ಮದುಮಗನ ಮೇಲೆ ಆಸಿಡ್ ದಾಳಿ ನಡೆಸಿದ ಎಕ್ಸ್ ಗರ್ಲ್‌ಫ್ರೆಂಡ್ ಅಂದರ್
ತನ್ನನ್ನು ಬಿಟ್ಟು ಬೇರೆಯವಳೊಂದಿಗೆ ಮದ್ವೆ ನಿಗದಿ ಮಾಡಿಕೊಂಡು ಮದ್ವೆಯಾಗಲು ಹೊರಟಿದ್ದ ತನ್ನ ಮಾಜಿ ಗೆಳೆಯನ ಮೇಲೆ ಮದ್ವೆ ದಿನವೇ ಯುವತಿಯೊಬ್ಬಳು ಆಸಿಡ್ ದಾಳಿ ನಡೆಸಿದ ಭೀಕರ ಘಟನೆ ಛತ್ತಿಸ್‌ಗಡ ರಾಜ್ಯದ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ.
ಜಗದಾಲ್‌ಪುರ: ತನ್ನನ್ನು ಬಿಟ್ಟು ಬೇರೆಯವಳೊಂದಿಗೆ ಮದ್ವೆ ನಿಗದಿ ಮಾಡಿಕೊಂಡು ಮದ್ವೆಯಾಗಲು ಹೊರಟಿದ್ದ ತನ್ನ ಮಾಜಿ ಗೆಳೆಯನ ಮೇಲೆ ಮದ್ವೆ ದಿನವೇ ಯುವತಿಯೊಬ್ಬಳು ಆಸಿಡ್ ದಾಳಿ ನಡೆಸಿದ ಭೀಕರ ಘಟನೆ ಛತ್ತಿಸ್‌ಗಡ ರಾಜ್ಯದ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 22 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಸಿಡ್ ದಾಳಿ (Acid Attack) ಪ್ರಕರಣದ ತನಿಖೆ ವೇಳೆ ಯುವಕನ ಮಾಜಿ ಗೆಳತಿಯ ಕೈವಾಡ ಕಂಡು ಬಂದ ಹಿನ್ನೆಲೆಯಲ್ಲಿ ಆಕೆಯನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ ಎಂದು ಬಸ್ತಾರ್‌ನ (Bastar) ಹೆಚ್ಚುವರಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ನಿವೇದಿತಾ ಪಾಲ್ (Nivedita Pal) ಹೇಳಿದ್ದಾರೆ. ಏಪ್ರಿಲ್ 19 ರಂದು ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿನ್ನೆ ಮಧುಮಗನ ಮಾಜಿ ಗೆಳತಿಯನ್ನು ಬಂಧಿಸಿದ್ದಾರೆ. 25 ವರ್ಷದ ವರ ದಮ್ರುಧರ್ ಬಘೇಲ್, ಭಾನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚೊಟೆ ಅಂಬಾಲ್ ಗ್ರಾಮದ 19 ವರ್ಷದ ಹುಡುಗಿಯೊಂದಿಗೆ ಸಪ್ತಪದಿ ತುಳಿಯಲು ಸಿದ್ಧತೆ ನಡೆಸಿದ್ದ. ಈ ವೇಳೆ ಆಸಿಡ್ ದಾಳಿ ನಡೆದಿದ್ದು, ವರ ಸೇರಿದಂತೆ ಮದುವೆಗೆ ಬಂದಿದ್ದ 10 ಸಂಬಂಧಿಗಳು ಸಣ್ಣಪುಟ್ಟ ಸುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಡಿವೋರ್ಸ್ ವಿಚಾರಣೆ ಮುಗಿಸಿ ಬಂದ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ, ಪೊಲೀಸ್ ಠಾಣೆ ಎದುರಲ್ಲೇ ನಡೆಯಿತು ಘಟನೆ!
ಘಟನೆಗೆ ಸಂಬಂಧಿಸಿದಂತೆ ಪೊಲೀಸರರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 326 ಎ (ಆಸಿಡ್ ಬಳಸಿ ಉದ್ದೇಶಪೂರ್ವಕವಾಗಿ ನೋವು ಮಾಡುವುದು) ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಗ್ರಾಮದಲ್ಲಿ ಅಳವಡಿಸಲಾಗಿದ್ದ, ಕೆಲವು ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸಿದೆವು ನಂತರ ವಧು ಹಾಗೂ ವರನ ಹಿನ್ನೆಲೆಯ ಬಗ್ಗೆಯೂ ಮಾಹಿತಿ ಕಲೆ ಹಾಕಿದೆವು. ಅಲ್ಲದೇ ಈ ಘಟನೆ ನಡೆಯುವ ವೇಳೆ ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ಯಾರು ಈ ಕೃತ್ಯ ಮಾಡಿದವರು ಎಂಬುದನ್ನು ಯಾರಿಗೂ ಗುರುತಿಸಲಾಗಿಲ್ಲ. ಆದರೆ ನಂತರ ತನಿಖೆ ಮುಂದುವರೆಸಿದಾಗ ವರನ ಮಾಜಿ ಗೆಳತಿ ಈ ಕೃತ್ಯದ ಹಿಂದೆ ಇರುವುದು ಕಂಡು ಬಂತು. ನಂತರ ಆಕೆಯನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ವರ ದಮ್ರುಧರ್ ಬಘೆಲ್ (Damrudhar Baghel) ಆಸಿಡ್ ಎರಚಿದ ಯುವತಿಯೊಂದಿಗೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದು, ಇತ್ತೀಚೆಗೆ ಆತ ಮತ್ತೊಬ್ಬ ಯುವತಿಯನ್ನು ಮದ್ವೆಯಾಗುವ ಮೂಲಕ ಈಕೆಗೆ ಮೋಸ ಮಾಡಿದ್ದ. ಬೇರೆ ಯುವತಿಯೊಂದಿಗೆ ದಮ್ರುಧರ್ ಮದ್ವೆಯಾಗುವ ವಿಚಾರ ತಿಳಿದು ಸಿಟ್ಟಿಗೆದ್ದ ಮಾಜಿ ಗೆಳತಿ ಆತನ ಮೇಲೆ ಆಸಿಡ್ ದಾಳಿ ನಡೆಸುವ ಪ್ಲಾನ್ ಮಾಡಿದ್ದಳು. ಅದಕ್ಕಾಗಿ ಆಕೆ ಕೆಲಸ ಮಾಡುವ ಮೆಣಸಿನಕಾಯಿ ತೋಟದಿಂದ ಆಸಿಡ್ ಕದ್ದಿದ್ದಳು. ಅಲ್ಲಿ ಆಸಿಡ್ ಅನ್ನು ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕೋರ್ಟ್ ಹಾಲ್‌ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!
ಇನ್ನು ತನ್ನ ಗುರುತು ಯರಿಗೂ ತಿಳಿಯದಿರಲು ಮಹಿಳೆ ಅಪರಾಧ ಕೃತ್ಯ ನಡೆಸುವಾಗ ಪುರುಷನಂತೆ ವೇಷ ಧರಿಸಿದ್ದಳು ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ. ಇದಕ್ಕೂ ಮೊದಲು ಛತ್ತಿಸ್‌ಗಢದ ಕಬೀರ್‌ಧಾಮ್ (Kabirdham) ಜಿಲ್ಲೆಯಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ಹೊಸದಾಗಿ ಮದ್ವೆಯಾದ ಜೋಡಿಯೊಂದು ತಮಗೆ ಸಿಕ್ಕಿ ಉಡುಗೊರೆಗಳನ್ನು ಬಿಚ್ಚುತ್ತಿದ್ದಾಗ ಸ್ಫೋಟ ಸಂಭವಿಸಿ ವರನ ಪತಿ ಹಾಗೂ ಹಿರಿಯ ಸಹೋದರ ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು. ವರನ ನವ ವಧುವಿನ ಮಾಜಿ ಗೆಳೆಯನೇ ಈ ಉಡುಗೊರೆಯನ್ನು ನೀಡಿ ಇಬ್ಬರ ಸಾವಿಗೆ ಕಾರಣನಾಗಿದ್ದ.