Asianet Suvarna News Asianet Suvarna News

ಬೆಂಗಳೂರು ಜೈಲಿನಲ್ಲಿದ್ದುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದ ಸಂಜು: ಪಿಂಪ್‌ ಮಂಜುನಾಥ್‌ಗೆ ಸಾಥ್‌ ಕೊಟ್ಟೋರಾರು?

ಬೆಂಗಳೂರು ಪೊಲೀಸರಿಗೆ ಯಾಮಾರಿಸಿ ಜೈಲಿನಲ್ಲಿದ್ದುಕೊಂಡೇ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣ ಸಿಸಿಬಿ ಪೊಲೀಸರಿಂದ ಬೆಳಕಿಗೆ ಬಂದಿದೆ. 

Bangalore hi tech pimp Manjunath was engaged in prostitution while in bengaluru jail sat
Author
First Published Nov 14, 2023, 3:51 PM IST | Last Updated Nov 14, 2023, 3:51 PM IST

ಬೆಂಗಳೂರು (ನ.14): ಸಿಲಿಕಾನ್‌ ಸಿಟಿಯಲ್ಲಿರುವ ದುಡಿಮೆಗೆ ಬಂದ ಯುವಕರು ಹಾಗೂ ವ್ಯಾಪಾರೋದ್ಯಮಕ್ಕೆ ಬರುವ ಉದ್ದಿಮೆದಾರರನ್ನೇ ಗಾಳಕ್ಕೆ ಬೀಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಜೈಲಿನಲ್ಲಿದ್ದುಕೊಂಡೇ  ಹೊರ ರಾಜ್ಯದ ಹುಡುಗಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣ ಸಿಸಿಬಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ..

ಜೈಲಿಗೆ ಹೋದ್ರೂ ಬಿಡಲಿಲ್ಲ ತನ್ನ ವೇಶ್ಯಾವಾಟಿಕೆ ದಂಧೆ. ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಪ್ರವೃತ್ತಿ ಮಾಡಿಕೊಂಡಿರುವ ಪಿಂಪ್ ಜೈಲಿನಲ್ಲಿದ್ದುಕೊಂಡೇ ತನ್ನ ವೃತ್ತಿ ಮುಂದುವರೆಸಿದ್ದಾನೆ. ಈತ ಲೊಕ್ಯಾಂಟೋ ಆ್ಯಪ್ ಮುಖಾಂತರವೇ ಈತನ ಫುಲ್ ಟೈಂ ಬ್ಯೂಸಿನೆಸ್ ಮಾಡುತ್ತಿದ್ದನು. ಈ ಹಿಂದೆ ವೇಶ್ಯಾವಾಟಿಕೆ ಸುದ್ದಗುಂಟೆಪಾಳ್ಯದಲ್ಲಿ ಬಂಧನವಾಗಿ ಜೈಲಿನಲ್ಲಿರುವ ಪಿಂಪ್ ಲೊಕ್ಯಾಂಟೋ ಆಪ್ ಮುಖಾಂತರ ಹುಡುಗೀರನ್ನ ವೇಶ್ಯಾವಾಟಿಕೆಗೆ ಪ್ರಚೋದನೆ ಮಾಡುತ್ತಿದ್ದನು.

ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ ದೃಶ್ಯ ಸೆರೆಹಿಡಿದ ಯೂಟೂಬರ್: ಆತನ ಪಾಡು ನೀವೇ ನೋಡಿ..!

ಹೊರರಾಜ್ಯದಿಂದ ಕೆಲಸ ಅರಸಿ  ಬರುವ ಹುಡುಗೀಯರೇ ಈತನ ಟಾರ್ಗೆಟ್ ಆಗಿದ್ದರು. ಇಂತಹ ಹುಡುಗಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕಿ ಅವರಿಗೆ ಬಾಡಿಗೆ ಮನೆಯನ್ನು ಮಾಡಿಕೊಟ್ಟು ಅದರಲ್ಲಿ ಇರಿಸುತ್ತಿದ್ದನು. ನಂತರ ಮೊದ ಮೊದಲು ವಿವಿಧೆಡೆ ಕೆಲಸಕ್ಕೆ ಸೇರಿಸಿ, ಹೆಚ್ಚಿನ ಆದಾಯ ಗಳಿಸಲು ಈ ವೇಶ್ಯಾವಾಟಿಕೆ ದಂಧೆ ಮಾಡುವಂತೆ ಪುಸಲಾಯಿಸುತ್ತಿದ್ದನು.ಹೀಗೆ ಅನೇಕ ಹುಡುಗಿಯರ ಜೀವನವನ್ನೂ ಹಾಳು ಮಾಡಿದ್ದಾನೆ. ಇನ್ನು ಈತನ ಕುಕೃತ್ಯಕ್ಕೆ ಜೈಲನ ಹೊರಗಿದ್ದುಕೊಂಡು ಸಹಾಯ ಮಾಡಲು ಹಾಗೂ ಯುವತಿಯರ ಮೇಲೆ ಕಣ್ಣಿಟ್ಟು ಕಾಪಾಡಲು ಕೆಲವು ಯುವಕರನ್ನೂ ನೇಮಕ ಮಾಡಿದ್ದನು. 

ಆದರೆ, ಈತ ಜೈಲಿನಲ್ಲಿದ್ದುಕೊಂಡೇ ಲ್ಯೂಕೆಂಟೋ ಆಪ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದನು. ಅಲ್ಲಿ ಸೆಕ್ಸ್‌ಗೆ ಆಸಕ್ತಿ ತೋರಿಸಿದ ಗಿರಾಕಿಗಳನ್ನು ವಾಟ್ಸಪ್ ಕಾಲ್ ಮೂಲಕ ಸಂಪರ್ಕಿಸುತ್ತಿದ್ದನು. ನಂತರ ಹುಡುಗೀಯರ ಲೊಕೇಷನ್ ಕಳಿಸಿ ಹಣವನ್ನು, ಗಿರಾಕಿಗಳಿಂದ ಹುಡುಗಿಯರ ವಯಸ್ಸು, ಸೌಂದರ್ಯ ಹಾಗೂ ಸಮಯಕ್ಕೆ ಅನುಗುಣವಾಗಿ ಹಣವನ್ನು ನಿಗದಿ ಮಾಡಿ, ಗೂಗಲ್ ಪೇ ಮೂಲಕ ಹಣ ರವಾನೆ ಮಾಡಿಸಿಕೊಳ್ತಿದ್ದನು. ಹೀಗೆ, ತಾನು ಜೈಲಿನಲ್ಲಿದ್ದರೂ ಹುಳಿಮಾವು ಬಳಿ ಇರುವ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದನು. 

ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 6 ಆರೋಪಿಗಳ ಬಂಧನ!

ಈ ಹಿಂದೆ ಸುದ್ಗುಂಟೆಪಾಳ್ಯದಲ್ಲಿ ಕೂಡ ಲೊಕ್ಯಾಂಟೋ ಆ್ಯಪ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದರಿಂದಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದನು. ಈಗ ಜೈಲಿನಲ್ಲಿದ್ದರೂ ಹುಳಿಮಾವು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕಯನ್ನ ಮೇಂಟೇನ್ ಮಾಡುತ್ತಿದ್ದನು. ಈತನಿಗೆ ಅರುಣ್@ಹೊಟ್ಟೆ, ರಾಜೇಶ್@ರಾಜು, ರಾಘವೇಂದ್ರ ಹಾಗೂ ದರ್ಶನ್ ಎಂಬುವವರು  ವೇಶ್ಯಾವಾಟಿಕೆಗೆ ಸಹಕಾರ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಅಪರಾಧ ವಿಭಾಗದಿಂದ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈಗ ಜೈಲಿನಲ್ಲಿರುವ ಆರೋಪಿ ಸಂಜು ಬಿಟ್ಟು ಉಳಿದವರನ್ನ ಸಿಸಿಬಿ ವಿಚಾರಣೆ ನಡೆಸುತ್ತಿದೆ. ಜೊತೆಗೆ, ಬಾಡಿ ವಾರೆಂಟ್ ಪಡೆದು ಮಂಜುನಾಥ್ @ ಸಂಜುನನ್ನೂ ಸಿಸಿಬಿ ವಿಚಾರಣೆ ನಡೆಸಲಿದೆ.

Latest Videos
Follow Us:
Download App:
  • android
  • ios