ಕುಡಿದ ಮತ್ತಿನಲ್ಲಿ ಎಎಸ್‌ಐ ಮೇಲೆ ಹಲ್ಲೆ ಪ್ರಕರಣ; ಮಾಜಿ ಸಚಿವ ವಿಎಸ್ ಪಾಟೀಲ್ ಪುತ್ರನ ಬಂಧನ
ಕುಡಿದ ಮತ್ತಿನಲ್ಲಿ ಎಎಸ್‌ಐ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದನೆ ಹಾಗೂ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಶಾಸಕ ವಿಎಸ್ ಪಾಟೀಲ್ ಪುತ್ರನನ್ನು ಬಂಧಿಸಿದ ಪೊಲೀಸರು.
ಕಾರವಾರ,ಉತ್ತರಕನ್ನಡ (ಫೆ.4) ಕುಡಿದ ಮತ್ತಿನಲ್ಲಿ ಎಎಸ್‌ಐ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದನೆ ಹಾಗೂ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಶಾಸಕ ವಿಎಸ್ ಪಾಟೀಲ್ ಪುತ್ರನನ್ನು ಬಂಧಿಸಿದ ಪೊಲೀಸರು.
ಬಾಪುಗೌಡ ಪಾಟೀಲ್(40) ಬಂಧಿತ ಆರೋಪಿ. ಕುಡಿದ ಮತ್ತಿನಲ್ಲಿ ಎಎಸ್‌ಐ ಬಾಲಕೃಷ್ಣ ಪಾಲೇಕರ್ ಎಂಬವರಿಗೆ ಹಲ್ಲೆ ನಡೆಸಿ,ಅವಾಚ್ಯವಾಗಿ ನಿಂದಿಸಿದ್ದ ಆರೋಪಿ.
ಸದ್ಯ ಶಿರಸಿ ಸಬ್ ಜೈಲ್‌ನಲ್ಲಿರುವ ಮಾಜಿ ಶಾಸಕ ಪುತ್ರ ಬಾಪು ಗೌಡ ಪಾಟೀಲ್
ಸಂಬಳ ಕೇಳಿದ್ದಕ್ಕೆ ಕಾರ್ಮಿಕನಿಗೆ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಹೋಟೆಲ್ ಮಾಲೀಕ!
ಘಟನೆ ಹಿನ್ನೆಲೆ:
2011ರಲ್ಲಿ ಪೊಲೀಸರು ಬಾಪು ಗೌಡಗೆ ಸಂಬಂಧಿಸಿದ ವಾಹನ ಹಿಡಿದಿದ್ದ ಸಂಬಂಧ ಮುಂಡಗೋಡ ಐಬಿಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಬಾಪು ಗೌಡ ಪಾಟೀಲ್ ಹಾಗೂ ಆತನ 15 ಮಂದಿ ಸಹಚರರು ಎಎಸ್‌ಐ ಅವರನ್ನು ದೂಡಿ, ಹಲ್ಲೆ ನಡೆಸಿದ್ದರು. ಎಎಸ್‌ಐ ಬಾಲಕೃಷ್ಣ ತನ್ನ ಕರೆ ಸ್ವೀಕರಿಸಲಿಲ್ಲವೆಂಬ ಕಾರಣಕ್ಕೆ ಜೀವ ಬೆದರಿಕೆಯೊಡ್ಡಿದ್ದರು. ಈ ಘಟನೆ ಹಿನ್ನೆಲೆ ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141,143, 147, 323, 353, 504, 506,149ನಡಿ ಪ್ರಕರಣ ದಾಖಲಾಗಿತ್ತು.
ಯಾದಗಿರಿ: ಬಡವರ ಅಕ್ಕಿ ಕಾಳಸಂತೆಯ ಪಾಲು; ಪಡಿತರ ಕಳ್ಳಸಾಗಣೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲ
ಪ್ರಕರಣ ಸಂಬಂಧಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರೊಂದಿಗೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲೂ ಬಾಪು ಗೌಡ ಪಾಟೀಲ್ ಆರೋಪಿಯಾಗಿದ್ದ. ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಪ್ರತೀ ಪ್ರಕರಣದಲ್ಲೂ ಮೂರು ಮೂರು ಬಾರಿ ವಾರೆಂಟ್ ಹೊರಡಿಸಿದ್ರೂ ಹಾಜರಾಗದ ಬಾಪು ಗೌಡ ಕಳೆದ ಆರು ತಿಂಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ. ಇವನೊಂದಿಗಿದ್ದ 14 ಮಂದಿ ಗೆಳೆಯರು ಕೋರ್ಟ್‌ಗೆ ಹಾಜರಾದ್ರೂ ಬಾಪು ಗೌಡ ಮಾತ್ರ ಹಾಜರಾಗಿರಲಿಲ್ಲ. ಬೆಂಗಳೂರಿನಲ್ಲಿದ್ದುಕೊಂಡೇ ವಾರೆಂಟ್ ನೋಟೀಸ್ ಅನ್ನು ಕೂಡಾ ನಿರ್ಲಕ್ಷಿಸಿದ್ದ. ಹೀಗಾಗಿ ನಿನ್ನೆಲೆ ಬೆಂಗಳೂರಿನಲ್ಲಿ ಬಂಧಿಸಿ ಅಲ್ಲಿಂದ ಕರೆದುಕೊಂಡ ಬಂದು ತಡರಾತ್ರಿ 10 ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು. ವಿಚಾರಣೆ ನಡೆಸಿದ ಮುಂಡಗೋಡ ಜೆಎಂಎಫ್‌ಸಿ ಕೋರ್ಟ್ ಆರೋಪಿ ಬಾಪುಗೌಡ ಪಾಟೀಲ್‌ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.