Asianet Suvarna News Asianet Suvarna News

ತನ್ನದೇ ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ಕೊಟ್ಟ ಸುಂದರಿ ಶಿಕ್ಷಕಿ ಅರೆಸ್ಟ್!

ತನ್ನದೇ ಹಸ್ತಮೈಥುನದ ವಿಡಿಯೋವನ್ನು 17 ವರ್ಷದ ವಿದ್ಯಾರ್ಥಿಗೆ ಕಳುಹಿಸಿ ತನ್ನ ತೃಷೆ ತೀರಿಸಿಕೊಳ್ಳುತ್ತಿದ್ದ ಸುಂದರಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. 

Australia Police arrest female teacher for sexual harassing 17 year old student Sydney ckm
Author
First Published Aug 10, 2024, 2:07 PM IST | Last Updated Aug 10, 2024, 2:06 PM IST

ಸಿಡ್ನಿ(ಆ.10)  ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಗುರು ಶಿಷ್ಯರ ಪವಿತ್ರ ಸಂಬಂಧ ಆಧುನಿಕ ಜಗತ್ತಿನಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ ಅನ್ನೋ ಆರೋಪವಿದೆ. ಈ ಆರೋಪಕ್ಕೆ ಪುಷ್ಠಿ ನೀಡುವ ಘಟನೆಯೊಂದು ನಡೆದಿದೆ. 30 ವರ್ಷದ ಶಿಕ್ಷಕಿ ತನ್ನದೇ ಹಸ್ತಮೈಥುನದ ವಿಡಿಯೋವನ್ನು 17 ವರ್ಷದ ವಿದ್ಯಾರ್ಥಿಗೆ ಕಳುಹಿಸಿ ಬಲೆಗೆ ಬೀಳಿಸಿದ್ದಾಳೆ. ಬಳಿಕ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ಆರೋಪದಡಿ ಸುಂದರಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.

30 ವರ್ಷದ ಶಿಕ್ಷಕಿ ಟೈಲಾ ಬ್ರೈಲಿ ಪ್ರತಿಷ್ಠಿತ ಸೌತ್‌ವೆಸ್ಟ್ ಸಿಡ್ನಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಈಕೆಗೆ ಮದುವೆಯಾಗಿದೆ. ಆದರೆ ಈಕೆಗೆ ಹದಿ ಹರೆಯದ ಬಾಲಕರ ಜೊತೆ ದೈಹಿಕ ಸಂಪರ್ಕ ಬೆಳೆಸುವ ಖಯಾಲಿ. ಇದಕ್ಕಾಗಿ ಸ್ನಾಪ್‌ಚಾಟ್ ಮೂಲಕ ಅದೇ ಶಾಲೆಯ 17 ವರ್ಷದ ವಿದ್ಯಾರ್ಥಿಗೆ ಮೆಸೇಜ್ ಮಾಡಲು ಆರಂಭಿಸಿದ್ದಾಳೆ. ಶಿಕ್ಷಕಿ ಮೆಸೇಜ್‌ಗೆ ವಿದ್ಯಾರ್ಥಿ ಕೂಡ ಮೆಸೇಜ್ ಮಾಡಿದ್ದಾನೆ.

ಉದ್ದ ಕೂದಲಿಗೆ ಜುಟ್ಟು ಕಟ್ಟಿ ಪರೇಡ್ ಮಾಡಿದ ಶಿಕ್ಷಕ, ಅವಮಾನದಿಂದ ಖಿನ್ನತೆಗೆ ಜಾರಿದ ವಿದ್ಯಾರ್ಥಿ!

ವಿದ್ಯಾರ್ಥಿ ಜೊತೆ ಸಲುಗೆಯಿಂದ ಮೆಸೇಜ್ ಮಾಡಲು ಆರಂಭಿಸಿದ ಟೈಲಾ ಬ್ರೈಲಿ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾಳೆ. ಬಳಿಕ ತನ್ನದೆ ಅಶ್ಲೀಲ ವಿಡಿಯೋ ಒಂದನ್ನು ವಿದ್ಯಾರ್ಥಿಗೆ ಕಳುಹಿಸಿದ್ದಾಳೆ. ಇಷ್ಟೇ ಅಲ್ಲ ಇದೇ ರೀತಿಯ ವಿಡಿಯೋ ಕಳುಹಿಸಲು ವಿದ್ಯಾರ್ಥಿಗೆ ಬೇಡಿಕೆ ಇಟ್ಟಿದ್ದಾಳೆ. ಇವರಿಬ್ಬರ ನಡುವೆ  ಈ ರೀತಿ ಹಲವು ವಿಡಿಯೋ ಹಾಗೂ ಫೋಟೋಗಳು ವಿನಿಮಯವಾಗಿದೆ. 

ವಿದ್ಯಾರ್ಥಿ ತನ್ನ ಬಲೆಗೆ ಬಿದ್ದ ಬಳಿಕ ಆತನನ್ನು ತನ್ನ ಉತ್ತರ ವೊಲ್ಲೊಂಗ್‌ನಲ್ಲಿರುವ ಮನಗೆ ಆಹ್ವಾನಿಸಿದ್ದಾಳೆ. ಮನೆಗೆ ಬಂದ ವಿದ್ಯಾರ್ಥಿಯನ್ನು ಚುಂಬಿಸಿದ ಶಿಕ್ಷಕಿ ಹಸ್ತಮೈಥುನಕ್ಕೆ ಪ್ರಚೋದಿಸಿದ್ದಾಳೆ. ಈ ಘಟನೆ ಬಳಿಕ ಮತ್ತೊಂದು ದಿನ ಶಿಕ್ಷಕಿ ಕಾರಿನಲ್ಲಿ ವಿದ್ಯಾರ್ಥಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಶಿಕ್ಷಕಿ ಖಯಾಲಿ ಇಲ್ಲಿಗೆ ಮುಗಿದಿಲ್ಲ. ಬಳಿಕ ವಿದ್ಯಾರ್ಥಿ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾಳೆ. ಪ್ರತಿ ದಿನ ಮನೆಗೆ ಬರುವಂತೆ ಒತ್ತಾಯಿಸಿದ್ದಾಳೆ. ಒತ್ತಡಕ್ಕೆ ಸಿಲುಕಿದ ಬಾಲಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಲಕನಿಂದ ವಿಡಿಯೋ, ಫೋಟೋಗಳನ್ನು ವಶಪಡಿಸಿ ತನಿಖೆ ನಡೆಸಿದ ಪೊಲೀಸರು ಶಿಕ್ಷಕಿಯನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಕೋರ್ಟ್‌ನಲ್ಲಿ ಶಿಕ್ಷಕಿ ಷರತ್ತುಬದ್ಧ ಜಾಮೀನು ಪಡೆದಿದ್ದಾಳೆ.  

8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಶಿಕ್ಷಕಿ ಅರೆಸ್ಟ್!
 

Latest Videos
Follow Us:
Download App:
  • android
  • ios