ಅಪಾರ್ಟ್ ಮೆಂಟ್ ನಲ್ಲಿ ಶಾರ್ಟ್ ಸಕ್ಯೂರ್ಟ್ ಸಂಭವಿಸಿ  4 ವರ್ಷದ ಮಗುವೊಂದು ಸುಟ್ಟು ಕರಕಲಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ಏ.15): ಅಪಾರ್ಟ್ ಮೆಂಟ್ ನಲ್ಲಿ ಶಾರ್ಟ್ ಸಕ್ಯೂರ್ಟ್ ಸಂಭವಿಸಿ 4 ವರ್ಷದ ಮಗುವೊಂದು ಸುಟ್ಟು ಕರಕಲಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಅಪಾರ್ಟ್ ಮೆಂಟ್ ವೊಂದರಲ್ಲಿ ಈ ದುರ್ಘಟನೆ ನಡೆದಿದೆ. ಶಾರ್ಟ್ ಸಕ್ಯೂರ್ಟ್ ನಿಂದ ಮೃತಪಟ್ಟ 4 ವರ್ಷದ ಮಗುವನ್ನು ಅನುಪ್ ಎಂದು ಗುರುತಿಸಲಾಗಿದೆ.

ಮಂಗಳೂರಿನಲ್ಲಿ ನಡೆದಿದ್ದ ಪ್ರತ್ಯೇಕ ಮತೀಯ ಕೊಲೆ ಪ್ರಕರಣ, 4 ಹಿಂದೂ, 6 ಮುಸ್ಲಿಂ ಯುವಕರಿಗೆ ಶಿಕ್ಷೆ

ನೇಪಾಳ ಮೂಲದ ಪೂರಾನ್ ಖಂಡಕ್‌ ಹಾಗೂ ಪತ್ನಿ ಲಕ್ಷ್ಮೀ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು‌. ಘಟನೆ ನಡೆದ ಅಪಾರ್ಟ್ ಮೆಂಟ್ ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ತಾಯಿಯು ಸಹ ಅಪಾರ್ಟ್ ಮೆಂಟ್ ನಲ್ಲಿ ಹೌಸ್‌ ಕೀಪಿಂಗ್ ಆಗಿ ಕೆಲಸ‌ ಮಾಡುತ್ತಿದ್ದರು. ದಂಪತಿ ವಾಸ್ತವ್ಯಕ್ಕಾಗಿ ನೆಲ ಮಹಡಿಯಲ್ಲಿ ಮನೆ ನೀಡಲಾಗಿತ್ತು. 

ಅಲ್ಲದೆ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯನ್ನು ಕೂಡ ನೀಡಲಾಗಿತ್ತು ಎಂದಿನಂತೆ ಮಧ್ಯಾಹ್ನ ಮಗುವನ್ನ ಮಲಗಿಸಿ ಡೋರ್ ಲಾಕ್ ಹಾಕಿ ದಂಪತಿ ಹೊರ ಬಂದಿದ್ದರು.

ಡೆಲಿವರಿ ಕೊಟ್ಟ ಬಳಿಕ ಹೊರಗಿದ್ದ ರ್‍ಯಾಕ್‌ನಿಂದ ಬೆಲೆ ಬಾಳುವ ಶೋ ಎಗರಿಸಿದ ಸ್ವಿಗ್ಗಿ ಬಾಯ್!

ಈ ವೇಳೆ ಎಲೆಕ್ಟ್ರಿಕಲ್ ಶಾರ್ಟ್ ಸಕ್ಯೂರ್ಟ್ ನಿಂದ ಬೆಂಕಿ ಹೊತ್ತಿಕೊಂಡು ಮಗು ಸುಟ್ಟು ಕರಕಲಾಗಿತ್ತು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಬೆಳಕಿಗೆ ಬಂದಿದೆ. ಕೂಡಲೇ ಅಗ್ನಿಶಾಮಕದಳಕ್ಕ‌ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಮಗು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.