ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ವಸ್ತುವನ್ನು ಡೆಲಿವರಿ ಮಾಡಿದ ಬಳಿಕ ಬೆಲೆ ಬಾಳುವ ಶೂ ಅನ್ನು ಎಗರಿಸಿರುವ ಘಣನೆ ಗುರುಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹರಿಯಾಣ (ಏ.12): ಸಾವಿರಾರು ರೂ ಕೊಟ್ಟು ನೀವು ಮನೆಯ ಹೊರಗೆ ಬ್ರಾಂಡೆಡ್‌ ಶೂಗಳನ್ನು ಇಟ್ಟಿದ್ದರೆ ಅದರ ಬಗ್ಗೆ ಸ್ವಲ್ಪ ಗಮನ ಇರುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ವಸ್ತುವನ್ನು ಡೆಲಿವರಿ ಮಾಡಿದ ಬಳಿಕ ಬೆಲೆ ಬಾಳುವ ಶೂ ಅನ್ನು ಎಗರಿಸಿರುವ ಘಣನೆ ಗುರುಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಪ್ರಿಲ್ 9 ರಂದು ಗುರುಗ್ರಾಮ್‌ನ ಫ್ಲಾಟ್‌ನ ಹೊರಗೆ ಇರಿಸಲಾಗಿದ್ದ ಶೂಗಳನ್ನು ಇನ್‌ಸ್ಟಾಮಾರ್ಟ್ ಡೆಲಿವರಿ ಬಾಯ್‌ಯೊಬ್ಬ ಕದಿಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವೀಡಿಯೊಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ, ನಮ್ಮ ವಿತರಣಾ ಪಾಲುದಾರರಿಂದ ನಾವು ಉತ್ತಮವಾದದ್ದನ್ನು ನಿರೀಕ್ಷಿಸುತ್ತೇವೆ ಎಂದು ಬರೆದುಕೊಂಡಿದೆ.

ವೀಡಿಯೊದಲ್ಲಿ ದಾಖಲಾಗಿರುವಂತೆ ಡೆಲಿವರಿ ಬಾಯ್‌ ಆರ್ಡರ್ ತೆಗೆದುಕೊಂಡು ಬಂದಾಗ ಸುತ್ತಲೂ ನೋಡುತ್ತಾನೆ. ಆರ್ಡರ್‌ ಡೆಲಿವರಿ ಬಳಿಕ ಮೆಟ್ಟಿಲು ಇಳಿದು ಹೋಗಿ ಮತ್ತೆ ಮೆಲ್ಲನೆ ಹೆಜ್ಜೆ ಇಡುತ್ತಾ ಬಂದು, ಶೂಗಳನ್ನು ತೆಗೆದುಕೊಂಡು ಅಲ್ಲಿಂದ ತೆರಳಿದ್ದಾನೆ.

ಈ ಬಗ್ಗೆ ರೋಹಿತ್‌ ಅರೋರಾ ಅನ್ನುವವರು ವಿಡಿಯೋ ಅಮೇತ ಟ್ವೀಟ್ ಮಾಡಿದ್ದಾರೆ. Swiggy ನ ಡ್ರಾಪ್ ಮತ್ತು ಪಿಕ್ ಅಪ್ ಸೇವೆ. ಒಬ್ಬ ಡೆಲಿವರಿ ಬಾಯ್‌ ನನ್ನ ಸ್ನೇಹಿತನ ನೈಕಿ ಶೂಗಳನ್ನು ತೆಗೆದುಕೊಂಡು ಹೋದನು. ಸ್ವಿಗ್ಗಿ ಆತನ ಸಂಪರ್ಕದ ಸಂಖ್ಯೆಯನ್ನು ಕೂಡ ಕೊಟ್ಟಿಲ್ಲ ಎಂದಿದ್ದಾರೆ.

Scroll to load tweet…