ತುಮಕೂರು/ ಬೆಳಗಾವಿ(ಜ. 03)  ಜಿಂಕೆ ಹಾಗೂ ನವಿಲು ಮಾಂಸ ಮಾರಾಟಕ್ಕೆ ಯತ್ನಿಸುತ್ತದ್ದ ಖಾಸಗಿ ಹೋಟೆಲ್ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ.

ಕುಣಿಗಲ್ ಅಂಚೆಪಾಳ್ಯ ಸಮೀಪದ ಖಾಸಗಿ ಹೊಟೆಲ್ ಮೇಲೆ ದಾಳಿ ನಡೆಸಿ  ಐದು ಕೆಜಿ ಮಾಂಸ ವಶಪಡಿಸಿಕೊಂಡಿದ್ದಾರೆ. ಸತೀಶ್  ಎಂಬುವರನ್ನು ಬಂಧಿಸಿದ್ದು ಧೃಡೀಕರಣಕ್ಕಾಗಿ ಹೈದಾರಾಬಾದ್ ಲ್ಯಾಬೋರೇಟರಿ ಗೆ ಮಾಂಸ ರವಾನೆ ಮಾಡಲಾಗಿದೆ.

ಜೆಡಿಎಸ್ ವಕ್ತಾರ ಆತ್ಮಹತ್ಯೆ, ಕಾರಣ ನಿಗೂಢ

ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಕುಣಿಗಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಎಇಇ:  ನಾಲ್ಕು ಸಾವಿರ ಲಂಚ ಸ್ವೀಕರಿಸುವ ವೇಳೆ ಬೆಸ್ಕಾಂ ಎಇಇ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗುಬ್ಬಿ ತಾಲೂಕಿನ ಬೆಸ್ಕಾಂ ಕಚೇರಿ ಮೇಲೆ ದಾಳಿ ಮಾಡಿದ ಎಸಿಬಿ ಗುಬ್ಬಿ ಬೆಸ್ಕಾಂ ಎಇಇ ಮಾಯಕ್ಕಣ್ಣ ನಾಯಕ್ ರನ್ನು ಖೆಡ್ಡಾಕ್ಕೆ ಕೆಡವಿದೆ. ಕೋಲ್ಡ್ ಸ್ಟೋರೇಜ್ ಗೆ ಕನೆಕ್ಷನ್ ನೀಡಲು  4 ಸಾವಿರ ಲಂಚಕೇಳಿದ್ದು ರೈತನೊಬ್ಬನಿಂದ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾನೆ.

 ಗ್ರಾಪಂ ಅಧ್ಯಕ್ಷನ ಹತ್ಯೆ:  ಕುಡಗೋಲಿನಿಂದ ಕೊಚ್ಚಿ‌ ಬೆಳಗಾವಿ ಜಿಲ್ಲೆಯ ತಿಗಡಿ ಗ್ರಾ.ಪಂ. ಅಧ್ಯಕ್ಷನ ಬರ್ಬರ ಹತ್ಯೆ ಮಾಡಲಾಗಿದೆ. ನಾವಲಗಟ್ಟಿ- ತಿಗಡಿ ರಸ್ತೆ ಮಧ್ಯದಲ್ಲಿರೋ ಜಮೀನಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಹತ್ಯೆ ಪ್ರಕರಣ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

ಮುನ್ನಾಸಾಬ್ ಬಹಾದ್ದೂರ ಶೇಕ್ (32) ಎಂಬುವರನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದು ಸ್ಥಳಕ್ಕೆ ಬೈಲಹೊಂಗಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ತಿ‌ ವಿವಾದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.