ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹಾಸನ (ಮಾ.18): ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಹೊರವಲಯದ ಗವೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಆಟೋಚಾಲಕ ಸುಮಂತ್ (20) ಕೊಲೆಯಾದ ಯುವಕ. ಹಾಸನ ನಗರದ ಹುಣಸಿನಕೆರೆ ಸಮೀಪದ ವಿಶ್ವನಾಥ ನಗರ ನಿವಾಸಿ ಸುಮಂತ್ ನಿನ್ನೆ ಮಧ್ಯಾಹ್ನ ಸ್ನೇಹಿತರನ್ನು ನೋಡಲು ಗವೇನಹಳ್ಳಿ ಬಳಿ ತೆರಳಿದ್ದಾಗ ಯುವಕರ ನಡುವೆ ಗಲಾಟೆ ನಡೆದಿದೆ. ಗವೇನಹಳ್ಳಿಯ ಕೆಲ ಯುವಕರು, ಹಾಗೂ ಸುಮಂತ್ ನಡುವೆ ಜಗಳ ನಡೆದಿದೆ. ಈ ವೇಳೆ ಸ್ಥಳೀಯರು ಇಬ್ಬರನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ವಾಪಸ್ ಮನೆಗೆ ಬಂದಿದ್ದ ಸುಮಂತ್ ನನ್ನ ಮತ್ತೆ ಕರೆಸಿಕೊಂಡು ಕೊಲೆ ಮಾಡಿರೊ ಆರೋಪ ಕೇಳಿಬಂದಿದೆ. 

ಆಟೋ ಚಾಲಕ ಸುಮಂತ್‌ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕರು ಕೊಂದಿದ್ದಾರೆ. ಗಾಯಾಳು ಸುಮಂತ್‌ನನ್ನು ಆಸ್ಪತ್ರೆಗೆ ಪೊಲೀಸರು ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸುಮಂತ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹಿಳೆಯ ಕೊಂದು ಹೃದಯ ಕತ್ತರಿಸಿ ಬೇಯಿಸಿದ!
ಒಕ್ಲಾಹೋಮಾ: ಜೈಲಿನಿಂದ ಬಿಡುಗಡೆಯಾಗಿದ್ದ ಕೆಲವೇ ದಿನಗಳಲ್ಲಿ ವ್ಯಕ್ತಿಯೊಬ್ಬ ಮಹಿಳೆಯೋರ್ವಳನ್ನು ಕೊಲೆ ಮಾಡಿ ಬಳಿಕ ಆಕೆಯ ಹೃದಯವನ್ನು ಕತ್ತರಿಸಿ ಆಲೂಗಡ್ಡೆಯೊಂದಿಗೆ ಬೇಯಿಸಿ ತನ್ನ ಇಬ್ಬರು ಬಂಧುಗಳಿಗೆ ತಿನ್ನುವಂತೆ ಒತ್ತಾಯಿಸಿದ್ದಾನೆ. ಬಳಿಕ ತನ್ನ ಬಂಧುಗಳಾದ 4 ವರ್ಷದ ಮಗು ಸೇರಿ ಇಬ್ಬರನ್ನು ಹತ್ಯೆಗೈದಿದ್ದಾನೆ.

ಈ ಭಯಂಕರ ಘಟನೆ ಅಮೆರಿಕದ ಒಕ್ಲಾಹೋಮಾ ರಾಜ್ಯದಲ್ಲಿ ನಡೆದಿದೆ. ಆರೋಪಿ ಲಾರೆನ್ಸ್‌ ಪೌಲ್‌ ಆ್ಯಂಡರ್‌ಸನ್‌ (44) ಎಂಬ ವ್ಯಕ್ತಿ ಆ್ಯಂಡ್ರಿಯಾ ಬ್ಲ್ಯಾಂಕೆನ್‌ಶಿಪ್‌ ಎಂಬ ಮಹಿಳೆಯನ್ನು ಮೊದಲು ಕೊಲೆಗೈದು ಹೃದಯವನ್ನು ಕತ್ತರಿಸಿ ತನ್ನ ಚಿಕ್ಕಪ್ಪ, ಚಿಕ್ಕಮ್ಮನ ಮನೆಗೆ ಕೊಂಡೊಯ್ದಿದ್ದಾನೆ.

ಬೆಂಗಳೂರು ಇಂಡಿಗೋ ವಿಮಾನದಲ್ಲಿ ಸಿಗರೇಟ್‌ ಸೇದಿದ ಯುವಕ: ಪ್ರಯಾಣಿಕ

ಬಳಿಕ ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ದಂಪತಿಗಳಿಗೆ ತಿನ್ನುವಂತೆ ಒತ್ತಾಯಿಸಿದ್ದಾನೆ. ನಂತರ ಲಿಯೋನ್‌ ಪ್ಯೆ (67) ಹಾಗೂ ಅವರ ಮೊಮ್ಮಗು ಕಯೋಸ್‌ ಯಾಟೇಸ್‌ (4) ರನ್ನು ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಲಾರೆನ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Chitradurga: ಕೆರೆಯಲ್ಲಿ ಪತ್ತೆಯಾಯ್ತು ಯುವಕನ ಶವ, ಚಿಗರಿ ದೋಸ್ತ್ ಗಳ ಮೇಲೆ

ಯುವಕ ಶವ ಪತ್ತೆ, ಕೊಲೆ ಶಂಕೆ, ತನಿಖೆ
ನೆಲಮಂಗಲ: ಸಮೀಪದ ಬೈರೇಗೌಡನಹಳ್ಳಿ ಬಳಿ ಅಪಘಾತದ ರೀತಿಯಲ್ಲಿ ರಸ್ತೆ ಬದಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ನೆಲಮಂಗಲದ ಗಣೇಶನ ಗುಡಿ ಬಡಾವಣೆಯ ಚಂದು(28) ಮೃತ ಯುವಕ. ಸ್ನೇಹಿತರ ನಡುವೆ ಹಣಕಾಸಿನ ವಿಚಾರದಲ್ಲಿ ಬುಧವಾರ ರಾತ್ರಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಮೃತ ಚಂದು ಮನೆಗೆ ವಾಪಸ್‌ ತೆರಳುವ ಮಾರ್ಗದಲ್ಲಿ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲಿಸುತ್ತಿದ್ದಾರೆ.