*  ಬ್ಯಾಡರಹಳ್ಳಿ ಪೊಲೀಸರ ಕಾರ್ಯಾಚರಣೆ*  ಅಕ್ರಮ ವಾಸಿ ಬಂಧನ, ಪರಾರಿಯಾದ ಪತಿಗೆ ಬಲೆ*  ಮೂರು ತಿಂಗಳ ಕಾರ್ಯಾಚರಣೆ 

ಬೆಂಗಳೂರು(ಜ.28): ಹದಿನೈದು ವರ್ಷಗಳಿಂದ ಹಿಂದೂ(Hindu) ಧರ್ಮಿಯಳ ಹೆಸರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ(Bangladesh) ಮೂಲದ ಮಹಿಳೆಯೊಬ್ಬಳನ್ನು(Woman) ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾ ಪ್ರಜೆ ರೋನಿ ಬೇಗಂ(27) ಬಂಧಿತಳಾಗಿದ್ದು(Arrest), ಈ ವೇಳೆ ತಲೆಮರೆಸಿಕೊಂಡಿರುವ ಆಕೆಯ ಪತಿ ನಿತಿನ್‌ ಕುಮಾರ್‌ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRO) ಅಧಿಕಾರಿಗಳು, ನಗರದಲ್ಲಿ ರೋನಿ ಬೇಗಂ ಎಂಬಾಕೆ ಅಕ್ರಮವಾಗಿ ನೆಲೆಸಿದ್ದಾಳೆ ಎಂದು ಬೆಂಗಳೂರಿಗೆ ಪೊಲೀಸರಿಗೆ(Police) ಮಾಹಿತಿ ನೀಡಿದ್ದರು. ಅದರನ್ವಯ ತನಿಖೆ ನಡೆಸಿದ ಬ್ಯಾಡರಹಳ್ಳಿ ಪೊಲೀಸರು, ಮೂರು ತಿಂಗಳ ಸತತ ಕಾರ್ಯಾಚರಣೆ ಬಳಿಕ ಆರೋಪಿಯನ್ನು(Accused) ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.

OG Kuppam Gang: ಗ್ರಾಹಕರ ಗಮನ ಬೇರೆಡೆ ಸೆಳೆದು ದರೋಡೆ: ಇಬ್ಬರು ಖದೀಮರು ಅಂದರ್‌

12ರ ವಯಸ್ಸಿನಲ್ಲೇ ಗಡಿದಾಟಿ ಬಂದಳು?:

2005-06ರಲ್ಲಿ ಅಕ್ರಮವಾಗಿ ಗಡಿದಾಟಿ(Border) ಭಾರತಕ್ಕೆ(India) ನುಸುಳಿದ 12 ವರ್ಷದ ರೋನಿಬೇಗಂ, ಆನಂತರ ಮುಂಬೈನ ಡ್ಯಾನ್ಸ್‌ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಆಗ ತನ್ನ ಹೆಸರನ್ನು ಪಾಯಲ್‌ ಘೋಷ್‌ ಎಂದು ಬದಲಾಯಿಸಿಕೊಂಡ ಆಕೆ, ತನ್ನನ್ನು ಬೆಂಗಾಳಿ(Bengali) ಎಂದು ಪರಿಚಯಿಸಿಕೊಂಡಿದ್ದಳು. ಆ ವೇಳೆ ಆಕೆಗೆ ಮಂಗಳೂರು(Mangaluru) ಮೂಲದ ನಿತಿನ್‌ ಪರಿಚಯವಾಗಿದೆ. ಬಳಿಕ ಪ್ರೇಮವಾಗಿ ಇಬ್ಬರು ವಿವಾಹವಾಗಿದ್ದರು.
2019ರಲ್ಲಿ ಬೆಂಗಳೂರಿಗೆ(Bengaluru) ಬಂದ ದಂಪತಿ, ಮಾಗಡಿ ರಸ್ತೆಯ ಅಂಜನಾನಗರದಲ್ಲಿ ನೆಲೆಸಿದ್ದರು. ರೋನಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದರೆ, ನಿತಿನ್‌ ಫುಡ್‌ ಡಿಲೆವರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮುಂಬೈನಲ್ಲಿದ್ದಾಗಲೇ ಸತಿ-ಪತಿ ಪಾನ್‌ ಕಾರ್ಡ್‌ ಮಾಡಿಕೊಂಡಿದ್ದರು. ಬೆಂಗಳೂರಿಗೆ ಬಂದ ಬಳಿಕ ತನ್ನ ಸ್ನೇಹಿತ ಕರ್ಮಿ ನೆರವು ಪಡೆದು ತನ್ನ ರೋನಿ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಅನ್ನು ನಿತಿನ್‌ ಮಾಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ

ತಂದೆ ಅಂತ್ಯಕ್ರಿಯೆ ತೆರಳು ಹೋಗಿ ಸಿಕ್ಕಿಬಿದ್ದಳು?

2020ರ ಜೂನ್‌ನಲ್ಲಿ ತನ್ನ ತಂದೆ ನಿಧನರಾದ ವಿಚಾರ ತಿಳಿದ ರೋನಿ, ತನ್ನ ದೇಶಕ್ಕೆ ನಿರ್ಧರಿಸಿದಳು. ಅಂತೆಯೇ ಕೊಲ್ಕತ್ತಾಕ್ಕೆ(Kolkata) ಹೋಗಿ ಅಲ್ಲಿಂದ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ(Dhaka) ಪ್ರಯಣಿಸಲು ರೋನಿ ಮುಂದಾದಳು. ಆದರೆ ಆ ವೇಳೆ ವಲಸೆ ವಿಭಾಗದ ಅಧಿಕಾರಿಗಳು, ರೋನಿ ದಾಖಲೆಗಳನ್ನು ಪರಿಶೀಲಿಸಿದಾಗ ಶಂಕೆ ಬಂದು ಪಾರ್ಸ್‌ಪೋರ್ಟ್‌(Passport) ಜಪ್ತಿ ಮಾಡಿದ್ದರು. ದಾಖಲೆಗಳ ಪರಿಶೀಲನೆ ಬಳಿಕ ಸ್ವದೇಶಕ್ಕೆ ತೆರಳುವಂತೆ ಆಕೆಗೆ ಅಧಿಕಾರಿಗಳು ಸೂಚಿಸಿ ಕಳುಹಿಸಿದ್ದರು. ಆನಂತರ ಆಕೆ ಅಕ್ರಮ ಬಾಂಗ್ಲಾ ವಲಸಿಗಳು ಎಂಬುದು ಖಚಿತವಾಗಿದೆ. ಆದರೆ ಅಷ್ಟರಲ್ಲಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಆಕೆ ಮರಳಿದ್ದಳು.

ಅಕ್ರಮ ಬಾಂಗ್ಲಾ ಪ್ರಜೆ ಬಗ್ಗೆ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದರನ್ವಯ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತ ಪಾಸ್‌ಪೋರ್ಟ್‌ ವಿಳಾಸ ಆಧರಿಸಿ ಬ್ಯಾಡರಹಳ್ಳಿ ಪೊಲೀಸರು, ಆರೋಪಿ ಪತ್ತೆಗಿಳಿದರು. ಅತ್ತ ಕೊಲ್ಕತ್ತಾದಿಂದ ಮರಳಿದ ಬಳಿಕ ಆಕೆ, ಪತಿ ಜತೆ ನಗರ ತೊರೆದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

Bengaluru Crime: 8 ವರ್ಷದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ

ಮೂರು ತಿಂಗಳ ಕಾರ್ಯಾಚರಣೆ

ಒಂದೂವರೆ ವರ್ಷದ ಹಿಂದೆ ಪ್ರಕರಣ ದಾಖಲಾದರೂ ಆರೋಪಿ ಪತ್ತೆಯಾಗದೆ, ತನಿಖೆ ಅರ್ಥಕ್ಕೆ ಸ್ಥಗಿತವಾಗಿತ್ತು. ಆದರೆ ಬ್ಯಾಡರಹಳ್ಳಿ ಠಾಣೆಗೆ ವರ್ಗಾವಣೆಗೊಂಡ ಇನ್ಸ್‌ಪೆಕ್ಟರ್‌ ಆರ್‌.ಜಿ.ರವಿಕುಮಾರ್‌ ಅವರು, ಮತ್ತೆ ಬಾಂಗ್ಲಾ ಪ್ರಜೆ ಹುಡುಕಾಟ ಶುರು ಮಾಡಿದರು. ಆಕೆಯ ಮೊಬೈಲ್‌ ಸಂಪರ್ಕದಲ್ಲಿದ್ದ ಸ್ನೇಹಿತರು ವಿಚಾರಣೆ ನಡೆಸಿದಾಗ ಆರೋಪಿ ಜಾಡು ಲಭಿಸಿತು. ಹೀಗೆ ಸತತ ಮೂರು ತಿಂಗಳ ಕಾರ್ಯಾಚರಣೆ ಕೊನೆಗೂ ಯಶಸ್ಸು ಕಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಬಾಂಗ್ಲಾ ಪ್ರಜೆಗೆ ಆಧಾರ್‌ ಕಾರ್ಡ್‌ ಹಾಗೂ ಮತದಾರರ ಗುರುತಿನ ಚೀಟಿ ಪಡೆಯಲು ನೆರವಾದವರ ಬಗ್ಗೆ ಸಹ ತನಿಖೆ ನಡೆದಿದೆ. ಮುಂಬೈ, ಕೊಲ್ಕತ್ತಾ ಸೇರಿದಂತೆ ಇತರೆ ಹುಡುಕಾಟ ನಡೆಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಅಂತ ಪಶ್ಚಿಮ ವಿಭಾಗ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.