Chitradurga: ಕೆರೆಯಲ್ಲಿ ಪತ್ತೆಯಾಯ್ತು ಯುವಕನ ಶವ, ಚಿಗರಿ ದೋಸ್ತ್ ಗಳ ಮೇಲೆ ಕಣ್ಣಿಟ್ಟ ಪೊಲೀಸರು!
ನೀರಲ್ಲಿ ಮುಳಗಿ ಸಾವನ್ನಪ್ಪಿರೋ ಯುವಕನ ಕುಟುಂಬಸ್ಥರಿಂದ ಕೊಲೆ ಆರೋಪ. ಘಟನೆ ನಡೆದು ವಾರ ಕಳೆದ ಬಳಿಕ ನ್ಯಾಯ ಒದಗಿಸಿ ಎಂದು ಪೊಲೀಸರ ಮೊರೆ ಹೋದ ಕುಟುಂಬ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.18): ಅವರೆಲ್ಲಾ ಚಿಗರಿ ದೋಸ್ತ್ ಗಳು. ದಿನ ಬೆಳಗಾದ್ರೆ ಗುಟ್ಕಾ ಹಾಕೋದ್ರಿಂದ ಹಿಡಿದು ಹಣದಾಸೆಗೆ ಬೇರೆಯವರ ಆಸ್ತಿಯನ್ನು ನಾಶ ಪಡಿಸಲು ಸಹ ಮುಂದಾಗ್ತಿದ್ದ ಖದೀಮರು. ಆದ್ರೆ ಅವರಲ್ಲಿ ಓರ್ವ ಅನುಮಾನಾಸ್ಪದವಾಗಿ ಕೆರೆಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಹೀಗಾಗಿ ಮೃತನ ಸ್ನೇಹಿತರ ಮೇಲೆಯೇ ಅನುಮಾನದ ಹುತ್ತ ಬೆಳೆದಿದೆ.
ಕೆರೆಯಲ್ಲಿ ಪತ್ತೆಯಾದ ಯುವಕನ ಮೃತದೇಹ. ಮುಗಿಲು ಮುಟ್ಟಿದ ಮೃತನ ಕುಟುಂಬಸ್ಥರ ಆಕ್ರಂದನ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿ ಗ್ರಾಮ ಹೌದು ಈ ಗ್ರಾಮದ ಪ್ರದೀಪ, ಜೀವನ್ ಮತ್ತು ಧನರಾಜ್ ಚಿಕ್ಕಂದಿನಿಂದಲೂ ಕುಚುಕು ಗೆಳೆಯರು. ದಿನಗೂಲಿಯಿಂದ ಹಿಡಿದು ರಾತ್ರಿ ಮಲಗೋ ತನಕ ಜೊತೆಗೆ ಇರುತ್ತಿದ್ದವರು.
ಆದ್ರೆ ಇತ್ತೀಚಿಗೆ ಚಿಕ್ಕಸಿದ್ದವನಹಳ್ಳಿಯ ತೋಟವೊಂದರಲ್ಲಿ ರೈತನೋರ್ವನ ಜಮೀನಿನಲ್ಲಿ ನೂರಾರು ಅಡಿಕೆ ಮರ ಕಡಿಯುವ ವಿಚಾರದಲ್ಲಿ ಈ ಮೂವರ ಮಧ್ಯೆ ವೈಮನಸು ಮೂಡಿತ್ತಂತೆ. ಹೀಗಾಗಿ ಸ್ವಲ್ಪ ದಿನ ಹಾಯ್ ಬಾಯ್ ಎಂಬಂತಿದ್ದವರು, ಕಳೆದ ಒಂದು ವಾರದ ಹಿಂದೆ ದಿಢೀರ್ ಅಂತ ಧನರಾಜನನ್ನು ಈಜಾಡಲು ಕೆರೆಗೆ ಕರೆದೊಯ್ದಿದ್ದು, ಈಜಾಡುವ ವೇಳೆ ಕೆರೆಯಲ್ಲಿ ಧನರಾಜ್ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಿದ್ದಾರೆ. ಆದ್ರೆ ಪ್ರೀಪ್ಲಾನ್ ಮರ್ಡರ್ ಎಂದು ಧನರಾಜನ ಕುಟಂಬಸ್ಥರು ಮೃತನ ಸ್ನೇಹಿತರ ಮೇಲೆ ಆರೋಪಿಸಿದ್ದಾರೆ.
ನೋಯ್ಡಾದಲ್ಲಿ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕೊಚ್ಚಿ ಚರಂಡಿಗೆಸೆದ ಪಾತಕಿಗಳು!
ಇನ್ನೂ ಈ ಘಟನೆ ನಡೆದ ದಿನ ರಾತ್ರಿಯಿಡೀ, ಪ್ರದೀಪ್ ಮತ್ತು ಜೀವನ್ ಇಬ್ಬರು ಸಹ ನಿದ್ರೆ ಮಾಡದೇ ಊರಲ್ಲಿ ಓಡಾಡಿದ್ದು, ಈ ಪ್ರಕರಣವ ಯಾರಿಗೂ ತಿಳಿಯದಂತೆ ಮರೆ ಮಾಚಲು ಯತ್ನಿಸಿದ್ದಾರೆ. ಹೀಗೆ ಈ ಆರೋಪಿಗಳ ಬಗ್ಹೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ದರೋಡೆಕೋರ ಲಾರೆನ್ಸ್ ಬಿಷ್ಣೋಯಿಗೂ ಸಲ್ಮಾನ್ ಖಾನ್ಗೂ ಏನ್ ಸಂಬಂಧ? ಯಾರೀತ?
ಒಟ್ಟಾರೆ ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಗೊತ್ತಿಲ್ಲ. ಆದ್ರೆ ಅಮಾಯಕನ ಜೀವ ಹಾರಿ ಹೋಗಿದೆ. ಹೀಗಾಗಿ ಈ ಯುವಕನ ಸಾವಿನ ಬಗ್ಗೆ ಸೂಕ್ತ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ.