ಮಂಡ್ಯ (ಜ.  18) ಮಂಡ್ಯದಲ್ಲಿ ಎಸಿಬಿ ಬಲೆಗೆ ಮಹಿಳಾ ಅಧಿಕಾರಿ ಬಿದ್ದಿದ್ದಾರೆ. ಕಚೇರಿಯಲ್ಲೇ 25 ಸಾವಿರ ರೂ ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಅಧೀಕ್ಷಕಿ ವಿಜಯ ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ. ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು, ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳ  ಕಛೇರಿ ಅಧೀಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು

ಹೊರ ಗುತ್ತಿಗೆ ಆಧಾರದಲ್ಲಿ 4ನೇ ದರ್ಜೆ ಹುದ್ದೆಗೆ ಆರ್ಡರ್ ಕಾಪಿ ನೀಡಲು 25ಸಾವಿರ ರೂ ಬೇಡಿಕೆ ಇಟ್ಟಿದ್ದ ಅಧಿಕಾರಿ ಸೆರೆಯಾಗಿದ್ದಾರೆ. ಮಹದೇವಯ್ಯ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಎಸಿಬಿಗೆ ದೂರು ಮಹದೇವಯ್ಯ ದೂರು ನೀಡಿದ್ದರು. 

ಭ್ರಷ್ಟಾಚಾರ ನಿಗ್ರಹ ದಳ ಠಾಣೆ ಪ್ರಭಾರ ಪೊಲೀಸ್ ಉಪ ಅಧೀಕ್ಷಕ ಪರಶುರಾಮಪ್ಪ, ಪೊಲೀಸ್ ನಿರೀಕ್ಷಕ ಸತೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.  
ಬಂಧಿತ ಅಧಿಕಾರಿ ವಿಜಯ ಅವರಿಂದ 25ಸಾವಿರ ಲಂಚದ ಹಣ ವಶಕ್ಕೆ ಪಡೆಯಲಾಗಿದೆ.