ಭೋಪಾಲ್(ಸೆ. 10)  ಮಕ್ಕಳಾಗದ ಮಹಿಳೆಗೆ ಚಿಕಿತ್ಸೆ ನೀಡುತ್ತೇನೆ ಎಂಬ ನೆಪದಲ್ಲಿ ಮಧ್ಯಪ್ರದೇಶದ ತಾಂತ್ರಿಕ್ ಬಾಬಾ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾನೆ. 

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು  ಬಾಬಾ,  ಮಹಿಳೆಯ ಗಂಡ ಮತ್ತು ಅಳಿಯಂದರನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಬಾಬಾನ ಬಳಿಗೆ ಆಕೆಯ ಮೈದುನರೇ ಕರೆದುಕೊಂಡು ಹೋಗಿದ್ದರು.

ಬೈರ್ಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅತ್ಯಾಚಾರ ಮಾಡಿದ ಆರೋಪಿ ಬಾಬಾನನ್ನು ಕಲ್ಲು ಅಲಿಯಾಸ್ ಕಲ್ಲು ಷಾ ಎಂದು ಗುರುತಿಸಲಾಗಿದೆ.  ಮಹಿಳೆಯ ಪತಿ ಮತ್ತು ಅಳಿಯಂದಿರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಂಥ ಕಾಯಿಲೆಯನ್ನಾದರೂ ಗುಣ ಮಾಡ್ತೆನೆ ಎನ್ನುವ ಹೆಣ್ಣುಬಾಕ ಬಾಬಾ

ಆರಂಭದಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆಯನ್ನು ಬಂಧಿಸಿದ್ದರು. ನಂತರ ಬಾಬಾನ ಬಂಧನ ಮಾಡಲಾಯಿತು.

ನ್ಯಾಯಾಲಯದಲ್ಲಿ ಆರೋಪಿ ಬಾಬಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಪರಾಧದ ಗಂಭೀರ ಸ್ವರೂಪವನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್ ಜಾಮೀನು ವಿರೋಧಿಸಿತ್ತು. ಪ್ರಕರಣದ ದಿನಚರಿ ಮತ್ತು ಪ್ರಾಸಿಕ್ಯೂಷನ್ ವಾದವನ್ನು ವಿಶ್ಲೇಷಿಸಿದ ನಂತರ ನ್ಯಾಯಾಧೀಶರು ಜಾಮೀನು ತಿರಸ್ಕರಿಸಿದರು.

2019 ರ ಜೂನ್‌ನಲ್ಲಿ ಮಹಿಳೆ ಮದುವೆಯಾಗಿತ್ತು.  ಒಂದು ವರ್ಷದ ನಂತರವೂ ಮಹಿಳೆ ಗರ್ಭಧರಿಸಲು ಸಾಧ್ಯವಾಗಲಿಲ್ಲ. ಜುಲೈ 8 ರಂದು ಮಹಿಳೆಯನ್ನು ಬಾಬಾ ಬಳಿ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯನ್ನು ಕೋಣೆಗೆ ಕರೆದುಕೊಂಡು ಹೋಗಿದಗ್ದ ಬಾಬಾ ಅತ್ಯಾಚಾರ ಎಸಗಿದ್ದ.