ಬೆಂಗಳೂರು(ಜ.06): ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ 70 ವರ್ಷದ ವೃದ್ಧೆ ಮೇಲೆ ಲೈಂಗಿಕ ಅಲ್ಪಸಂಖ್ಯಾತನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಸ್ಸಾಂ ಮೂಲದ ಜ್ಯೂಲಿ ಎಂಬಾತನೇ ಈ ಕೃತ್ಯ ಎಸಗಿದ್ದು, ಮೂರು ದಿನಗಳ ಹಿಂದೆ ತನ್ನ ಪರಿಚಿತ ಅಜ್ಜಿ ಮನೆಗೆ ತೆರಳಿ ಆತ ಅತ್ಯಾಚಾರ ಎಸಗಿದ್ದಾನೆ. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜ.13ರಿಂದ ಜನಸಾಮಾನ್ಯರಿಗೆ ಕೊರೋನಾ ಲಸಿಕೆ ಲಭ್ಯ; ಕಾಂಗ್ರೆಸ್‌ಗೆ ಹೆಚ್ಚಾಯ್ತು ಅನುಮಾನ!

ಕೋರಮಂಗಲ 6ನೇ ಬ್ಲಾಕ್‌ ಸಮೀಪ ಅಜ್ಜಿ ಏಕಾಂಗಿಯಾಗಿ ನೆಲೆಸಿದ್ದಾರೆ. ಅದೇ ಪ್ರದೇಶದಲ್ಲೇ ಆರೋಪಿ, ತನ್ನ ಸಂಗಡಿಗರ ಜೊತೆ ವಾಸವಾಗಿದ್ದ. ಸೀರೆ ಉಡುತ್ತಿದ್ದರಿಂದ ಆರೋಪಿ ಜತೆ ಅಜ್ಜಿ ಸಲುಗೆ ಬೆಳೆದಿದೆ. ಈ ಸ್ನೇಹದಲ್ಲೇ ಅಜ್ಜಿಗೆ ಮನೆಗೆ ಜ್ಯೂಲಿ ಹೋಗುತ್ತಿದ್ದ‡. ಅಂತೆಯೇ ಜ.2ರಂದು ಸಂಜೆ 4 ಗಂಟೆ ಸುಮಾರಿಗೆ ಅಜ್ಜಿ ಮನೆಗೆ ಹೋದ ಆರೋಪಿ, ಆ ವೇಳೆ ಅಜ್ಜಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಕೆಲ ಹೊತ್ತಿನ ಬಳಿಕ ತನ್ನ ಸಂಬಂಧಿಕರ ಬಳಿ ಅಜ್ಜಿ ಅಳಲು ತೋಡಿಕೊಂಡಿದ್ದಾಳೆ. ತೀವ್ರ ಅಸ್ವಸ್ಥರಾಗಿದ್ದ ಅಜ್ಜಿಯನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.