ಅನಂತ ರಾಜು ಆತ್ಮಹತ್ಯೆ ಮಾಡಿಕೊಂಡ ಬಟ್ಟೆ ಸಿಗದ ಹಿನ್ನಲೆ ಬ್ಯಾಡರಹಳ್ಳಿ ಪೊಲೀಸರು ಅನಂತರಾಜು ಪತ್ನಿ ಸುಮಾ ವಿಚಾರಣೆಗೆ ನಡೆಸಿದ್ದಾರೆ
ಬೆಂಗಳೂರು (ಮೇ 24): ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು(46) (B P Anantharaju) ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯ ಹನಿಟ್ರ್ಯಾಪ್ ಸುಳಿಗೆ ಸಿಲುಕಿ ನಿರಂತರ ಬ್ಲ್ಯಾಕ್‌ಮೇಲ್‌ನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಈಗ ಪ್ರಕರಣಕ್ಕೆ ಟ್ವೀಸ್ಟ್ ಸಿಕ್ಕಿದ್ದು, ರೇಖಾ ಹಾಗೂ ಸುಮಾ ಆಡಿಯೋ ರಿವೀಲ್ ಬಳಿಕ ಮತ್ತೊಂದು ಮಾಹಿತಿ ಬಹಿರಂಗೊಂಡಿದೆ.
ಪತ್ನಿ ಸುಮಾ ಅನಂತ್ ರಾಜುಗೆ ನಿರಂತರವಾಗಿ ಟಾರ್ಚರ್ ನೀಡುತ್ತಿದ್ದರು. ಅನಂತ್ ರಾಜು ಕಳೆದ ಒಂದೂವರೆ ತಿಂಗಳು ಮನೆಯಿಂದಾ ಹೊರಗೆ ಬಂದಿರಲಿಲ್ಲ, ಅಲ್ಲದೇ ಯಾವ ಕಾರ್ಯಕರ್ತರನ್ನು ಕೂಡ ಭೇಟಿಯಾಗಿರಲಿಲ್ಲ.ಕಳೆದ ಒಂದೂವರೆ ತಿಂಗಳು ಪೋನ್ ಕೂಡ ರೀಸಿವ್ ಮಾಡಿರಲಿಲ್ಲ ಎನ್ನಲಾಗಿದೆ.
ಕಳೆದ 40 ದಿನಗಳ ಕಾಲ ಅನಂತ್ ಪತ್ನಿ ಸುಮಾ ಅನಂತರಾಜುಗೆ ಹೊರಗೆ ಬಿಟ್ಟಿರಲಿಲ್ಲ. 40 ದಿನ ಅನಂತರಾಜು ಮನೆಯ ಕೋಣೆಯಲ್ಲೇ ಇದ್ದರು. ಮನೆಯ ಕೋಣೆಯಿಂದ ಹೊರ ಬರದಂತೆ ಅನಂತ್ ರಾಜ್ ಪತ್ನಿ ಸುಮಾ ಸೂಚನೆ ನೀಡಿದ್ದರು ಎನ್ನಲಾಗಿದೆ. 40ದಿನಗಳ ಟಾರ್ಚರ್ ಸಹಿಸಲಾಗದೆ ಅನಂತ್ ರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಈಗ ವ್ಯಕ್ತವಾಗಿದೆ.
ಪತ್ನಿ ವಿಚಾರಣೆ: ಅನಂತ ರಾಜು ಆತ್ಮಹತ್ಯೆ ಮಾಡಿಕೊಂಡ ಬಟ್ಟೆ ಸಿಗದ ಹಿನ್ನಲೆ ಬ್ಯಾಡರಹಳ್ಳಿ ಪೊಲೀಸರು ಅನಂತರಾಜು ಪತ್ನಿ ಸುಮಾ ವಿಚಾರಣೆಗೆ ನಡೆಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಅನಂತ್ ರಾಜು ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಬಟ್ಟೆಸುಟ್ಟು ಹಾಕಿಲಾಗಿದೆ ಎಂದು ಆರೋಪಿಸಲಾಗಿದ್ದು, ಬ್ಯಾಡರಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್ ಮುಂದೆ ಸುಮಾ ಹಾಜರಾಗಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಸುಮಾ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್
ಇನ್ನು ಸುಮಾ ಹಾಗೂ ರೇಖಾ ಆಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ ಗಂಡನಿಗೆ ಟಾರ್ಚರ್ ಕೊಟ್ಟು ಸಾಯಿಸುವುದಾಗಿ ಪತ್ನಿ ಸುಮಾ ಹೇಳಿದ್ದರು. ಆಡಿಯೋ ವಿಚಾರವಾಗಿಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಬಳಿಕ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಮೇ 12 ರಂದು ರಾತ್ರಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿ ಮನೆಯಲ್ಲಿ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಡೆತ್ ಕನ್ಪರ್ಮ್ ಆಕ್ತಿದ್ದಂತೆ ಮನೆಗೆ ಮೃತದೇಹ ಕುಟುಂಬಸ್ಥರು ಕೊಂಡೊಯ್ದಿದ್ದರು. ಆ ಬಳಿಕ ಆಸ್ಪತ್ರೆಯಿಂದ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಬೆನ್ನಲ್ಲೇ ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ: ನೀರಿನ ಬಿಲ್ ಜಾಸ್ತಿ ಕೇಳಿದ ಮಾಲೀಕ: ನೇಣಿಗೆ ಶರಣಾದ ದಂಪತಿ
