ಬರೇಲಿ(ಜ.  08) ಉತ್ತರ ಪ್ರದೇಶದ ಬುದ್ವಾನ್ ಜಿಲ್ಲೆಯಲ್ಲಿ  50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಗುರುವನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. 

ಅತ್ಯಾಚಾರದ ಆರೋಪಿಯನ್ನು ಸತ್ಯಾನಂದ್ ಎಂದು ಗುರುತಿಸಲಾಗಿದೆ, ಹತ್ತಿರದ ಹಳ್ಳಿಯಲ್ಲಿ ಅಡಗಿ ಕುಳಿತಿದ್ದ ಎಂದು ಅಧಿಕಾರಿ ಕುಮಾರ್ ಪ್ರಶಾಂತ್  ಮಾಹಿತಿ ನೀಡಿದ್ದಾರೆ. ಅರ್ಚಕನಾಗಿದ್ದ ಈತ ಏಳು ವರ್ಷಗಳ ಹಿಂದೆ ಬುದ್ವಾನ್‌ಗೆ ತೆರಳಿ ಅಲ್ಲಿ ಸ್ವಾಮೀಜಿ ಎಂದು ಬಿಂಬಿಸಿಕೊಂಡು ಪವಾಡ ನಡೆಸುತ್ತೇನೆ ಎಂದು ಜನರನ್ನು ನಂಬಿಸಿದ್ದ.

ಎಪ್ಪತ್ತರ ವೃದ್ಧೆ ಮೇಲೆ ಎರಗಿದ ತೃತೀಯ ಲಿಂಗಿ

ಕಾಮುಕರು ಮಹಿಳೆಯ ಖಾಸಗಿ ಅಂಗಗಳ ಮೇಲೆ ಕ್ರೌರ್ಯ ಮೆರೆದಿದ್ದರು.  ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಧರ್ಮಗುರು ಸೇರಿ ಆತನ ಇಬ್ಬರು ಶಿಷ್ಯರ ಮೇಲೆ ಪ್ರಕರಣ  ದಾಖಲಿಸಿಕೊಳ್ಳಲಾಗಿತ್ತು. ಒಬ್ಬ ಶಿಷ್ಯ ಮೊದಲೇ ಬಲೆಗೆ ಬಿದ್ದಿದ್ದ.

ಸಂತ್ರಸ್ತೆಯ ಗಂಡ ಹೇಳುವಂತೆ ಮಹಿಳೆ ಪೂಜೆ ಮಾಡಲು ತೆರಳುತ್ತೇನೆ ಎಂದು ಹೋಗಿದ್ದರು. ಆದರೆ ಮನೆಗೆ ವಾಪಸ್ ಬರಲೇ ಇಲ್ಲ.  ನಂತರ ಧರ್ಮಗುರುವಿನ ಶಿಷ್ಯರು ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಗೆ ಸೇರಿಸಿದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದರು.