Bengaluru: ಎರಡನೇ ಹೆಂಡ್ತಿ ಮನೆಯಿಂದ ಬಿದ್ದು ಉದ್ಯಮಿ ಸಾವು
ಇತ್ತೀಚೆಗೆ ಮದುವೆಯಾಗಿದ್ದ ಎರಡನೇ ಮದುವೆಯಾಗಿದ್ದ ಬೆಂಗಳೂರಿನ ಉದ್ಯಮಿ 2ನೇ ಹೆಂಡತಿಯ ಮನೆಯ ಮೇಲಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರು (ಆ.31): ರಾಜ್ಯ ರಾಜಧಾನಿ ಬೆಂಗಳೂರಿನ ಉದ್ಯಮಿಯೊಬ್ಬರು ತಾವು ಇತ್ತೀಚೆಗೆ ಮದುವೆಯಾಗಿದ್ದ ಎರಡನೇ ಹೆಂಡತಿಯ ಮನೆಗೆ ಹೋದಾಗ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತ ಉದ್ಯಮಿಯನ್ನು ಮಾರಾಂಜಿನಪ್ಪ (62) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಾಗರಭಾವಿಯ ಅನ್ನಪೂರ್ಣೇಶ್ವರಿ ನಗರದ ಘಟನೆ ನಡೆದಿದೆ. ಇನ್ನು ಉದ್ಯಮಿ ಮಾರಾಂಜಿನಪ್ಪ ಅವರ ಸಾವು ಕೂಡ ಹಲವು ಅನುಮಾನಗಳನ್ನು ಹುಟ್ಟು ಹಾಕುವಂತಿದೆ, ಇದು ಕೊಲೆಯೇ ಅಥವಾ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವುದೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಅನುಮಾನಗಳು ಕಂಡುಬರುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಈ ಬಗ್ಗೆ ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಿದೆ.
ಸಕ್ಕರೆನಾಡು ಮಂಡ್ಯಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮನ
ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿನ ಎರಡನೇ ಪತ್ನಿ ಮನೆಗೆ ಉದ್ಯಮಿ ಮಾರಾಂಜಿನಪ್ಪ ಬುಧವಾರ ರಾತ್ರಿ ತೆರಳಿದ್ದರು. ಇನ್ನು ಗುರುವಾರ ಬೆಳ್ಳಂಬೆಳಗ್ಗೆ 3 ಗಂಟೆ ವೇಳೆಗೆ ಉದ್ಯಮಿ ಮನೆಯ ಮೇಲಿಂದ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಗಾಯಗೊಂಡು ನರಳಾಡುತ್ತಿದ್ದ ಉದ್ಯಮಿಯನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಅವರ ಎರಡನೇ ಪತ್ನಿ ಕೂಡ ಸಾಥ್ ನೀಡಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಉದ್ಯಮಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
2ನೇ ಪತ್ನಿ ವಿರುದ್ಧ ಮಾರಾಂಜನಪ್ಪ ಕುಟುಂಬದಿಂದ ದೂರು ದಾಖಲು: ಇನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಉದ್ಯಮಿ ಸಾವಿನ ಬಗ್ಗೆ ಅನುಮಾನ ವ್ಯಕ್ತ ಪಡಿಸ್ತಿರೋ ಮಾರಾಂಜಿನಪ್ಪ ಕುಟುಂಬಸ್ಥರು, ಎರಡನೇ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಮಾರಾಂಜಿನಪ್ಪ ಕುಟುಂಬದ ಜೊತೆಗೆ ಮೊದಲ ಪತ್ನಿ ಕುಟುಂಬಸ್ಥರು ಕೂಡ ಉದ್ಯಮಿಯದ್ದು ಸಹಜ ಸಾವು ಅಲ್ಲವೆಂದು ತಿಳಿಸಿದ್ದಾರೆ. ಉದ್ಯಮಿ ಸಾವಿನ ಸಂಬಂಧವಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
12ನೇ ಮಹಡಿಯಿಂದ ಬಿದ್ದು ಮೃತಪಟ್ಟ 10ನೇ ತರಗತಿ ವಿದ್ಯಾರ್ಥಿನಿ: ಬೆಂಗಳೂರು: ಅಪ್ಪ ಸಾಫ್ಟ್‌ವೇರ್ ಇಂಜಿನಿಯರ್, ಅಮ್ಮ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿ ಆಗಿದ್ದಾಳೆ. ವಿದ್ಯಾವಂತ ಕುಟುಂಬದಲ್ಲಿ ಹುಟ್ಟಿದ್ದರೂ ಮಗಳು ಕಳೆದೆರಡು ತಿಂಗಳಿಂದ ಶಾಲೆಗೆ ಹೋಗಿರಲಿಲ್ಲ. ಮಂಗಳವಾರ ಬೆಳಗ್ಗೆ ಅಪ್ಪ-ಅಮ್ಮ ಕೆಲಸಕ್ಕೆ ಹೋದಾಗ ತಾನು ಶಾಲೆಗೆ ಹೋಗುತ್ತೇನೆಂದು 12ನೇ ಮಹಡಿ ಮೇಲೆ ಹತ್ತಿ ಅಲ್ಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಜೆಸ್ಸಿಕಾ (14) ಎಂದು ಗುರುತಿಸಲಾಗಿದೆ. ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಇಂದು ಬೆಳಿಗ್ಗೆ 10.30ರ ಸುಮಾರಿಗೆ ಘಟನೆ ನಡೆದಿದೆ. ಕಳೆದ ಎರಡು ವರ್ಷದಿಂದ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದಳು. ಅಪಾರ್ಟ್‌ಮೆಂಟ್‌ನ 11ನೇ ಮಹಡಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಖಾಸಗಿ ಶಾಲೆಯಲ್ಲಿ ಜೆಸ್ಸಿಕಾ 10ನೇ ತರಗತಿ ಓದುತಿದ್ದಳು.
Bengaluru ಅಪ್ಪ ಇಂಜಿನಿಯರ್, ಅಮ್ಮ ಟೀಚರ್: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು
ಮೂರು ತಿಂಗಳಿಂದ ಕೇವಲ 6 ದಿನ ಶಾಲೆಗೆ ಹೋಗಿದ್ದ ಬಾಲಕಿ: ಮೂಲತಃ ತಮಿಳುನಾಡಿನಿಂದ ಬಂದಿದ್ದರು. ತಂದೆ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತಿದ್ದರು.. ಅಮ್ಮ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಮಗಳು 10ನೇ ತರಗತಿ ಆಗಿದ್ದರೂ ಕಳೆದ ಎರಡು ತಿಂಗಳಿಂದ ಶಾಲೆಗೂ ಸಹ ಸರಿಯಾಗಿ ಹೊಗುತ್ತಿರಲಿಲ್ಲವಂತೆ. ಕಳೆದ ಮೂರು ತಿಂಗಳಲ್ಲಿ 6 ದಿನ ಮಾತ್ರ ತರಗತಿಗೆ ಹೋಗಿದ್ದಳು. ಇಂದು ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ತಾವು ವಾಸವಿದ್ದ ಫ್ಲೋರ್‌ನ ಮೇಲೆ ಹೋಗಿ ಅಲ್ಲಿಂದ ಬಿದ್ದಿದ್ದಾಳೆ. ಇನ್ನು ಬಾಲಕಿ ಬಿದ್ದ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ಹಾಗೂ ದೇಹವೆಲ್ಲಾ ಛಿದ್ರಗೊಂಡು ಸಾವನ್ನಪ್ಪಿದ್ದಾಳೆ. ಸದ್ಯ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.