ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 6 ಆರೋಪಿಗಳ ಬಂಧನ!
ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಹೈಟೆಕ್ ದಂಧೆ ಹೀಗೂ ಮಾಡ್ತಾರಾ ಅಂತ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ.ಆರೋಪಿಗಳು ಯುವತಿಯರನ್ನು ಡೋರ್ ಡಿಲ್ವರಿ ಮಾಡ್ತಿದ್ದ ರಹಸ್ಯ ತನಿಖೆ ವೇಳೆ ಬಯಲಾಗಿದೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಅ.18): ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆದಂಧೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಹೈಟೆಕ್ ದಂಧೆ ಹೀಗೂ ಮಾಡ್ತಾರಾ ಅಂತ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ.ಆರೋಪಿಗಳು ಯುವತಿಯರನ್ನು ಡೋರ್ ಡಿಲ್ವರಿ ಮಾಡ್ತಿದ್ದ ರಹಸ್ಯ ತನಿಖೆ ವೇಳೆ ಬಯಲಾಗಿದೆ. ಆನ್ ಲೈನ್ ಮೂಲಕ ಸಂಪರ್ಕ ಮಾಡುತ್ತಿದ್ದ ಗ್ರಾಹಕರಿಗೆ ದಂಧೆಗಾಗಿ ಕಾಲ್ ಸೆಂಟರ್ ತೆರೆಯಲಾಗಿತ್ತು. ಕಾಲ್ ಗರ್ಲ್ ಗಳಿಗಾಗಿ ಸಂಪರ್ಕಿಸೋ ಗ್ರಾಹಕರ ಕರೆಯನ್ನು ಕಾಲ್ ಸೆಂಟರ್ ಸಿಬ್ಬಂದಿ ಸ್ವೀಕರಿಸುತ್ತಿದ್ದರು. ಬಳಿಕ ಹುಡ್ಗಿ ರೇಟ್ ಮೇಲೆ ಬುಕ್ ಮಾಡಲಾಗುತ್ತಿತ್ತು.
ನಂತರ ಗ್ರಾಹಕರ ಮನೆಗೆ ಯುವತಿಯರ ಸಪ್ಲೈ ಮಾಡುತ್ತಿದ್ದರು. ಬಾಗಲುಗುಂಟೆ ಬಳಿಯ ಎಂಇಎ ಲೇಔಟ್ ನ ಅಪಾರ್ಟ್ ಮೆಂಟ್ ಪ್ಲಾಟ್ ಬಾಡಿಗೆಗೆ ತೆಗೆದುಕೊಂಡಿದ್ರು. ಪ್ಲಾಟ್ ಬಾಡಿಗೆಗೆ ಪಡೆದು ಹುಡ್ಗಿ ಇಟ್ಟುಕೊಂಡು ವೆಶ್ಯಾವಟಿಕೆ ನಡೆಸಲಾಗುತ್ತಿತ್ತು. ಕಾಲ್ ಮಾಡಿ ಬುಕ್ ಮಾಡೋ ಯುವಕರ ಜೊತೆ ಯುವತಿಯರನ್ನು ಕಳಿಸಿಕೊಡುತ್ತಿದ್ರು. ಬಾಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಧೆ ನಡೆಯುತ್ತಿತ್ತು. ಆದರೆ ಪೊಲೀಸರು ಕಣ್ಣು ಮುಚ್ಚಿಕುಳಿತ್ತಿದ್ರು ಎನ್ನಲಾಗಿದೆ. ಈ ಸಂಬಂಧ ಕೆಲದಿನಗಳ ಹಿಂದೆ ರೇಡ್ ಸಿಸಿಬಿ ತಂಡ ರೇಡ್ ಮಾಡಿದ್ರು. ಈ ವೇಳೆ ಆರೋಪಿಗಳಾದ ಮಂಜುನಾಥ್ ,ಪ್ರದೀಪ್ ,ಶಿವರಾಜ್ ,ಬಸವರಾಜ್, ರಾಯಾ, ಉಮೇಶ್ ಬಂಧಿಸಲಾಗಿದೆ.
ಇಬ್ರಾಹಿಂ ಒರಿಜಿನಲ್ ಪಕ್ಷ ಎಂಬ ಬೋರ್ಡ್ ಹಾಕಿಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಗರಂ
ಮೂವರು ಯುವತಿಯರ ರಕ್ಷಣೆ ಮಾಡಲಾಗಿದೆ.ವಿಶೇಷ ಅಂದ್ರೆ ಕಾಲ್ ಸೆಂಟರ್ ರೀತಿ ತೆರೆದು ಸಂಪರ್ಕ ಸಾಧಿಸಿ ಸಪ್ಲೈ ಮಾಡೋ ಹೊಸ ವಿಧಾನವನ್ನು ದಂಧೆಕೋರರು ಕಂಡು ಕೊಂಡಿದ್ದಾರೆ. ಆನ್ ಲೈನ್ ವೆಬ್ ಸೈಟ್ ಮೂಲಕ ಸಂಪರ್ಕಿಸುತ್ತಿದ್ದ ಗ್ರಾಹಕರಿಗೆ ಹುಡುಗಿ ಪೋಟೋ ವಾಟ್ಸಪ್ ಮಾಡುತ್ತಿದ್ದ ಆರೋಪಿಗಳು. ಯಾವ ಹುಡುಗಿ ಇಷ್ಟ ಆಗುತ್ತೋ ಆ ಹುಡ್ಗಿಗೆ ಇಷ್ಟು ಹಣ ಅಂತ ಫಿಕ್ಸ್ ಮಾಡಿ ಕಳಿಸಲಾಗುತ್ತಿತ್ತು. ಗಿರಾಕಿ ಮನೆ ಬಾಗಿಲಿಗೆ ಹೋಗಿ ಬಿಟ್ಟು ಬರುತ್ತಿದ್ದ ಆರೋಪಿಗಳು. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.