ಪ್ರತಿಷ್ಠಿತ ಕಂಪನಿ ಹೆಸ್ರಲ್ಲಿ ವಂಚನೆಗೆ ಯತ್ನ: KIA ಕಾರ್‌ ಆಸೆಗೆ ಬಿದ್ರೆ ಹಣ್ಣ ಕಳ್ಕೋಳುದು ಗ್ಯಾರಂಟಿ..!

*  ನಿಮ್ಮ ಮನೆಗೂ ಬಹುಮಾನದ ಪತ್ರ ಬರಬಹುದು ಎಚ್ಚರ 
*  KIA ಕಾರ್‌ ಆಮೀಷ ತೋರಿಸಿ ಹಣ ಸುಲಿಯುತ್ತಾರೆ ಹುಷಾರ್
*  14 ಲಕ್ಷದ ಕಾರ್‌ ಗೆ ಬರೀ 14 ಸಾವಿರ ಕಟ್ಟಿ ಎಂದು ವಂಚನೆ 
 

Attempt to Fraud in The Name of Prestigious Company in Vijayapura grg

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಏ 12) : ಹಣ ಮಾಡೋದಕ್ಕೆ ಖದೀಮರು ಒಂದಿಲ್ಲೊಂದು ಅಡ್ಡದಾರಿಯನ್ನ ಹಿಡಿದೆ ಇರ್ತಾರೆ. ಈ ವರೆಗೆ ಓ.ಟಿ.ಪಿ ಕೇಳಿ, ಕೆಲ ಲಿಂಕ್‌ಗಳನ್ನ ಖಾತೆಯಲ್ಲಿ ಹಣ ಲಪಟಾಯಿಸುತ್ತಿದ್ದರು. ಆದ್ರೀಗ ಪ್ರತಿಷ್ಠಿತ ಕಂಪನಿಗಳ ಹೆಸ್ರಲ್ಲಿ ವಂಚನೆಗೆ ಖದೀಮರು ಮುಂದಾಗಿದ್ದಾರೆ. ಮೊನ್ನೆಯಷ್ಟೇ ವಿಜಯಪುರದಲ್ಲಿ ಸೈನಿಕ ಶಾಲೆ ಹೆಸ್ರಲ್ಲಿ ಮೋಸಕ್ಕೆ ಯತ್ನಿಸಿದ ಪ್ರಕರಣಗಳು ಹಸಿಯಾಗಿ ಇರೋವಾಗ್ಲೇ ಈಗ ನಾಪ್‌ತೋಲ್‌ ಹೆಸ್ರಲ್ಲಿ ಹಣ ಲಫಟಾಯಿಸೋ ದಂಧೆ ಶುರುವಾಗಿದೆ..

ಪ್ರೀ KIA ಕಾರ್‌, ನಂಬಿದ್ರೆ ಮಕ್ಮಲ್‌ ಟೋಪಿ ಪಿಕ್ಸ್..!

ಟಿವಿಗಳಲ್ಲಿ ನೋಡಿ NAAPTOL ನಿಂದ ಸಾಕಷ್ಟು ಜನರು ದೈನಂದಿನ ಬಳಕೆಯ ವಸ್ತುಗಳನ್ನ ಖರೀದಿಸ್ತಾರೆ. ಆದ್ರೀಗ ಇದೆ ಕಂಪನಿ ಹೆಸ್ರಲ್ಲಿ ಮನೆಗಳಿಗೆ ಪತ್ರಗಳು ಬರ್ತಿವೆ. ಪತ್ರಗಳಲ್ಲಿ ನಿಮಗೆ ಹೊಸ KIA ಕಾರ್‌ ಬಹುಮಾನವಾಗಿ ಸಿಕ್ಕಿದೆ.. ಲಕ್ಕಿ ಡ್ರಾದಲ್ಲಿ ನೀವು ಆಯ್ಕೆಯಾಗಿದ್ದೀರಿ ಅಂತಾ ಪತ್ರದಲ್ಲಿ ನಮೂದಿಸಿರ್ತಾರೆ. ಪತ್ರ ತಲುಪಿದ ಬಳಿಕ ಕಾಲ್‌ ಮಾಡಿ ಕಾರ್‌ ಪಡೆಯಿರಿ ಅಂತಾ ಒಂದು ನಂಬರ್‌ ಸಹ ಕೊಟ್ಟಿರ್ತಾರೆ. ಇದನ್ನೆನಾದ್ರು ನಂಬಿ ಕರೆ ಮಾಡಿದ್ರೆ ಮುಗಿದೆ ಹೋಯ್ತು.. ಕಾರ್‌ ನಿಮಗೆ ಸಿಗಬೇಕಾದ್ರೆ ಕಾರ್‌ ಬೆಲೆಯ 1 ಪರ್ಸಂಟ್‌ ಟ್ಯಾಕ್ಸ್‌ (Tax) ಕಟ್ಟಬೇಕಾಗುತ್ತೆ. ಉಳಿದ್ದನ್ನ ಕಂಪನಿ ಕಟ್ಟುತ್ತೆ ಅಂತಾ ಕಟ್ಟು ಕಥೆಯೊಂದನ್ನ ಹೇಳ್ತಾರೆ. ಇದನ್ನೆನಾದ್ರು ನಂಬಿ ಹಣವನ್ನ ಕಟ್ಟಿದ್ರೆ ಮುಗಿತು. ಬಳಿಕ ಇನ್ನು ನಾಲ್ಕು ಪರ್ಸೆಂಟ್‌ ಕಟ್ಟಿ ಅಂತಾ ಮೂರು ನಾಮ ಎಳೆದು ಬಿಡ್ತಾರೆ.

Attempt to Fraud in The Name of Prestigious Company in Vijayapura grg

Bengaluru Crime: ಕಬ್ಬಿಣದ ರಾಡ್‌ನಿಂದ ಬಡಿದು ಪತಿಯನ್ನೇ ಕೊಂದಳು..!

ವಿಜಯಪುರದ ಯುವಕರ ಮನೆಗಳು ಬಂದ ವಂಚಕರ ಪತ್ರ..!

ವಿಜಯಪುರ ನಗರದ ಜಾಡರ ಗಲ್ಲಿಯ ವಿನಾಯಕ್‌ ಗಣಿ, ಸಂತೋಷ, ವಿನೋದ ಎಂಬುವರಿಗು ನಾಪ್‌ ತೋಲ್‌ ನಿಂದ ಪತ್ರಗಳು ಮನೆಗೆ ಬಂದಿವೆ. ಪತ್ರಗಳಲ್ಲಿ ಮೇಲೆ ಹೇಳಿದಂತೆ 14 ಲಕ್ಷ ಮೌಲ್ಯದ ಕಿಯಾ ಕಾರ್‌ ಗೆದ್ದಿದ್ದೀರಿ, ಬೇಗ 1 ಪರ್ಸಂಟ್‌ ಹಣ ಕಟ್ಟಿ ಕಾರು ಮನೆಗೆ ತಗೊಂಡು ಹೋಗಿ ಬರೆದಿದ್ದಾರೆ. ಕಾಲ್‌ ಮಾಡಿದಾಗ ಆಧಾರ್‌ ಕಾರ್ಡ್‌, ಕೆಲ ದಾಖಲಾತಿ ಪಡೆದು ಒಂದು ಪರ್ಸಂಟ್‌ ಹಣವಾಗಿ 14,800 ರೂಪಾಯಿ ಕಟ್ಟಿ, ಬಳಿಕ ಕಾರ್‌ ನಿಮ್ಮ ಮನೆಗೆ ಬರುತ್ತೆ ಎಂದಿದ್ದಾರೆ. ಆದ್ರೆ ವಿನಾಯಕ ಗಣಿ ಸೇರಿ ಇತರೆ ಗೆಳೆಯರು ಇದನ್ನ ನಂಬದೇ ಪತ್ರವನ್ನ ಹರಿದು ಬಿಸಾಕಿದ್ದಾರೆ. ಗೆಳೆಯರಿಗೆ ಇಂಥ ಆಫರ್‌ ಗಳನ್ನ ನಂಬಬೇಡಿ ಎಂದು ಮಾಹಿತಿ ತಲುಪಿಸಿದ್ದಾರೆ.

ಕೌನ್‌ ಬನೇಗಾ ಕರೋಡ್‌ ಪತಿ ಹೆಸ್ರಲ್ಲು ವಂಚನೆ..!

ಕೌನ್ ಬನೇಗಾ ಕರೋಡಪತಿ (Kaun Banega Crorepati KDC) ಅನ್ನೋ ಕಾರ್ಯಕ್ರಮದ ಲಕ್ಕಿ ವಿಜೇತರರಾಗಿದ್ದೀರಿ, ಮೊದಲು ತೆರಿಗೆ ಹಣ ಹಾಕಿ ಅಂತ್ಹೇಳಿ ವಿಜಯಪುರ ಕೆಲವರಿಂದ 30 ಸಾವಿರ ಹಣ ವಂಚಿಸಿದ್ದಾರೆ. ಈಗಲು ಕೂಡ ಪೇಸ್ಬುಕ್‌, ವಾಟ್ಸಾಪ್‌ ಬಳಕೆ ಮಾಡುವ ನೆಟ್ಟಿಗರಿಗೆ ಇಂಥ ಮೆಸೆಜ್‌ ಗಳು ಬರ್ತಿವೆ.. ವಾಟ್ಸಾಪ್‌ ಗಳಿಗೆ ಆಡಿಯೋ ರೆಕಾರ್ಡ್‌ ಕಳಿಸಿ ನೀವು KBC ಯಲ್ಲಿ ವಿನ್‌ ಆಗಿದ್ದೀರಿ ನಿಮ್ಮ ಲಕ್ಷಾಂತರ ರೂಪಾಯಿ ಹಣ ಕಳಿಸಬೇಕು. ಹೀಗಾಗಿ 20-30 ಸಾವಿರ ವರೆಗೆ ಟ್ಯಾಕ್ಸ್‌ ಕಟ್ಟಿ ಅಂತಾ ಯಾಮಾರಿಸುತ್ತಿದ್ದಾರೆ.

Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

ವಿಜಯಪುರ ಎಸ್ಪಿ ಎಚ್ಚರಿಕೆ..!

ಇನ್ನು ಸಾರ್ವಜನಿಕರು ಇಂತಹ ನಕಲಿ ಆನ್ಲೈನ್ (Online) ಶಾಪಿಂಗ್ (Shopping)  ಕಂಪನಿಯ ಆಮಿಷಗಳಿಗೆ ಮಾರು ಹೋಗದೇ ಎಚ್ಚರಿಕೆಯಿಂದ ಇರಬೇಕು ಎಂದು ವಿಜಯಪುರ ಎಸ್ಪಿ (Vijayapur SP)  ಆನಂದಕುಮಾರ್‌ ಹೇಳಿದ್ದಾರೆ. ಆನ್ಲೈನ್ ವಂಚನೆಗಳು (Online Fraud) ಜಾಸ್ತಿಯಾಗ್ತಿವೆ. ಗ್ರಾಹಕರೇ ಹಣ ಕಳೆದುಕೊಳ್ಳದೇ ಖುದ್ದಾಗಿ ವಹಿವಾಟು ಮಾಡಿ. ಆನ್ಲೈನ್ ಶಾಪಿಂಗ್ ಕಂಪನಿ ಹೆಸ್ರಲ್ಲಿ ವಂಚಿಸೋ ಜಾಲ ಸಕ್ರೀಯವಾಗಿದೆ. ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರಿಕೆ ಇರಲಿ. ಆ ಬಳಿಕ ಗಿಫ್ಟ್ ವೋಚರ್ (Gift Voucher) ಸ್ಕ್ರ್ಯಾಚ್ ಕಾರ್ಡ್ ಬಹುಮಾನದ ಆಮಿಷಕ್ಕೆ ಬಲಿಯಾಗದಿರಿ ಎಂದಿದ್ದಾರೆ.

Attempt to Fraud in The Name of Prestigious Company in Vijayapura grg

ವಿಜಯಪುರ ಜಿಲ್ಲಾ ಪೊಲೀಸ್‌ ಹೆಸ್ರಲ್ಲು ವಂಚನೆಗೆ ಯತ್ನ..!

ವಿಜಯಪುರದಲ್ಲಿ ಮೊದಲು ಪ್ರತಿಷ್ಠಿತ ರಾಜಕಾರಣಿಗಳು, ಉದ್ದಿಮೆದಾರರು,ವ್ಯಕ್ತಿಗಳ ಹೆಸ್ರಲ್ಲಿ ನಕಲಿ ಫೇಸ್ಬುಕ್ ಖಾತೆ (FaceBook) ತೆರೆದು ವಂಚನೆಗೆ ಮುಂದಾಗಿದ್ದ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಅದಾದ ಬಳಿಕ ಪೊಲೀಸ್ ಇಲಾಖೆ (Police Department) , ಎಸ್ಪಿ, ಡಿವೈಎಸ್ಪಿ ಸಿಪಿಐ ಹೆಸ್ರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ (Account) ಕ್ರಿಯೇಟ್ ಮಾಡಿ ಹಣ ವಂಚಿಸೋದು ಬೆಳಕಿಗೆ ಬಂದಿತ್ತು. ಸೈಬರ್ (Cyber) ವಂಚಕರು ಅಷ್ಟಕ್ಕೇ ಬಿಡದೇ ಸೈನಿಕರ ಹೆಸ್ರಲ್ಲೂ ವಂಚಿಸೋ ಯತ್ನ ನಡೆದಿತ್ತು. ಇದೀಗ ಪ್ರತಿಷ್ಠಿತ ಆನ್ಲೈನ್ ಶಾಪಿಂಗ್ ಕಂಪನಿ ಹೆಸ್ರಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜನರು ಯಾವುದಕ್ಕು ಆಮೀಷಗಳಿಗೆ ಬಲಿಯಾಗದೇ ಸುರಕ್ಷಿತವಾಗಿ ವ್ಯವಹಾರಗಳನ್ನ ನಡೆಸಬೇಕಿದೆ.
 

Latest Videos
Follow Us:
Download App:
  • android
  • ios