Asianet Suvarna News Asianet Suvarna News

ರಾಮನಗರ: ಪತಿ ಪತ್ನಿ ಜಗಳ ಬಿಡಿಸಿದವನ ಮೇಲೆ ಹಲ್ಲೆ

ಹನುಮಂತನಗರ ಬಡಾವಣೆ ವಾಸಿ ದಿನೇಶ್ ಕೃತ್ಯ ಎಸಗಿದವನು. ಗಾಯಾಳು ವೆಂಕಟೇಶ್ ಸಂಬಂಧಿಕರಾದ ದಿನೇಶ್ ಮತ್ತು ಸೌಮ್ಯ ನಡುವಿನ ಜಗಳ ಬಿಡಿಸಿದ್ದರು. 

Assault on the Person who Stop the Fight Between Wife and Husband in Ramanagara grg
Author
First Published Nov 19, 2023, 8:59 PM IST

ರಾಮನಗರ(ನ.19):  ಪತಿ ಪತ್ನಿ ನಡುವಿನ ಜಗಳ ಬಿಡಿಸಿದ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪ್ರಾಣ ಬೆದರಿಕೆವೊಡ್ಡಿರುವ ಘಟನೆ ನಗರದ ಆರ್ ಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ. ನಗರದ ಅರ್ಚಕರಹಳ್ಳಿ ವಾಸಿ ವೆಂಕಟೇಶ್ (23)ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹನುಮಂತನಗರ ಬಡಾವಣೆ ವಾಸಿ ದಿನೇಶ್ ಕೃತ್ಯ ಎಸಗಿದವನು. ಗಾಯಾಳು ವೆಂಕಟೇಶ್ ಸಂಬಂಧಿಕರಾದ ದಿನೇಶ್ ಮತ್ತು ಸೌಮ್ಯ ನಡುವಿನ ಜಗಳ ಬಿಡಿಸಿದ್ದರು. 

ಸಿಂಧನೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನ ನೇಣು ಬಿಗಿದು ಕೊಲೆ ಮಾಡಿದ ಪಾಪಿ ಗಂಡ..!

ಈ ದ್ವೇಷದ ಹಿನ್ನೆಲೆಯಲ್ಲಿ ಆರ್ ಎಂಸಿ ಮಾರುಕಟ್ಟೆಯಲ್ಲಿ ಕುಳಿತಿದ್ದ ವೆಂಕಟೇಶ್ ಮೇಲೆ ದಿನೇಶ್ ಮಚ್ಚಿನಿಂದ ಏಕಾಏಕಿ ದಾಳಿ ಮಾಡಿದ್ದಾನೆ. ಸ್ಥಳೀಯರು ತಕ್ಷಣ ಗಾಯಾಳನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios