌ಗೆ ಹೊಕ್ಕಿದ್ದ ಮಾಹಿತಿ ಸಿಕ್ಕಿತ್ತು.

Terror Suspect Arrest: ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ

8 ಗಂಟೆಯ ವೇಳೆ ಸಿಸಿಬಿ ತನ್ನ ಪೂರ್ಣ ತಂಡದೊಂದಿಗೆ ಮನೆಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿ ನಡೆಯುತ್ತಿದ್ದಂತೆ ಅಕ್ಕಪಕ್ಕದ ಸ್ಥಳೀಯರು ಅಲ್ಲಿ ಸೇರಿದ್ದರು. ಅಕ್ಕ ಪಕ್ಕದ ನಿವಾಸಿಗಳ ಬಳಿ ಮಾಹಿತಿ ಹಾಗೂ ನಂಬರ್‌ಗಳನ್ನೂ ಕೂಡ ಸಿಸಿಬಿ ಪಡೆದುಕೊಂಡಿದೆ.

ಶಂಕಿತ ಉಗ್ರನ ಬಂಧನ: ಭಯೋತ್ಪಾದಕರ ಅಡಗುತಾಣವಾಗ್ತಿದೆಯಾ ಬೆಂಗಳೂರು?

ಸಾಕಷ್ಟು ವಿಚಾರಣೆಯ ಬಳಿಕ ಬೆಳ್ಳಗ್ಗೆ ಮೂರು ಗಂಟೆಗೆ  ಅಕ್ತರ್ ಹುಸೇನ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ  ಪಕ್ಕದ ಮನೆಯಲ್ಲಿ ವಾಸವಿದ್ದ ಮಾತಾಬ್ ರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಅಂದಾಜು 15 ನಿಮಿಷಗಳ ಕಾಲ ಮಾತಾಬ್‌ರ ವಿಚಾರಣೆ ಮಾಡಿದ್ದಾರೆ.' ಎಲ್ಲಿಂದ ಬಂದ್ದಿದಿಯಾ? ಎನ್ ಕೆಲಸ ಮಾಡ್ತಿದ್ದೀಯಾ?..ಎಷ್ಟ್‌ ವರ್ಷಗಳಿಂದ ಕೆಲಸ ಮಾಡ್ತಿದ್ದೀಯಾ? ಪಕ್ಕದ ರೂಮ್ ನಲ್ಲಿ ಇರೋರು ಪರಿಚಯ ಇದಾರಾ? ಎಂದು ಎನ್ನುವ ಪ್ರಶ್ನೆಗಳನ್ನು ಪೊಲೀಸರು ಮಾತಾಬ್‌ಗೆ ಕೇಳಿದ್ದಾರೆ. 

ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ಯಾ ಬೆಂಗಳೂರು: ಉಗ್ರರಿಗೆ ಬೆಂಗಳೂರು ಅಡಗುತಾಣವಾಗುತ್ತಿದೆಯೇ ಎನ್ನುವ ಅನುಮಾನ ಈಗ ಹೆಚ್ಚಾಗಿ ಕಾಡಿದೆ. ಉಗ್ರ ಚಟುವಟಿಕೆಗಳಿಗೆ ಬೆಂಗಳೂರೇ ಸ್ಲೀಪರ್ ಸೆಲ್‌ ಯಾಕಾಗ್ತಿದೆ ಎನ್ನುವ ಅನುಮಾನ ಪೊಲೀಸರನ್ನು ಕಾಡಲು ಕಾರಣ, ಒಂದೇ ತಿಂಗಳಲ್ಲಿ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿರುವುದು. ಬೆಂಗಳೂರಿನಲ್ಲಿ ಇನ್ನೆಷ್ಟು ಶಂಕಿತರಿದ್ದಾರೆ..? ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಯೋ ಸಂಚು ಶುರುವಾಗಿದ್ಯಾ? ಎನ್ನುವ ಪ್ರಶ್ನೆಗಳು ಪೊಲೀಸರ ಮುಂದಿವೆ. ಜೂನ್ 11 ರಂದು ಶ್ರೀರಾಂಪುರದಲ್ಲಿ ತಾಲೀಬ್ ಹೆಸರಿನ ಉಗ್ರನನ್ನು ಪೊಲೀಸರು ಬಂದಿಸಿದ್ದರು. ತಾಲಿಬ್‌ ಹುಸೇನ್‌ ಕಾಶ್ಮೀರಿ ಮೂಲದವನು, 3-4 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಜುಲೈ 8 ಅಲ್ ಖೈದಾ ಉಗ್ರ ಸಂಘಟನೆಗೆ ಸಂಬಂಧಿಸಿದ ಶಂಕಿತ ಫೈಸಲ್ ಅಹ್ಮದ್‌ನನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾಂಗ್ಲಾ ಮೂಲದವನು. ಎರಡು ವರ್ಷ ನಗರದಲ್ಲಿ ವಾಸವಿದ್ದರೂ ಈತನ ಸುಳಿವೂ ಪೊಲೀಸರಿಗೆ ಸಿಕ್ಕಿರಲಿಲ್ಲ. ಕೋಲ್ಕತ್ತಾ ಪೊಲೀಸರು ಬೆಂಗಳೂರಿಗೆ ಬಂದು ಆತನನ್ನು ಬಂದನ ಮಾಡಿದ್ದರು. ಈಗ ಅಂದಾಜು 1 ವರ್ಷದಿಂದ ಬೆಂಗಳೂರಿನಲ್ಲಿ ವಾಸವಿದ್ದ ಅಖ್ತರ್ ಹುಸೇನ್‌ನನ್ನು ಬಂಧಿಸಲಾಗಿದೆ.
 

Follow Us:
Download App:
  • android
  • ios