ಉಡುಪಿ, [ಜ.03]: ಜೆಡಿಎಸ್ ವಕ್ತಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರವ ಘಟನೆ ಉಡುಪಿ ಜಿಲ್ಲೆಯ ಕೊರಂಗ್ರಪಾಡಿಯಲ್ಲಿ ನಡೆದಿದೆ.

ಪ್ರದೀಪ್ ಜಿ ಬೈಲೂರು( 37) ನೇಣಿಗೆ ಶರಣಾದ ವ್ಯಕ್ತಿ. ತಂದೆ-ತಾಯಿ ತೀರ್ಥಹಳ್ಳಿಗೆ ತೆರಳಿದ್ದಾಗ, ಇಂದು [ಶುಕ್ರವಾರ] ಕೊರಂಗ್ರಪಾಡಿಯಲ್ಲಿರುವ ನಿವಾಸದಲ್ಲಿ ಪ್ರದೀಪ್ ಜಿ ಬೈಲೂರು ನೇಣಿಗೆ ಶರಣಾಗಿದ್ದಾರೆ. 

ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಡುಪಿ ಜಿಲ್ಲಾ ಜೆಡಿಎಸ್ ವಕ್ತಾರರಾಗಿದ್ದ ಪ್ರದೀಪ್ ಅವರು ಸಹಕಾರಿ ಬ್ಯಾಂಕ್ ಅನ್ನು ನಡೆಸುತ್ತಿದ್ದರು. ಅವರು ಆರ್ಥಿಕ ಬಿಕ್ಕಟ್ಟಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ಬಳಿಕ ಆತ್ಮಹತ್ಯೆಗೆ ನಿಜಾಂಶ ಹೊರಬರಲಿದೆ.