ಬಿಎಂಟಿಸಿ ಬಸ್ ಹರಿದು ಎಲ್‌ಕೆಜಿ ಬಾಲಕಿ ಸಾವು: ಶಾಲೆಗೆ ಹೋಗುತ್ತಿದ್ದಾಗ ದುರ್ಘಟನೆ
ಬೈಕ್‌ನಲ್ಲಿ ಮಗಳನ್ನು ಶಾಲೆಗೆ ಬಿಡಲು ಹೋಗುವಾಗ ಹಿಂದೆ ಬಂದ ಯಮಸ್ವರೂಪಿ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಎಲ್‌ಕೆಜಿ ಓದುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ.
ಬೆಂಗಳೂರು (ಆ.16): ಬೈಕ್‌ನಲ್ಲಿ ಮಗಳನ್ನು ಶಾಲೆಗೆ ಬಿಡಲು ಹೋಗುವಾಗ ಹಿಂದೆ ಬಂದ ಯಮಸ್ವರೂಪಿ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬಾಲಕಿಯ ಮೇಲೆ ಹರಿದಿದೆ. ಇನ್ನು ಬಸ್ ಹರಿದ ರಭಸಕ್ಕೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಉತ್ತರಹಳ್ಳಿಯಲ್ಲಿ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಯಮಸ್ವರೂಪಿಯಾಗಿ ಪಾದಾಚಾರಿ ಮತ್ತು ಬೈಕ್ ಸವಾರರ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಅಪ್ಪನ ಜೊತೆಗೆ ಬೈಕ್‌ನಲ್ಲಿ ಶಾಲೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಪೂರ್ವಿ (4 ವರ್ಷ 6 ತಿಂಗಳು) ಸಾವನ್ನಪ್ಪಿದ ಶಾಲಾ ಬಾಲಕಿ ಆಗಿದ್ದಾಳೆ. ತಂದೆ ಪ್ರಸನ್ನ ಎಂಬುವರು ಮಗಳನ್ನ ಶಾಲೆಗೆ ಬಿಡಲು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಬೈಕ್ ಡಿಕ್ಕಿ ಹೊಡೆದಿದೆ.
ಬೆಂಗಳೂರಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಕಾಲೇಜು ಲೆಕ್ಚರ್- ಸ್ಕೂಲ್ ಟೀಚರ್ ರಕ್ಷಾ ಸಾವು
ಬಸ್ ಹೋಗುವ ಬದಿಯೇ ಬಿದ್ದ ಮಗು: ಇನ್ನು ಬಸ್ ಡಿಕ್ಕಿ ರಭಸಕ್ಕೆ ತಂದೆ ಪ್ರಸನ್ನ ಎಡಬದಿ ಬಿದ್ರೆ ಮಗಳು ಪೂರ್ವಿ ಬೈಕ್ ನ ಬಲಬದಿ ಬಿದ್ದಿದ್ದಾಳೆ. ಆ ವೇಳೆ ಪೂರ್ವಿ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಈ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದು ಘಟನೆಯನ್ನು ಪರಿಶೀಲನೆ ಮಾಡಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಸ್ ಚಾಲಕನನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ವೇಗವಾಗಿ ಬಂದು ಡಿಕ್ಕಿ ಹೊಡೆದ ಯಮಸ್ವರೂಪಿ ಬಸ್: ಈ ದುರ್ಘಟನೆಯು ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ನಡೆದಿದೆ. ಮೃತ ಬಾಲಕಿ ಪೂರ್ವಿ ಅವರ ತಂದೆ ಪ್ರಸನ್ನ ಸಿಸ್ಕೋ ಕಂಪನಿಯ ಉದ್ಯೋಗಿ ಆಗಿದ್ದಾನೆ. ಇನ್ನು ಪೂರ್ವಿ ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ನಲ್ಲಿ ಫ್ರೀ ಕೆ.ಜಿ. ಓದುತ್ತಿದ್ದಳು. ಪ್ರತಿನಿತ್ಯ ತಂದೆಯೇ ಮಗಳನ್ನ ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಇಂದು ಸಹ ಅದೇ ರೀತಿ ಮಗಳನ್ನ ಶಾಲೆಗೆ ಬಿಡಲು ಹೋಗಿದ್ದರು. ಆ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಇದಾದ ನಂತರ ಮಗಳು ಸಾವನ್ನಪ್ಪಿದರೆ, ತಂದೆ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕನ್ ಆರ್ಡರ್ ಮಾಡಿದ್ರೆ ಇಲಿ ಮಾಂಸ ಕೊಟ್ಟ ರೆಸ್ಟೋರೆಂಟ್: ನಾವು ಚೀನಾದವರಲ್ಲವೆಂದ ಗ್ರಾಹಕ
ಮತ್ತೊಂದೆಡೆ ಬೆಂಗಳೂರಿನ ಕೆಂಗೇರಿ ಬಳಿ ನಿನ್ನೆ ರಾತ್ರಿವೇಳೆ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಿಂದ ಕಾಲೇಜು ಉಪನ್ಯಾಸಕ ನರಸಪ್ಪ ಹಾಗೂ ಶಾಲಾ ಶಿಕ್ಷಕಿ ರಕ್ಷಾ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಎರಡು ಬೈಕ್ ಗಳು ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಕೆಂಗೇರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 11.40ರ ಸುಮಾರಿಗೆ ನಡೆದಿದೆ. ಮೃತರನ್ನು ನರಸಪ್ಪ (51) ರಕ್ಷಾ (21) ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಚಂದನ್ ಎನ್ನುವ ವ್ಯಕ್ತಿಯ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ. ಇನ್ನು ಕೆಂಗೇರಿ ಸಮೀಪದ ಮಾರುತಿ ನಗರ ಮುಖ್ಯ ರಸ್ತೆಯಲ್ಲಿ ಮೃತ ಯುವತಿಯ ರಕ್ಷಾಳ ಜೊತೆ ಚಂದನ್ ಪಲ್ಸರ್ ಬೈಕ್‌ನಲ್ಲಿ ಕೆಎಲ್ಇ ಕಾಲೇಜು ಕಡೆ ಸ್ಪೀಡಾಗಿ ಹೋಗುತ್ತಿದ್ದನು. ಈ ವೇಳೆ ಅದೇ ರಸ್ತೆಯಲ್ಲಿ ಬರ್ತಿದ್ದ ನರಸಪ್ಪ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.