Asianet Suvarna News Asianet Suvarna News

ಹಣವಿಲ್ಲದ್ದರೂ ಆಪಲ್‌ ಮೊಬೈಲ್ ಆರ್ಡರ್: ಡೆಲಿವರಿ ಬಾಯ್‌ನನ್ನು ಕೊಲೆ ಮಾಡಿ ಪಾರ್ಸೆಲ್‌ ಕಿತ್ತುಕೊಂಡ ಗ್ರಾಹಕ

ಹಣ ಇಲ್ಲದಿದ್ದರೂ ಆನ್‌ಲೈನ್‌ಲ್ಲಿ ದುಬಾರಿ ಬೆಲೆಯ ಆಪಲ್‌ ಫೋನ್‌ ಆರ್ಡರ್‌ 
ಡೆಲಿವರಿ ಬಾಯ್‌ ಪಾರ್ಸಲ್‌ ಕೊಡಲು ಬಂದಾಗ ಕೊಲೆ ಮಾಡಿ ಮೊಬೈಲ್‌ ಪಡೆದ ಗ್ರಾಹಕ
ಮನೆಯಲ್ಲಿ ಕೊಲೆ ಮಾಡಿ, ಮೂರು ದಿನ ಶವ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟ ಆರೋಪಿ

Apple mobile order despite no money Customer who stole the parcel after killing the delivery boy sat
Author
First Published Feb 19, 2023, 12:35 PM IST

ಹಾಸನ (ಫೆ.19): ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮನೆಗೆ ಪಾರ್ಸಲ್‌ ನೀಡಲು ಬಂದ ಡೆಲಿವರಿ ಬಾಯ್‌ನನ್ನೇ ತನ್ನ ಬಳಿ ಹಣವಿಲ್ಲದಿದ್ದರೂ ಪಾರ್ಸಲ್‌ ಕೊಡುವಂತೆ ಒತ್ತಾಯಿಸಿ ಕೊಲೆ ಮಾಡಿರುವ ಘಟನೆ ಕಳೆದ 10 ದಿನಗಳ ಹಿಂದೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.

ತನ್ನ ಬಳಿ ಹಣವಿಲ್ಲದಿದ್ದರೂ ಆನ್‌ಲೈನ್‌ನಲ್ಲಿ ಮೊಬೈಲ್‌ ಒಂದನ್ನು ಖರೀದಿಸಿ ಕ್ಯಾಶ್‌ ಆನ್‌ ಡೆಲಿವರಿ (Cash on delivery) ಆಧಾರದಲ್ಲಿ ಆರ್ಡರ್‌ ಮಾಡಿದ್ದಾನೆ. ಇನ್ನು ಆನ್‌ಲೈನ್‌ನಲ್ಲಿ ಬುಕಿಂಗ್‌ (Online Booking) ಮಾಡಿದ ಪಾರ್ಸಲ್‌ ಅನ್ನು ಮನೆಗೆ ತಲುಪಿಸಲು ಡೆಲಿವರಿ ಬಾಯ್‌ (Delivery Boy) ಗ್ರಾಹಕರ ಮನೆಯ ಬಳಿ ಹೋಗಿದ್ದಾನೆ. ಈ ವೇಳೆ ತನ್ನ ಬಳಿ ಮೊಬೈಲ್‌ ಖರೀದಿಗೆ ಹಣವಿಲ್ಲ. ನನ್ನ ಹೆಸರಿಗೆ ಬಂದಿರುವ ಪಾರ್ಸೆಲ್‌ (Pacel) ಕೊಟ್ಟು ಹೋಗುವಂತೆ ಡೆಲಿವರಿ ಬಾಯ್‌ಗೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಪಾರ್ಸಲ್‌ ಕೊಡದ ಡೆಲಿವರಿ ಬಾಯ್‌ನನ್ನು ಮೋಸದಿಂದಲೆ ಮನೆಯಲ್ಲಿಯೇ ಚಾಕು ಇರಿದು ಕೊಲೆ (Murder) ಮಾಡಿರುವ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ಕ್ರಿಕೆಟ್‌ ಪಂದ್ಯಾವಳಿ ವೇಳೆ ಇಬ್ಬರನ್ನು ಕೊಲೆ ಮಾಡಿದ್ದ ಹಂತಕರು ಅರೆಸ್ಟ್‌: ಪೊಲೀಸರಿಂದ ಶೂಟೌಟ್‌

ಅರಸೀಕೆರೆ ‌ನಗರದಲ್ಲಿ ಫೆ.7 ರಂದು ಘಟನೆ ನಡೆದಿದೆ. ಅರಸೀಕೆರೆ ತಾಲೂಕು ಹಳೆಕಲ್ಲನಾಯಕನಹಳ್ಳಿಯ ಹೇಮಂತ್ ನಾಯ್ಕ್ (23) ಕೊಲೆಯಾದ ಡೆಲಿವರಿ ಬಾಯ್‌ ಆಗಿದ್ದಾನೆ. ಅರಸೀಕೆರೆ ನಗರ ಲಕ್ಷ್ಮೀಪುರದ ಹೇಮಂತ್‌ ದತ್ತ (20) ಎಂಬಾತನಿಂದ ಕೊಲೆಯ ಕೃತ್ಯ ನಡೆದಿದೆ. ಇನ್ನು ಡೆಲಿವರಿ ಬಾಯ್ ಹೇಮಂತ್‌ನಾಯ್ಕನನ್ನು (Hemanth Nayka) ಕೊಂದು ಬರೋಬ್ಬರಿ 3 ದಿನ ಮನೆಯಲ್ಲೇ ಶವ ಇಟ್ಟುಕೊಂಡಿದ್ದನು. ಈ ಕಾರ್ಟ್ ಎಕ್ಸಪ್ರೆಸ್‌ನಲ್ಲಿ (E-cart Express) ಕೆಲಸ ಮಾಡುತ್ತಿದ್ದ ಹೇಮಂತ್ ನಾಯ್ಕ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ದೂರು ನೀಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಶಾಕಿಂಗ್‌ ನ್ಯೂಸ್‌ ಪತ್ತೆಯಾಗಿದೆ.

ಹಿಂದಿನಿಂದ ಚಾಕು ಚುಚ್ಚಿದ ಆರೋಪಿ:  ಈ ಕಾರ್ಟ್‌ನಲ್ಲಿ ಸೆಕಂಡ್ ಹ್ಯಾಂಡ್ ಆಪಲ್ ಮೊಬೈಲ್ (Apple Mobile) ಅನ್ನು ಹೇಮಂತ್ ದತ್ತ ಬುಕ್‌ ಮಾಡಿದ್ದನು. ಇದನ್ನು ಇ-ಕಾರ್ಟ್ ನಿಂದ ಡೆಲಿವರಿ ಮಾಡಲು ಹೋಗಿದ್ದ ಹೇಮಂತ ನಾಯ್ಕ ಮನೆಯ ಬಳಿ ಹೋಗಿದ್ದನು. ಈ ವೇಳೆ ಹಣ ತರುತ್ತೇನೆ ಇಲ್ಲೆ ಕುಳಿತಿರು ಎಂದು ಒಳ ಹೋಗಿದ್ದ ಹೇಮಂತ್ ದತ್ತ (Hemanth Datta) ಮನೆಯಲ್ಲಿ ಕುಳಿತಿದ್ದ ಹೇಮಂತ್ ನಾಯ್ಕನ ಮೇಲೆ ಹಿಂದಿನಿಂದ ಬಂದು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಡೆಲಿವರಿ ಬಾಯ್‌ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಹೇಮಂತ್ ನಾಯ್ಕನ ಶವವನ್ನು ಮೂರು ದಿನ ಮನೆಯಲ್ಲೇ ಇಟ್ಟುಕೊಂಡಿದ್ದಾನೆ.

ಪೆಟ್ರೋಲ್‌ಹಾಕಿ ಮೃತದೇಹ ಸುಟ್ಟಿದ್ದನು: ಮನೆಯ ಫ್ರಿಡ್ಜ್‌ನಲ್ಲಿ ಮೂರು ದಿನ ಶವ ಇಟ್ಟುಕೊಂಡ ನಂತರ ಫೆ.11 ರಂದು ಮೃತದೇಹವನ್ನು ತನ್ನ ಸ್ಕೂಟರ್‌ನಲ್ಲಿ (Scooter) ಇಟ್ಟುಕೊಂಡು ಹೊರಹಾಕಲು ತೆರಳಿದ್ದನು. ಗೋಣಿಚೀಲದಲ್ಲಿ ಶವ ತುಂಬಿಕೊಂಡು ತನ್ನ ಸ್ಕೂಟರ್‌ನಲ್ಲಿ ಹೋಗಿದ್ದನು. ಅರಸೀಕೆರೆ ‌ನಗರದ ಹೊರ ವಲಯದ ಅಂಚೆ ಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಮೃತ ದೇಹವನ್ನು ಸುಟ್ಟು ಹಾಕಿದ್ದನು. ಪೆಟ್ರೋಲ್‌ಹಾಕಿ ಮೃತದೇಹ ಸುಟ್ಟಿದ್ದನು. ಇನ್ನು ಮೃತದೇಹವನ್ನ ಸ್ಕೂಟಿಯಲ್ಲಿ ಹೊತ್ತು ಸಾಗುವ ಮತ್ತು ಸುಡಲು ಪೆಟ್ರೋಲ್ (Petrol) ಖರೀದಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಹಿಂದುಗಳನ್ನು ಕೊಲೆ ಮಾಡಿದವರನ್ನು ಸನ್ಮಾನಿಸುವುದೇ ಇಸ್ಲಾಂ ಸಂಸ್ಕೃತಿ: ಪ್ರಮೋದ್‌ ಮುತಾಲಿಕ್ ಆರೋಪ

ಹರೆಯದ ವಯಸ್ಸಿನಲ್ಲಿಯೇ ಕೊಲೆ ಮಾಡಿ ಶವವನ್ನು ಬಚ್ಚಿಟ್ಟು, ನಂತರ ಸುಟ್ಟು ಹಾಕಿರುವ ಘಟನೆಯನ್ನು ನೋಡಿದ ಮತ್ತು ಕೇಳಿದ ಅರಸೀಕೆರೆ ಪಟ್ಟಣ (Arasikere Town) ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಈ ಕಿರಾತಕನ ಕೃತ್ಯಕ್ಕೆ ಏನೂ ಅರಿಯದ ಡೆಲಿವರಿ ಬಾಯ್ ಹೇಮಂತ್ ನಾಯ್ಕ್ ಬಲಿಯಾಗಿದ್ದಾನೆ. ಕೊಲೆ ಪಾತಕಿ ಪಾಪಿ ಹೇಮಂತ್ ದತ್ತನನ್ನು ಬಂಧಿಸಿ ಹಾಸನ ಪೊಲೀಸರು ಜೈಲಿಗಟ್ಟಿದ್ದಾರೆ. 

Follow Us:
Download App:
  • android
  • ios