ತೀವ್ರ ಗಾಯಗೊಂಡ ಹಿತೇಶಕುಮಾರನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿತೇಶಕುಮಾರನು ಆರೋಪಿಗಳ ಸಂಬಂಧಿಯೊಬ್ಬರ ಮೇಲೆ ಈಚೆಗೆ ಹಲ್ಲೆ ಮಾಡಿದ್ದ. ಅದೇ ಸಿಟ್ಟಿನಿಂದ ಈ ಹಲ್ಲೆ ನಡೆದಿದೆ. 

ಬೆಳಗಾವಿ(ಅ.05): ವಿಚಾರಣಾಧೀನ‌ ಕೈದಿ ಮೇಲೆ ನಾಲ್ವರ ಗುಂಪಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಂದು(ಶನಿವಾರ) ನಡೆದಿದೆ. 

ಬೆಳಗಾವಿಯ ರಾಮತೀರ್ಥ ನಗರದ ನಿವಾಸಿ ಹಿತೇಶಕುಮಾರ ಚವ್ಹಾಣ್ ಹಲ್ಲೆಗೊಳಗಾದ ವಿಚಾರಣಾಧೀನ‌ ಕೈದಿಯಾಗಿದ್ದಾನೆ. ವಿಚಾರಣಾಧೀನ ಕೈದಿಗಳಾದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯ್ಕ, ಸವಿನ್ ಸಿದ್ದಪ್ಪ ದಡ್ಡಿ, ಪ್ರದಾನಿ ಶೇಖರ ವಾಘಮೋಡೆ ಆರೋಪಿಗಳಾಗಿದ್ದಾರೆ. 

ಹಿಂಡಲಗಾ ಜೈಲಿನಲ್ಲಿ ಕೈದಿಯಿಂದ ಮತ್ತೊಬ್ಬ ಕೈದಿಯ ಕೊಲೆಗೆ ಯತ್ನ: ಆಸ್ಪತ್ರೆಗೆ ದಾಖಲು

ತೀವ್ರ ಗಾಯಗೊಂಡ ಹಿತೇಶಕುಮಾರನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿತೇಶಕುಮಾರನು ಆರೋಪಿಗಳ ಸಂಬಂಧಿಯೊಬ್ಬರ ಮೇಲೆ ಈಚೆಗೆ ಹಲ್ಲೆ ಮಾಡಿದ್ದ. ಅದೇ ಸಿಟ್ಟಿನಿಂದ ಈ ಹಲ್ಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.